ಟ್ರೋಲ್‌ʼಗೆ ಡೋಂಟ್ ಕೇರ್: ಒಂದು ತಿಂಗಳಿಗೆ ನಟಿ ನಿವೇದಿತಾ ಗೌಡ ಮಾಡುವ ಖರ್ಚು ಎಷ್ಟು ಗೊತ್ತಾ..?

ಅಕ್ಟೋಬರ್ 17, 2025 - 20:13
ಅಕ್ಟೋಬರ್ 17, 2025 - 13:32
 0  18
ಟ್ರೋಲ್‌ʼಗೆ ಡೋಂಟ್ ಕೇರ್:  ಒಂದು ತಿಂಗಳಿಗೆ ನಟಿ ನಿವೇದಿತಾ ಗೌಡ ಮಾಡುವ ಖರ್ಚು ಎಷ್ಟು ಗೊತ್ತಾ..?

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಟಿ ನಿವೇದಿತಾ ಗೌಡ ತಮ್ಮ ಆದಾಯ ಮತ್ತು ಖರ್ಚಿನ ಕುರಿತು ಮೊದಲ ಬಾರಿಗೆ ಬಾಯಿಬಿಟ್ಟಿದ್ದಾರೆ. ವೈಭೋಗದ ಜೀವನ ನಡೆಸುತ್ತಿರುವ ನಿವೇದಿತಾಗೆ ತಿಂಗಳಿಗೆ ಎಷ್ಟು ಆದಾಯ ಬರುತ್ತದೆ ಎಂಬ ಪ್ರಶ್ನೆ ಅನೇಕ ಅಭಿಮಾನಿಗಳನ್ನು ಕಾಡುತ್ತಿತ್ತು.

ಸೋಶಿಯಲ್ ಮೀಡಿಯಾವೇ ನಿವೇದಿತಾ ಪ್ರಮುಖ ಆದಾಯದ ಮೂಲವಾಗಿದೆ. ಬ್ರ್ಯಾಂಡ್ ಪ್ರಮೊಷನ್‌ಗಳು, ಜಾಹೀರಾತುಗಳು ಹಾಗೂ ರೀಲ್ಸ್‌ಗಳ ಮೂಲಕ ತಿಂಗಳಿಗೆ ಲಕ್ಷಕ್ಕೂ ಹೆಚ್ಚು ರೂಪಾಯಿ ಗಳಿಸುತ್ತಾರೆ. ಪ್ರತಿ ರೀಲ್ಸ್‌ಗೂ ನಿಗದಿತ ಪ್ರಮಾಣದ ಪಾವತಿ ದೊರೆಯುತ್ತದೆ ಎಂದು ನಿವೇದಿತಾ ಗೌಡ ತಿಳಿಸಿದ್ದಾರೆ.

ಆದಾಯದ ಜೊತೆಗೆ ಖರ್ಚು ಕೂಡಾ ನಿವೇದಿತಾ ಜೀವನದ ಭಾಗವಾಗಿದೆ. ಲೆಕ್ಕ ಇಟ್ಟುಕೊಂಡು ಖರ್ಚು ಮಾಡುವ ಅಭ್ಯಾಸವಿಲ್ಲದ ನಿವೇದಿತಾ, ಖಾಯಂ ಆದಾಯ ಮತ್ತು ಖಾಯಂ ಖರ್ಚು ಇರುವುದು ನಿಜವಾದರೂ, ಅದರ ನಿಖರ ಮೊತ್ತವನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ಹೆಚ್ಚಿನ ಆದಾಯ ಬಂದಾಗ ನಿವೇದಿತಾ ಪ್ರವಾಸಕ್ಕೆ ತೆರಳುತ್ತಾರೆ. ತಮ್ಮ ಅಗತ್ಯಗಳಿಗೆ ಯಾರ ಮೇಲೂ ಅವಲಂಬಿತರಾಗದೆ ಖರ್ಚು ಮಾಡುವುದು ತಮ್ಮ ಪದ್ದತಿಯಾಗಿದೆ ಎಂದು ಹೇಳಿದ್ದಾರೆ. ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಿಂದಲೇ ನಿವೇದಿತಾ ಗೌಡ ಐಶಾರಾಮಿ ಜೀವನ ನಡೆಸುತ್ತಿದ್ದು, ತಿಂಗಳಿಗೆ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುವುದಾಗಿ ತಿಳಿದುಬಂದಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow