ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಜೂನಿಯರ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ನೇಮಕಾತಿ!

ಸೆಪ್ಟೆಂಬರ್ 2, 2025 - 08:03
 0  10
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಜೂನಿಯರ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ನೇಮಕಾತಿ!

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ತನ್ನ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿಗಳಿಗೆ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ aai.aero ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 27, 2025 ಎಂದು ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:

  1. AAI ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ.

  2. ಮುಖಪುಟದಲ್ಲಿ ಜೂನಿಯರ್ ಎಕ್ಸಿಕ್ಯೂಟಿವ್ ನೇಮಕಾತಿ ಲಿಂಕ್ ಕ್ಲಿಕ್ ಮಾಡಿ.

  3. ವಿವರಗಳನ್ನು ನಮೂದಿಸಿ, ಲಾಗಿನ್ ಆಗಿ.

  4. ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ, ಅರ್ಜಿ ಶುಲ್ಕ ಪಾವತಿಸಿ.

  5. ಅರ್ಜಿ ಪರಿಶೀಲನೆ ಮಾಡಿ ಸಲ್ಲಿಸಿ, ದೃಢೀಕರಣ ಪುಟವನ್ನು ಡೌನ್‌ಲೋಡ್ ಮಾಡಿ.

ಅರ್ಜಿಯ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳಿಗೆ 300 ರೂ. ಶುಲ್ಕ. SC/ST/PwBD ಅಭ್ಯರ್ಥಿಗಳು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ. ಪಾವತಿ ಆನ್‌ಲೈನ್ (ಇಂಟರ್ನೆಟ್ ಬ್ಯಾಂಕಿಂಗ್/ಡೆಬಿಟ್/ಕ್ರೆಡಿಟ್ ಕಾರ್ಡ್) ಮೂಲಕ ಮಾಡಬಹುದು.

ಹುದ್ದೆಗಳ ವಿವರ:
ಈ ನೇಮಕಾತಿಯಲ್ಲಿ ಒಟ್ಟು 976 ಹುದ್ದೆಗಳು ಲಭ್ಯವಿದ್ದು, ಹೀಗಿವೆ:

  • ಆರ್ಕಿಟೆಕ್ಚರ್: 11 ಹುದ್ದೆಗಳು

  • ಎಂಜಿನಿಯರಿಂಗ್ – ಸಿವಿಲ್: 199 ಹುದ್ದೆಗಳು

  • ಎಂಜಿನಿಯರಿಂಗ್ – ಎಲೆಕ್ಟ್ರಿಕಲ್: 208 ಹುದ್ದೆಗಳು

  • ಎಲೆಕ್ಟ್ರಾನಿಕ್ಸ್: 527 ಹುದ್ದೆಗಳು

  • ಮಾಹಿತಿ ತಂತ್ರಜ್ಞಾನ: 31 ಹುದ್ದೆಗಳು

ಆಯ್ಕೆ ಪ್ರಕ್ರಿಯೆ:
ಆಯ್ಕೆ ಗೇಟ್ (GATE) ಅಂಕಗಳ ಮೂಲಕ ನಡೆಯುತ್ತದೆ. ಗೇಟ್ 2023, 2024 ಅಥವಾ 2025 ರಲ್ಲಿ ಸಂಬಂಧಿತ ಕ್ಷೇತ್ರದಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮಾತ್ರ ಮುಂದಿನ ಪ್ರಕ್ರಿಯೆಗೆ ಪರಿಗಣಿಸಲ್ಪಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು AAI ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬಹುದು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow