50 ಲಕ್ಷ ರೂ. ಖರ್ಚು ಮಾಡಿ ಮದುವೆ, 10 ಲಕ್ಷ ಹಣ ಕೊಟ್ರೂ ತೀರದ ವರದಕ್ಷಿಣೆ ದಾಹ! ಪತಿ ಕಿರುಕುಳಕ್ಕೆ ವಿವಾಹಿತ ಮಹಿಳೆ ಬಲಿ!

ಆಗಸ್ಟ್ 28, 2025 - 22:00
 0  30
50 ಲಕ್ಷ ರೂ. ಖರ್ಚು ಮಾಡಿ ಮದುವೆ, 10 ಲಕ್ಷ ಹಣ ಕೊಟ್ರೂ ತೀರದ ವರದಕ್ಷಿಣೆ ದಾಹ! ಪತಿ ಕಿರುಕುಳಕ್ಕೆ ವಿವಾಹಿತ ಮಹಿಳೆ ಬಲಿ!

ಬೆಂಗಳೂರು: ವರದಕ್ಷಿಣೆ ಎನ್ನುವ ಪೆಡಂಭೂತ ಕಾಲ ಬದಲಾದರೂ ಇಂದೂ ನಿಂತಿಲ್ಲ. ಕಾನೂನು ಏನೇ ಇದ್ದರೂ ಮಗಳು ಚೆನ್ನಾಗಿ ಇರಲಿ ಎನ್ನುವ ಕಾರಣದಿಂದ ಧನ ಪಿಶಾಚಿಗಳು ಕೇಳಿದಷ್ಟು ಹಣ ಕೊಟ್ಟು ಮಗಳನ್ನು ಮದುವೆ ಮಾಡಿಕೊಡುತ್ತಾರೆ.

ಆದರೆ ಇಂಥ ರಾಕ್ಷಸರು ಹಣದ ಬೇಡಿಕೆ ಒಡ್ಡಿದಾಗಲೇ ಅವರು ಎಂಥ ನೀಚ ಮನಸ್ಥಿತಿಯವರು ಎನ್ನುವ ಅರಿವು ಕೂಡ ಅಪ್ಪ-ಅಮ್ಮನಿಗೆ ಆಗದೇ ಕೊನೆಗೆ ಮಗಳ ಬಾಳನ್ನು ನರಕ ಮಾಡಿ, ಆಕೆಯನ್ನು ಮೃತ್ಯುಕೂಪಕ್ಕೆ ತಳ್ಳುತ್ತಿರುವುದು ಮಾತ್ರ ಎಂದೆಂದಿನ ದುರಂತವೇ ಸರಿ. ಇದೀಗ ಅಂತಹದ್ದೇ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ  ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.  ನೇಣು ಹಾಕಿಕೊಂಡ ಸ್ಥಿತಿಯಲ್ಲಿ  ಶಿಲ್ಪಾ ಎಂಬಾಕೆಯ ಮೃತದೇಹ ಪತ್ತೆಯಾಗಿದೆ. ಕಳೆದ ಎರಡೂವರೆ ವರ್ಷ ಹಿಂದೆ ಶಿಲ್ಪಾ ಮತ್ತು ಪ್ರವೀಣ್ ವಿವಾಹವಾಗಿದ್ದರು. ಶಿಲ್ಪಾ ಮತ್ತು ಪ್ರವೀಣ್ ದಂಪತಿಗೆ ಒಂದೂವರೆ ವರ್ಷದ ಮಗು ಇದೆ. ಮೃತ ಶಿಲ್ಪಾ ಬಿ.ಟೆಕ್ ಓದಿದ್ದರು. ಬೆಂಗಳೂರಿನ ಪ್ರತಿಷ್ಠಿತ ಇನ್ಪೋಸಿಸ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು.

ಆದರೇ, ಪತಿ ಪ್ರವೀಣ್ ಹಣದಾಹಕ್ಕೆ ಬಲಿಯಾಗಿದ್ದಾರೆ.  ಪ್ರವೀಣ್ ಹಾಗೂ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಶಿಲ್ಪಾ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪತಿ ಪ್ರವೀಣ್ ನನ್ನು ಬಂಧಿಸಿ ವಿಚಾರಣೆಗೊಳಪಡಿ ಸಿದ್ದಾರೆ.  ಪ್ರವೀಣ್- ಶಿಲ್ಪಾ ಮೂರು ವರ್ಷದ ಹಿಂದೆ ವಿವಾಹವಾಗಿದ್ದರು. ಇವರ ದಾಂಪತ್ಯಕ್ಕೆ ಒಂದೂವರೆ ವರ್ಷದ ಗಂಡು ಮಗು ಇದೆ.  ಇನ್ನೂ ಮೃತ ಶಿಲ್ಪಾ  ಒಂದುವರೆ ತಿಂಗಳ ಗರ್ಭಿಣಿ ಎಂಬ ಮಾಹಿತಿಯೂ ಲಭ್ಯವಾಗಿದೆ.

ಶಾರದ ಬಸಯ್ಯ ಎಂಬುವವರಿಗೆ ಮೂರು ಜನ ಮಕ್ಕಳ ಪೈಕಿ ಹಿರಿಯ ಮಗಳು ಶಿಲ್ಪಾ. ಪ್ರವೀಣ್ ಎಂಬಾತನಿಗೆ ಶಿಲ್ಪಾಳನ್ನ  ಪೋಷಕರು  ಮದುವೆ ಮಾಡಿಕೊಟ್ಟಿದ್ದರು.  ಶಿಲ್ಪಾ ಪೋಷಕರು ಮೂಲತಃ ಹುಬ್ಬಳಿಯವರು.  20 ವರ್ಷದ ಹಿಂದೆ  ಶಿಲ್ಪಾ ಕುಟುಂಬಸ್ಥರು ಬೆಂಗಳೂರಿಗೆ  ಬಂದಿದ್ದರು . ಕಳೆದ ಮೂರು ವರ್ಷದ ಹಿಂದಷ್ಟೇ ಶಿಲ್ಪಾ ಹಾಗೂ ಪ್ರವೀಣ್ ನಡುವೆ ಮದುವೆ ನಡೆದಿತ್ತು.

ಬಿ.ಟೆಕ್ ಮುಗಿಸಿದ್ದ ಶಿಲ್ಪಾ ಇನ್ಫೋಸಿಸ್  ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮೂರು  ವರ್ಷಗಳ ಹಿಂದೆ 50 ಲಕ್ಷ  ರೂಪಾಯಿ ಖರ್ಚು ಮಾಡಿ ಶಿಲ್ಪಾ ಪೋಷಕರು ಮದುವೆ ಮಾಡಿಕೊಟ್ಟಿದ್ದರು.ಆಗಸ್ಟ  26 ರಂದು ರಾತ್ರಿ ವೇಳೆ ಮನೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶಿಲ್ಪಾ ಮೃತದೇಹ ಪತ್ತೆಯಾಗಿದೆ. ಶಿಲ್ಪಾ ಕುಟುಂಬಸ್ಥರು ಈಗ   ವರದಕ್ಷಿಣೆ ಕಿರುಕುಳದ ಆರೋಪ ಮಾಡುತ್ತಿದ್ದಾರೆ. ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಶಿಲ್ಪಾ ಪತಿ ಪ್ರವೀಣ್ ನನ್ನು  ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಶಿಲ್ಪಾ ಹಾಗೂ ಪ್ರವೀಣ್ ದಾಂಪತ್ಯಕ್ಕೆ ಮುದ್ದಾದ ಗಂಡು ಮಗು ಇದೆ. 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow