"Pak ಫೈನಲ್ ತಲುಪೋ ಸಾಧ್ಯತೆಯೇ ಇಲ್ಲ!": ಪಾಕಿಸ್ತಾನದ ವಿರುದ್ಧ ಮಾಜಿ ಆಟಗಾರರ ಟೀಕೆ
ಏಷ್ಯಾ ಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿವೆ. ಈ ಎರಡೂ ತಂಡಗಳು ಖಂಡಿತವಾಗಿಯೂ ಸೂಪರ್ -4 ತಲುಪುತ್ತವೆ ಎಂದು ಎಲ್ಲರೂ ನಿರೀಕ್ಷಿಸುತ್ತಾರೆ. ಗುಂಪು ಹಂತದಲ್ಲಿ ಭಾರತ-ಪಾಕಿಸ್ತಾನ ಪಂದ್ಯ ಸೆಪ್ಟೆಂಬರ್ 14 ರಂದು ನಡೆಯಲಿದೆ. ಎರಡೂ ತಂಡಗಳು ಸೂಪರ್ -4 ತಲುಪಿದರೆ, ಸೆಪ್ಟೆಂಬರ್ 21 ರಂದು ಮತ್ತೆ ಪರಸ್ಪರ ಎದುರಾಗುವ ಸಾಧ್ಯತೆಯಿದೆ. ಇನ್ನೂ ಈ ಬಗ್ಗೆ ಪಾಕಿಸ್ತಾನ ಫೈನಲ್ ತಲುಪುವುದಿಲ್ಲ ಎಂದು ಡ್ಯಾನಿಶ್ ಕನೇರಿಯಾ ಭವಿಷ್ಯ ನುಡಿದಿದ್ದಾರೆ.
ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ಬಗ್ಗೆ ಚರ್ಚಿಸುವಾಗ ಈ ಹೇಳಿಕೆ ನೀಡಿದ್ದಾರೆ. ಅವರ ಪ್ರಕಾರ, ಈ ಬಾರಿಯ ಏಷ್ಯಾಕಪ್ ಫೈನಲ್ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯಬಹುದು. ಕನೇರಿಯಾ ಮಾತ್ರವಲ್ಲ, ಬಸಿತ್ ಅಲಿಯಂತಹ ಮಾಜಿ ಕ್ರಿಕೆಟಿಗರು ಕೂಡ ಪಾಕಿಸ್ತಾನ ತಂಡವನ್ನು ಟೀಕಿಸಿದ್ದಾರೆ.
"ಭಾರತ ತಂಡವು ತುಂಬಾ ಬಲಿಷ್ಠವಾಗಿದೆ. ಈ ಬಾರಿಯೂ ಪ್ರಶಸ್ತಿ ಗೆಲ್ಲಲು ಪ್ರಬಲ ಸ್ಪರ್ಧಿಯಾಗಿದೆ. ಆದಾಗ್ಯೂ, ಈ ಬಾರಿ ಅಫ್ಘಾನಿಸ್ತಾನ ತಂಡವು ಕಠಿಣ ಹೋರಾಟವನ್ನು ನೀಡುತ್ತದೆ. ನನ್ನ ಭವಿಷ್ಯವಾಣಿಯ ಪ್ರಕಾರ, ಏಷ್ಯಾಕಪ್ ಫೈನಲ್ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯಬಹುದು. ಪಾಕಿಸ್ತಾನ ತಂಡವು ಅಫ್ಘಾನಿಸ್ತಾನದ ಬಗ್ಗೆ ಜಾಗರೂಕರಾಗಿರಬೇಕು. ಅಫ್ಘಾನಿಸ್ತಾನವು ದೊಡ್ಡ ಸವಾಲನ್ನು ಒಡ್ಡುತ್ತದೆ ಎಂದು ಹೇಳಿದರು.
ನಿಮ್ಮ ಪ್ರತಿಕ್ರಿಯೆ ಏನು?