ಭಾರತದ ಈ ರಾಜ್ಯದಲ್ಲಿ ಮದ್ಯದ ದರ ಭಾರೀ ಇಳಿಕೆ: ಎಲ್ಲಿ ಅಂತೀರಾ?

ಅಮರಾವತಿ:- ಆಂಧ್ರದಲ್ಲಿ ಮದ್ಯದ ದರ ಭಾರೀ ಇಳಿಕೆ ಕಂಡಿದೆ. ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ಸರ್ಕಾರವು ಇದೇ ಮೊದಲ ಬಾರಿ ಮದ್ಯದ ದರ ಇಳಿಸಿದ್ದು, ಪ್ರತಿ ಬಾಟಲ್‌ಗೆ 10 ರೂ.ಯಿಂದ 100 ರೂ.ವರೆಗೆ ಕಡಿತಗೊಳಿಸಿದೆ.
ಮದ್ಯ ನೀತಿಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಂಡು, ಕೈಗೆಟುಕುವ ದರದಲ್ಲಿ ಅದನ್ನು ಪೂರೈಕೆ ಮಾಡಿ. ಜೊತೆಗೆ ನಕಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಸೂಚಿಸಿದ್ದಾರೆ. ಈ ಹೊಸ ನೀತಿಯಿಂದ ರಾಜ್ಯದ ಆದಾಯ ಹೆಚ್ಚುವ ನಿರೀಕ್ಷೆಯಿದೆ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಬ್ರ‍್ಯಾಂಡ್‌ಗಳನ್ನು ಮಾತ್ರ ರಾಜ್ಯಕ್ಕೆ ಅನುಮತಿಸುವಂತೆ ಮತ್ತು ಸುಂಕ ಪಾವತಿಸದ, ಅಕ್ರಮ ಅಥವಾ ನಕಲಿ ಮದ್ಯದ ಮಾರಾಟವನ್ನು ನಿಷೇಧಿಸುವಂತೆ ಹಾಗೂ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವಂತೆ ತಿಳಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?






