ಮದುವೆ ಬಳಿಕ ಮಾಂಗಲ್ಯ ಧರಿಸಿ ಕೆಲಸಕ್ಕೆ ಮರಳಿದ ಆ್ಯಂಕರ್ ಅನುಶ್ರೀ..!
ಜನಪ್ರಿಯ ಆ್ಯಂಕರ್ ಅನುಶ್ರೀ ಇತ್ತೀಚೆಗೆ ರೋಷನ್ ಜೊತೆ ವಿವಾಹವಾದರು. ಇಬ್ಬರೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳೇ ಎಂಬುದು ವಿಶೇಷ. ವಿವಾಹದ ಬಳಿಕ ಸ್ವಲ್ಪ ವಿಶ್ರಾಂತಿ ಪಡೆದಿದ್ದ ಅನುಶ್ರೀ, ಇದೀಗ ಮತ್ತೆ ತಮ್ಮ ಕೆಲಸಕ್ಕೆ ಮರಳುತ್ತಿದ್ದಾರೆ.ಜೀ ಕನ್ನಡದ ‘ಸರಿಗಮಪ’ ಬಳಿಕ ಬ್ರೇಕ್ ತೆಗೆದುಕೊಂಡಿದ್ದ ಅವರು, ಈಗ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (DKD)’ ಮತ್ತು ‘ಕಾಮಿಡಿ ಕಿಲಾಡಿಗಳು’ ಶೋಗಳ ಆಡಿಷನ್‌ಗಳಲ್ಲಿ ಭಾಗಿಯಾಗಿದ್ದಾರೆ.
ಈ ವೇಳೆ ಅವರ ಕತ್ತಿನಲ್ಲಿ ಮಾಂಗಲ್ಯ ಸರ ಕಾಣಿಸಿಕೊಂಡಿದ್ದು, ಸಂಪ್ರದಾಯ ಮರೆಯದ ಅನುಶ್ರೀ ಅವರನ್ನು ಅಭಿಮಾನಿಗಳು ಮತ್ತು ನೆಟ್ಟಿಗರು ಹಾಡಿ ಹೊಗಳಿದ್ದಾರೆ.“ಮಾಂಗಲ್ಯ ನೋಡಿ ಖುಷಿ ಆಯ್ತು”“ನೀವು ತುಂಬಾ ಲಕ್ಷಣವಾಗಿ ಕಾಣಿಸುತ್ತಿದ್ದೀರಿ” ಎಂದು ಕಮೆಂಟ್‌ಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಕೆಲವು ಸೆಲೆಬ್ರಿಟಿಗಳು ವಿವಾಹದ ಬಳಿಕ ಮಾಂಗಲ್ಯ ಧರಿಸುವುದನ್ನು ದೂರ ಇಡುತ್ತಾರೆ. ಆದರೆ ಅನುಶ್ರೀ ಮಾತ್ರ ಅದಕ್ಕೆ ಭಿನ್ನವಾಗಿ ನಡೆದುಕೊಂಡಿದ್ದಾರೆ.ಪ್ರಸ್ತುತ ‘ಡಿಕೆಡಿ’ ಹಾಗೂ ‘ಕಾಮಿಡಿ ಕಿಲಾಡಿಗಳು’ ಶೋಗಳ ಆಡಿಷನ್‌ಗಳು ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿವೆ. ಆಸಕ್ತರು ಜೀ ಕನ್ನಡ ಸೂಚಿಸಿದ ಸ್ಥಳಗಳಿಗೆ ತೆರಳಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶ ಪಡೆಯಬಹುದು.
ನಿಮ್ಮ ಪ್ರತಿಕ್ರಿಯೆ ಏನು?