ಬೆಂಗಳೂರಿನ ಗ್ರಾಹಕರೇ ಗಮನಿಸಿ; ಮಂಗಳವಾರವೂ ಈ ಏರಿಯಾಗಳಲ್ಲಿ ಇರಲ್ಲ ಪವರ್

ಸೆಪ್ಟೆಂಬರ್ 21, 2025 - 10:46
 0  28
ಬೆಂಗಳೂರಿನ ಗ್ರಾಹಕರೇ ಗಮನಿಸಿ; ಮಂಗಳವಾರವೂ ಈ ಏರಿಯಾಗಳಲ್ಲಿ ಇರಲ್ಲ ಪವರ್

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಏರಿಯಾ ಗಳಲ್ಲಿ ಮಂಗಳವಾರವೂ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿವೆ. ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗ್ಳೂರು ನಗರದ ಹಲವೆಡೆ ಸೆ.23 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. 

ಕಾವಲ್ಬೈರಸಂದ್ರ, ಎಲ್‌ಆರ್ ಬಂಡೆ ಮುಖ್ಯರಸ್ತೆ, ಗಾಂಧಿನಗರ, ಚಿನ್ನಣ್ಣ ಲೇಔಟ್, ಅಂಬೇಡ್ಕರ್ ಲೇಔಟ್, ಅನ್ವರ್ ಲೇಔಟ್, ಕಾವೇರಿ ನಗರ, ಅಂಬೇಡ್ಕರ್ ವೈದ್ಯಕೀಯ ಕಾಲೇಜು, ಸುಲ್ತಾನ್ ಪಾಳ್ಯ, ರಂಕಾನಗರ, ಕನಕನಗರ, ಕೆಎಚ್‌ಬಿ ಮುಖ್ಯರಸ್ತೆ, ಭುವನೇಶ್ವರಿ ನಗರ, ಮಠಾಧೀಶ ಸಭಾಂಗಣ,

ಮಠಾಧೀಶ ಸಭಾಂಗಣ ನಗರ, ವಿ ನಾಗೇನಹಳ್ಳಿ, ಪೆರಿಯಾರ್ ನಗರ, ಪೆರಿಯಾರ್ ವೃತ್ತ, ಶಂಪುರ, ಕುಶಾಲ್ ನಗರ, ಮೋದಿ ರಸ್ತೆ, ಮೋದಿ ಉದ್ಯಾನ, ದೊಡ್ಡಣ್ಣ ನಗರ, ಮುನಿವೀರಪ್ಪ ಲೇಔಟ್, ಸಕ್ಕರೆ ಮಂಡಿ, ಉಪ್ಪಿನ ಮಂಡಿ, ಮುನೇಶ್ವರ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow