ಬೇಡಿಕೆ ಹೆಚ್ಚಾಯ್ತು: ಸಿನಿಮಾ ಆಫರ್ ರಿಜೆಕ್ಟ್ ಮಾಡಿದ ಹನುಮಂತ! ಏನ್ ಬದಲಾವಣೆ ಎಂದ ನೆಟ್ಟಿಗರು!

ತನ್ನ ಮಗ್ದತೆಯಿಂದಲೇ ಜನರ ಗಮನ ಸೆಳೆದು ಬಿಗ್ ಬಾಸ್ ಸೀಸನ್ 11ರ ಟ್ರೋಫಿ ಎತ್ತಿರುವ ಹನುಮಂತ ಈಗ ಸಖತ್ ಬ್ಯೂಸಿ ಆಗಿದ್ದಾರೆ. ಒಂದರ ಮೇಲೊಂದರಂತೆ ಆಫರ್ ಗಳು ಹರಿದು ಬರುತ್ತಿದೆ.
ಅಷ್ಟೇ ಅಲ್ಲ ಹನುಮಂತಗೆ ಸಿನಿಮಾ ಆಫರ್ಗಳು ಅರಸಿ ಬರುತ್ತಿವೆ. ಬಿಗ್ ಬಾಸ್ ಶೋ ಬಳಿಕ ಹನುಮಂತಗೆ ಬೇಡಿಕೆ ಹೆಚ್ಚಾಗಿದ್ದು, ಸಿನಿಮಾಗೆ ನೋ ಎಂದಿದ್ದಾರೆ. ಬಿಗ್ ಬಾಸ್ನಲ್ಲಿ ಗೆದ್ದ ಬಳಿಕ ಹನುಮಂತಗೆ ಸಿನಿಮಾ ಆಫರ್ಗಳ ಸುರಿಮಳೆ ಹರಿದು ಬರುತ್ತಿದೆ. ಆದರೆ ಕಿರುತೆರೆ ಹೊರತು ಸಿನಿಮಾ ಸಹವಾಸವೇ ಬೇಡವೆಂಬ ತೀರ್ಮಾನಕ್ಕೆ ಬಂದಿದ್ದಾರೆ ಹನುಮಂತ. ಒಂದಾದ್ಮೇಲೊಂದು ರಿಯಾಲಿಟಿ ಶೋ ಮಾಡ್ತಿರುವ ಹನುಮಂತ ಟಿವಿ ಮೂಲಕ ಜನರ ಪ್ರೀತಿ ಗಳಿಸುವ ನಿಟ್ಟಿನಲ್ಲಿದ್ದಾರೆ.
ದೊಡ್ಮನೆಯಿಂದ ಹೊರ ಬಂದಾದ್ಮೇಲೆ ಮದುವೆ ಹಾಗೂ ಮನೆ ಕಟ್ಟಬೇಕು ಎಂದು ಪ್ಲ್ಯಾನ್ ಮಾಡಿದ್ದಾರೆ. ಕುಟುಂಬಕ್ಕೆ ಹೆಚ್ಚು ಗಮನ ನೀಡುತ್ತಿದ್ದಾರೆ. ಹೀಗಾಗಿ ಸಿನಿಮಾ ಆಫರ್ಗಳು ಬಂದರೂ ಸಹ ಹನುಮಂತ ಡೋಂಟ್ ಕೇರ್ ಎಂದಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






