ಮತ್ತೆ ಪ್ರೀತಿಯಲ್ಲಿ ಬಿದ್ರಾ ನಟಿ ಸಮಂತಾ..? ನಿರ್ದೇಶಕನ ಕೈಹಿಡಿದ ನಟಿಯ ಫೋಟೋ ವೈರಲ್

ಫೆಬ್ರವರಿ 12, 2025 - 22:28
 0  20
ಮತ್ತೆ ಪ್ರೀತಿಯಲ್ಲಿ ಬಿದ್ರಾ ನಟಿ ಸಮಂತಾ..? ನಿರ್ದೇಶಕನ ಕೈಹಿಡಿದ ನಟಿಯ ಫೋಟೋ ವೈರಲ್

ಪ್ರೀತಿಸಿ ಮದುವೆಯಾದ ಸಮಂತಾ ರುತ್ ಪ್ರಭು ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ್ದ ನಾಗ ಚೈತನ್ಯ ಅವರು ಈಗ ನಟಿ ಶೋಭಿತಾ ಜೊತೆ ಹಸೆಮಣೆ ಏರಿದ್ದಾರೆ. ಇದೀಗ ಬಾಲಿವುಡ್ ನಿರ್ದೇಶಕನ ಜೊತೆ ಸಮಂತಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.ಹೌದು ಸಮಂತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪಿಕಲ್ಬಾಲ್ ಲೀಗ್ ಮ್ಯಾಚ್ನ ಅನೇಕ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ನಟಿ ಸಮಂತಾ ಪಿಕಲ್ಬಾಲ್ ಟೋರ್ನಾಮೆಂಟ್ನ ಚೆನ್ನೈ ಸೂಪರ್ ಚಾಂಪ್ಸ್ನ ಒಡತಿ. ಮೊದಲ ಫೋಟೋ ರಾಜ್ ಜೊತೆ ನಡೆದುಕೊಂಡು ಹೋಗುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ ಮತ್ತೊಂದು ಫೋಟೋದಲ್ಲಿ ಇಬ್ಬರು ಟೀಮ್ನ್ನು ಚೀಯರ್ ಮಾಡುತ್ತಿರುವುದು ಕಂಡು ಬಂದಿದೆ.

ಹೀಗೆ ಟೀಮ್ ಜೊತೆ ಕಳೆದ ಹಲವು ಫೋಟೋಗಳನ್ನು ಹಂಚಿಕೊಂಡಿರುವ ಸಮಂತ ರಾಜ್ ಜೊತೆ ಕೈ ಹಿಡಿದುಕೊಂಡಿರುವ ಫೋಟೋಗಳನ್ನು ಕೂಡ ಪೋಸ್ಟ್ ಮಾಡಿದ್ದಾರೆ. ಇದರಿಂದ ಅವರ ಫ್ಯಾನ್ಸ್ ಸಮಂತಾ ರಾಜ್ ಜೊತೆ ಡೇಟಿಂಗ್ ಮಾಡಲು ಶುರು ಮಾಡಿದ್ದಾರಾ ಅನ್ನೋ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗೆ ಪಿಕಲ್ಬಾಲ್ ಟೋರ್ನಾಮೆಂಟ್ನಿಂದಾಗಿ ನಟಿ ಸಮಂತಾ ಹಲವು ಸಿನಿಮಾಗಳ ಆಫರ್ಗಳನ್ನು ತಿರಸ್ಕರಿಸಿದ್ದಾರೆ. ಸದ್ಯ ಆ ಪಂದ್ಯಾವಳಿಗಳಲ್ಲಿ ನಿರ್ದೇಶಕ ರಾಜ್ ನಿಡಿಮೊರು ಕೂಡ ಕಾಣಿಸಿಕೊಂಡಿದ್ದಾರೆ. ಅವರೊಂದಿಗಿನ ಅನೇಕ ಫೋಟೋಗಳನ್ನ ಸಮಂತಾ ಹಂಚಿಕೊಂಡಿದ್ದು, ಅದರಲ್ಲೂ ಇಬ್ಬರೂ ಕೈ ಕೈ ಹಿಡಿದಿಕೊಂಡಿರುವ ಫೋಟೋಗಳನ್ನೇ ಹೆಚ್ಚು ಹಂಚಿಕೊಂಡಿದ್ದಾರೆ. ಇದರಿಂದ ಇಬ್ಬರೂ ಸದ್ಯ ಡೇಟಿಂಗ್ ನಡೆಸುತ್ತಿದ್ದಾರಾ ಎನ್ನುವ ಅನುಮಾನ ಕಾಡುತ್ತಿದೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.ಅದರಲ್ಲೂ ಬಾಲಿಬ್ಲೈಂಡ್ಸ್ಎನ್ಗಾಸಿಪ್ ಪೇಜ್ ನನಗೆ ಅನಿಸುತ್ತೆ ಸ್ಯಾಮ್ ಅಧಿಕೃತವಾಗಿ ಏನನ್ನೋ ಹೇಳಲು ಹೊರಟಿದ್ದಾರೆ. ಇದು ಒಳ್ಳೆಯದು ಕೂಡ.. ಇದರಿಂದ ಎಲ್ಲರಿಗೂ ಸಂತೋಷವಾಗಿದೆ ಎಂದು ಹೇಳಿದೆ. ಆದ್ರೆ ಇದರ ಬಗ್ಗೆ ಡೈರೆಕ್ಟರ್ ರಾಜ್ ನಿಡಿಮೊರ್ ಆಗಲಿ ನಟಿ ಸಮಂತಾ ಆಗಲಿ ಎಲ್ಲಿಯೂ ಕೂಡ ಪ್ರತಿಕ್ರಿಯೆನ್ನು ಇಲ್ಲಿಯವರೆಗೂ ನೀಡಿಲ್ಲ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow