IPL 2025: RCB ಪ್ಲೇಆಫ್​ ಪ್ರವೇಶಿಸಲು ಮುಂದಿನ ಪಂದ್ಯಗಳು ನಿರ್ಣಾಯಕ.. ಗೆಲ್ಲಲೇಬೇಕಾದ ಸ್ಥಿತಿ!

ಮೇ 8, 2025 - 09:09
 0  25
IPL 2025: RCB ಪ್ಲೇಆಫ್​ ಪ್ರವೇಶಿಸಲು ಮುಂದಿನ ಪಂದ್ಯಗಳು ನಿರ್ಣಾಯಕ.. ಗೆಲ್ಲಲೇಬೇಕಾದ ಸ್ಥಿತಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2025ರ ಸೀಸನ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಪ್ಲೇ ಆಫ್ ಸನಿಹದಲ್ಲಿದೆ. ಆಡಿರುವ 11 ಪಂದ್ಯದಲ್ಲಿ ಕೇವಲ 3 ರಲ್ಲಿ ಸೋತಿರುವ RCB, ಅತ್ಯದ್ಭುತ ಫಾರ್ಮ್ ನಲ್ಲಿದೆ. 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಕಾಣಿಸಿಕೊಳ್ಳಬೇಕಿದ್ದರೆ ಮುಂದಿನ ಮೂರು ಮ್ಯಾಚ್​ಗಳಲ್ಲೂ ಜಯಗಳಿಸಬೇಕು. ಏಕೆಂದರೆ ಅತ್ತ ಗುಜರಾತ್ ಟೈಟಾನ್ಸ್ ತಂಡ ಮುಂದಿನ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ ಒಟ್ಟು 22 ಅಂಕಗಳನ್ನು ಪಡೆಯಲಿದೆ.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ 22 ಪಾಯಿಂಟ್ಸ್​ನೊಂದಿಗೆ ಟಾಪ್-1 ಅಥವಾ ಟಾಪ್-2 ನಲ್ಲಿ ಕಾಣಿಸಿಕೊಳ್ಳಬಹುದು. ಒಂದು ವೇಳೆ ಮೂರು ಮ್ಯಾಚ್​ಗಳಲ್ಲಿ ಒಂದು ಸೋಲನುಭವಿಸಿದರೆ ಆರ್​ಸಿಬಿ ತಂಡದ ಪಾಯಿಂಟ್ಸ್​ 20 ರಲ್ಲಿ ಉಳಿಯಲಿದೆ.

ಅತ್ತ ಪಂಜಾಬ್ ಕಿಂಗ್ಸ್ ತಂಡವು ಮುಂದಿನ ಮೂರು ಪಂದ್ಯಗಳಲ್ಲಿ ಜಯಗಳಿಸಿದರೆ 21 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಬಹುದು. ಇದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಲಿಮಿನೇಟರ್ ಪಂದ್ಯವನ್ನು ಆಡಬೇಕಾಗಿ ಬರಬಹುದು

ಅಂದರೆ ಐಪಿಎಲ್ ಪ್ಲೇಆಫ್ ನಿಯಮದ ಪ್ರಕಾರ, ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್​ಗೆ ತಲುಪಲಿದೆ. ಇನ್ನು ಸೋತ ತಂಡಕ್ಕೆ ಎರಡನೇ ಕ್ವಾಲಿಫೈಯರ್ ಪಂದ್ಯವಾಡಲು ಅವಕಾಶ ದೊರೆಯುತ್ತದೆ. ಈ ಮ್ಯಾಚ್​ನಲ್ಲಿ ಗೆದ್ದು ಫೈನಲ್​ಗೇರಬಹುದು.

ಹಾಗೆಯೇ ಅಂಕ ಪಟ್ಟಿಯಲ್ಲಿ 3ನೇ ಮತ್ತು 4ನೇ ಸ್ಥಾನಗಳನ್ನು ಅಲಂಕರಿಸುವ ತಂಡಗಳು ಪ್ಲೇಆಫ್​ನಲ್ಲಿ ಎಲಿಮಿನೇಟರ್ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ. ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದರೆ ಮಾತ್ರ ಫೈನಲ್​ಗೇರಬಹುದು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow