“ಮಕ್ಕಳ ಕೊಲೆ ಮಾಡುವಾಗಲೂ ಮನಸ್ಸು ಕರಗಲಿಲ್ಲವಾ”.. ಪುಟ್ಟ ಕಂದಮ್ಮಗಳನ್ನು ಕೊಂದು ತಾಯಿ ಆತ್ಮಹ*ತ್ಯೆ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆ ಮಹಿಳೆಯೊಬ್ಬಳು ತನ್ನ ಮಕ್ಕಳಿಬ್ಬರನ್ನು ಕೊಂದು ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ತಾಯಿಯನ್ನು 35 ವರ್ಷದ ಕುಸುಮಾ ಹಾಗೂ ಮಕ್ಕಳಾದ ಶ್ರೀಯಾನ್ (6), ಚಾರ್ವಿ (1.5) ಎಂದು ಗುರುತಿಸಲಾಗಿದ್ದು,
ಕೊಡಿಗೇಹಳ್ಳಿಯ ಅಪಾರ್ಟ್ಮೆಂಟ್‌ವೊಂದರಲ್ಲಿ ದಂಪತಿ ಸುರೇಶ್ ಮತ್ತು ಕುಸುಮಾ ವಾಸವಾಗಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆ ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ತಾಯಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನಾ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ನಮ್ಮ ಸಾವಿಗೆ ನಾವೇ ಕಾರಣವೆಂದು ಬರೆದಿದ್ದಾಳೆ. ಸದ್ಯ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






