ಬೇಬಿ ಬಂಪ್ ಲುಕ್ʼನಲ್ಲೇ ಬಾಲಿವುಡ್ ಸ್ಟಾರ್ ಮಿಂಚಿಂಗ್: ಕಿಯಾರಾ ಅಡ್ವಾಣಿ ಫೋಟೋಸ್ ವೈರಲ್!

ಬಾಲಿವುಡ್ ಸ್ಟಾರ್ ನಟಿ ಕಿಯಾರಾ ಅಡ್ವಾಣಿ ಅವರ ಬೇಬಿ ಬಂಬ್ ಶೂಟಿಂಗ್ ಫೋಟೋಸ್ ಭಾರೀ ವೈರಲ್ ಆಗಿದೆ. ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅಮ್ಮನಾಗ್ತಿರೋ ಸಂತಸದಲ್ಲಿದ್ದಾರೆ. ಇದೇ ಖುಷಿಯಲ್ಲಿ ಅವರು ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ನಡೆದ ಮೆಟ್ ಗಾಲಾ ಫ್ಯಾಷನ್ ಹಬ್ಬದಲ್ಲಿ ಭಾಗಿಯಾಗಿದ್ದಾರೆ.
ಈ ಬಾರಿಯ ಮೆಟ್ ಗಾಲಾ 2025 ಫ್ಯಾಷನ್ ಹಬ್ಬಕ್ಕೆ ಮತ್ತಷ್ಟೂ ಮೆರಗು ತಂದಿದ್ದು ಎಂದ್ರೆ ಅದು ಕಿಯಾರಾ ಅಡ್ವಾಣಿ. ಮೊನ್ನೆಯಷ್ಟೇ ನಟಿ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರ ದಂಪತಿ ಅಭಿಮಾನಿಗಳಿಗೆ ಗುಡ್ನ್ಯೂಸ್ ಕಟ್ಟಿದ್ದರು
ಸದ್ಯ ನಟಿ ಕಿಯಾರಾ ತಮ್ಮ ಮೊದಲ ಮಗುವಿನ ನಿರೀಕ್ಷೆಯದ್ದಾರೆ. ಇದೇ ಖುಷಿಯಲ್ಲಿದ್ದ ನಟಿ ಕಿಯಾರಾ ತಮ್ಮ ಬೇಬಿ ಬಂಪ್ ಜೊತೆ ಮೆಟ್ ಗಾಲಾಗೆ ಆಗಮಿಸಿದ್ದಾರೆ. ಗರ್ಭಿಣಿ ಆಗಿಯೇ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಇದೇ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಪ್ರೆಗ್ನೆಂಟ್ ಆಗಿರೋ ನಟಿ ಅಂದದ ಬಗ್ಗೆ ಅಭಿಮಾನಿಗಳು ಕಾಮೆಂಟ್ಸ್ ಹಾಕುವ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸದ್ಯ ನಟಿ ಕಿಯಾರಾ ಅಡ್ವಾಣಿ ನಟ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






