ಭವ್ಯ ಮೇಲೆ ನಿಜಕ್ಕೂ ಲವ್ ಇದ್ಯಾ!? ತ್ರಿವಿಕ್ರಮ್ ಕೊಟ್ಟ ಉತ್ತರ ಏನು ಗೊತ್ತಾ!?

ಬಿಗ್ ಬಾಸ್ ಸೀಸನ್ 11 ರಲ್ಲಿ ಈ ಬಾರಿ ಲವ್ ಬರ್ಡ್ಸ್ ಆಗಿ ತ್ರಿವಿಕ್ರಮ್ ಹಾಗೂ ಭವ್ಯ ಇದ್ದರು ಎಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ತಾಗಿ ಚರ್ಚೆ ಆಗಿತ್ತು.
ಫಿನಾಲೆ ವಾರಕ್ಕೆ ಇಬ್ಬರೂ ಕೂಡ ಕಾಲಿಟ್ಟಿದ್ದರು. ಅದರಲ್ಲಿ ಭವ್ಯ 5ನೇ ರನ್ನರ್ ಅಪ್ ಆದ್ರೆ, ತ್ರಿವಿಕ್ರಮ್ ಮೊದಲ ರನ್ನರಪ್ ಆದರು. ಬಿಗ್ ಮನೆಯಿಂದ ಹೊರ ಬಂದ ಬಳಿಕ ಸಂದರ್ಶನ ನಡೆಸಿದ ತ್ರಿವಿಕ್ರಮ್ ಹಲವು ವಿಚಾರಗಳ ಬಗ್ಗೆ ಮಾತನಾಡಿದರು.
ಬಿಗ್ಬಾಸ್ ಮನೆಯಲ್ಲಿದ್ದಾಗ ತ್ರಿವಿಕ್ರಮ್ ಅವರು ಭವ್ಯಗೌಡಗೆ ಪ್ರಪೋಸ್ ಮಾಡಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ತ್ರಿವಿಕ್ರಮ್ ಅವರು ಭವ್ಯಗೆ ಲವ್ ಪ್ರಪೋಸ್ ಮಾಡಿದ್ದಾರೆ. ಅದಕ್ಕೆ ಭವ್ಯ ಸಮಯ ಕೇಳಿದ್ದಾರೆ ಅನ್ನೋ ಸುದ್ದಿ ಎದ್ದಿತ್ತು. ಇದೀಗ ಈ ಎಲ್ಲಾ ವದಂತಿಗಳಿಗೆ ತ್ರಿವಿಕ್ರಮ್ ಸ್ಪಷ್ಟನೆ ನಿಡಿದ್ದಾರೆ.
ಒಬ್ಬರಿಗೆ ನೀವು ಲವ್ ಯೂ ಅನ್ನೋದ್ರಲ್ಲಿ ತಪ್ಪೇ ಇಲ್ಲ. ನನಗಿಂತ ಅವಳು ಚಿಕ್ಕವಳಿದ್ದಾಳೆ. ಅವಳು ನನಗೆ ತುಂಬಾ ಕ್ಲೋಸ್ ಇದ್ದಾಳೆ. ನಾನು ಆ ಮಾತನ್ನು ಅನುಗೂ ಹೇಳಿದ್ದೆ. ನಿಮಗೆ ಯಾರ ಜೊತೆ ನೋಡಬೇಕು ಅಂದಾಗ ಅಲ್ಲಿ ಆ ವಿಷಯಗಳು ಕೇಳುತ್ತದೆ. ಅದೇ ನಮ್ಮ ಕಿವಿಗೆ ಬೀಳುತ್ತದೆ ಬಿಟ್ಟರೆ ಬೇರೆ ಏನೂ ಇಲ್ಲ. ನಾನು ಬರುವಾಗ ಲೆಟರ್ನಲ್ಲೂ ಬರೆದಿದ್ದೆ. ಐ ಲವ್ ಯೂ ಕುಟ್ಟಿ. ಯಾರು ಏನೇ ಹೇಳಲಿ ತಲೆ ಕೆಡಿಸಿಕೊಳ್ಳಬೇಡ. ನಾನು ನಿಮ್ಮ ಜೊತೆ ಒಳ್ಳೆಯ ಫ್ರೆಂಡ್ ಆಗಿರುತ್ತೇನೆ ಎಂದು.
ಒಂದು ಒಳ್ಳೆಯ ವ್ಯಕ್ತಿ. ಮೊದಲ ದಿನದಿಂದಲೂ ನನಗೆ ಸಾಥ್ ಕೊಟ್ಟುಕೊಂಡು ಬಂದ ವ್ಯಕ್ತಿ. ನಾನು ಕಪ್ ಎತ್ತಿಲ್ಲ ಎಂದರೂ ಪರ್ವಾಗಿಲ್ಲ. ನೀನು ಕಪ್ ಎತ್ತಬೇಕು ಅಂದುಕೊಂಡ ಬಂದಿರುವ ವ್ಯಕ್ತಿ. ಲವ್ ಯೂ, ಗಿವ್ ಯೂ ಅಲ್ಲ ಎಂದರು
ಬೆಳಗ್ಗೆ ಎದ್ದಾಗ ನಾನು, ಭವ್ಯ, ಧನು, ರಂಜಿತ್, ಅನು ಎಲ್ಲರೂ ಒಟ್ಟಿಗೆ ಜಿಮ್ ಮಾಡುತ್ತಿದ್ದೇವು. ನನಗೆ ಫಿಟ್ನೆಸ್ ಫೀಲ್ಡ್ ಹಿನ್ನೆಲೆ ಇದೆ. ಹೀಗಾಗಿ ನಾನು ಅವರಿಗೆ ಹೇಳುತ್ತಿದ್ದೆ. ಕಾಂಪಿಟೇಷನ್ ಅನ್ನೋದು ಇಲ್ಲಿಂದಲೇ ಇರಬೇಕು. ನನ್ನಿಂದ ಏನಾದರೂ ತಪ್ಪಾಗಿದ್ದರೆ ಇಲ್ಲಿಂದಲೇ ತಗೊಳ್ಳಿ. ಆದರೆ ಮಾರ್ನಿಂಗ್ ಸೆಷನ್ ಅನ್ನೋದು ಫಿಟ್ನೆಸ್ ಸೆಷನ್ ಆಗಿರಲಿ ಎಂದಿದ್ದೆ. ಕೊನೆಗೆ ಆ ಫಿಟ್ನೆಸ್ ಎಲ್ಲರಿಗೂ ಹೆಲ್ಪ್ ಆಗಿದೆ. ಅದರಲ್ಲಿ ನನ್ನ ಪಾತ್ರ ಏನೂ ಇಲ್ಲ.
ಇಲ್ಲಿ ನಾನೇ ಎಲ್ಲರಿಗೂ ಸಹಾಯ ಮಾಡಿದೆ ಅನ್ನೋದು ಇಲ್ಲ. ನಾನು ಏನೋ ಹೇಳಿಕೊಟ್ಟೆ ಅನ್ನೋದನ್ನು ನಾನು ಒಪ್ಪಿಕೊಳ್ಳಲ್ಲ. ಅವಳು (ಭವ್ಯ) ಅದನ್ನು ಚೆನ್ನಾಗಿ ಮಾಡಿದರು. ಮಿಕ್ಕವರು ಮಾಡಬಹುದಿತ್ತು. ಅವರು ಎಲ್ಲಿ ಫೇಲ್ ಆದರು ಅನ್ನೋದಕ್ಕೆ ನನ್ನಲ್ಲಿ ಉತ್ತರ ಇಲ್ಲ. ಭವ್ಯ ತುಂಬಾ ಚೆನ್ನಾಗಿ ಮಾಡಿದರು. ಅದರಿಂದ ಟಾಸ್ಕ್ ಚೆನ್ನಾಗಿ ಆಡಿದರು. ವಿಕ್ಕಿ ಅವರಿಂದಲೇ ಭವ್ಯ ಮುಂದೆ ಬಂದರು ಅನ್ನೋ ಮಾತು ಬಂತು. ಅದೆಲ್ಲ ಇಲ್ಲ. ನಾನೇ ಬರೋದಾಗಿದ್ದರೆ ನಾನ್ಯಾಕೆ ಅವರನ್ನು ಕರೆದುಕೊಂಡು ಬರುತ್ತಿದ್ದೆ. ಅವರೂ ಕೂಡ ಟಾಪ್ ಸಿಕ್ಸ್ನಲ್ಲಿ ಬಂದಿದ್ದಾರೆ.
ನನ್ನ ಆಟವನ್ನು ನಾನು ಆಡಿಕೊಂಡು ಬಂದಿರೋದಕ್ಕೆ ಟಾಪ್ 2ವರೆಗೆ ಬಂದೆ. ಅವರು, ಅವರಾಟವನ್ನು ಆಡಿದರು.
ಅವರ ವಯಸ್ಸು ತುಂಬಾ ಚಿಕ್ಕದಾಗಿದೆ. ಬಿಗ್ಬಾಸ್ ಕೂಡ ಅದನ್ನೇ ಹೇಳುತ್ತಿದ್ದರು. ವಯಸ್ಸಲ್ಲಿ ಕಿರಿಯರಾಗಿದ್ದರೂ, ಆಟದಲ್ಲಿ ಹಿರಿಯರು ಎಂದು ಹೇಳುತ್ತಿದ್ದರು. ಭವ್ಯ ಅವರು ಆಟವನ್ನು ಅದ್ಭುತವಾಗಿ ಆಡಿಕೊಂಡು ಬಂದರು. ಇದೇ ವೇಳೆ ಭವ್ಯ ಅವರು ಯಾಕೆ ಅಷ್ಟೊಂದು ಮಿಸ್ಟೇಕ್ಸ್ ಮಾಡಿದರು ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆಟದಲ್ಲಿ ಆಡುವ ಆತುರಕ್ಕೆ ಹಾಗೆ ಆಗುತ್ತದೆ.ಬೇಗ ಮುಗಿಸಬೇಕು ಅನ್ನೋ ಕಾತುರ ಇರುತ್ತದೆ. ಅದು ಉದ್ದೇಶಪೂರ್ವಕವಾಗಿ ಮಾಡಿರೋದಲ್ಲ ಎಂದು ಸಮರ್ಥಿಸಿಕೊಂಡರು.
ನಿಮ್ಮ ಪ್ರತಿಕ್ರಿಯೆ ಏನು?






