ಇಡ್ಲಿ–ದೋಸೆ ಹಿಟ್ಟು ಬೇಗ ಹುಳಿಯಾಗ್ತಿದೆಯಾ? ಒಂದು ಚಮಚ ಇದನ್ನ ಮಿಕ್ಸ್ ಮಾಡಿದ್ರೆ ಸಾಕು!

ಅಕ್ಟೋಬರ್ 17, 2025 - 06:58
 0  17
ಇಡ್ಲಿ–ದೋಸೆ ಹಿಟ್ಟು ಬೇಗ ಹುಳಿಯಾಗ್ತಿದೆಯಾ? ಒಂದು ಚಮಚ ಇದನ್ನ ಮಿಕ್ಸ್ ಮಾಡಿದ್ರೆ ಸಾಕು!

ದಕ್ಷಿಣ ಭಾರತದಲ್ಲಿ ಇಡ್ಲಿ ಮತ್ತು ದೋಸೆ ಅಂದರೆ ಎಲ್ಲರಿಗೂ ಪ್ರಿಯ ತಿಂಡಿ. ಬೆಳಗಿನ ಉಪಹಾರದಿಂದ ಆಫೀಸ್ ಲಂಚ್‌ವರೆಗೂ ಎಲ್ಲರ ಮೆಚ್ಚಿನ ಆಯ್ಕೆ. ಆದರೆ ಒಂದು ಸಮಸ್ಯೆ ಎಲ್ಲ ಮನೆಗಳಲ್ಲೂ ಒಂದೇ — “ಹಿಟ್ಟು ಬೇಗ ಹುಳಿಯಾಗ್ತಿದೆ!” 

ಹೌದು, ಹವಾಮಾನ ಬದಲಾವಣೆ ಅಥವಾ ಫ್ರಿಜ್ ಸಮಸ್ಯೆ ಇದ್ದರೆ ಹಿಟ್ಟು ಬೇಗ ಹುಳಿಯಾಗುವುದು ಸಹಜ. ಆದರೆ ಚಿಂತೆ ಬೇಡ, ಇಂದಿನಿಂದ ಹಿಟ್ಟು ಹುಳಿಯಾದ್ರೂ ಕಸದ ಬುಟ್ಟಿಗೆ ಹೋಗೋದಿಲ್ಲ — ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ ನೋಡಿ 

 ಶುಂಠಿ + ಹಸಿ ಮೆಣಸಿನಕಾಯಿ ಪೇಸ್ಟ್:
ಸ್ವಲ್ಪ ಶುಂಠಿ ಮತ್ತು ಹಸಿ ಮೆಣಸಿನಕಾಯಿಗಳನ್ನು ಮಿಕ್ಸಿ ಮಾಡಿ ಹಿಟ್ಟಿಗೆ ಸೇರಿಸಿ. ಇದು ಹುಳಿ ರುಚಿಯನ್ನು ಕಡಿಮೆ ಮಾಡುತ್ತೆ ಮತ್ತು ಹೊಸ ರುಚಿ ಕೊಡುತ್ತೆ.

ಸಕ್ಕರೆ ಅಥವಾ ಬೆಲ್ಲ:
ಹುಳಿಯಾದ ಹಿಟ್ಟಿಗೆ ಒಂದು ಚಿಟಿಕೆ ಸಕ್ಕರೆ ಅಥವಾ ಬೆಲ್ಲ ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ 10 ನಿಮಿಷ ಬಿಡಿ. ಹುಳಿಯ ಸುವಾಸನೆ ಹೋಗಿ ಹಿಟ್ಟು ಮತ್ತೆ ಫ್ರೆಶ್ ಆಗುತ್ತೆ.

 ಅಕ್ಕಿ ಹಿಟ್ಟು:
ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿದರೆ ಹುಳಿ ರುಚಿ ಬ್ಯಾಲೆನ್ಸ್ ಆಗಿ, ದೋಸೆ ಕೂಡ ಕ್ರಿಸ್ಪಿಯಾಗಿ ಬರುತ್ತದೆ.

 ರವೆ:
ಹುಳಿಯಾದ ಹಿಟ್ಟಿಗೆ ಸ್ವಲ್ಪ ರವೆ ಸೇರಿಸಿ. ಹಿಟ್ಟು ಗಟ್ಟಿಯಾಗುತ್ತದೆ ಮತ್ತು ದೋಸೆ ಗರಿಗರಿಯಾಗಿ ಬರುತ್ತದೆ — ರುಚಿ ಖಾತ್ರಿ!

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow