ಮಧ್ಯಪ್ರದೇಶ: ಬೆಂಗಳೂರು ಮೂಲದ ಸೇನಾಧಿಕಾರಿ ಹೃದಯಾಘಾತದಿಂದ ಸಾವು!

ಸೆಪ್ಟೆಂಬರ್ 12, 2025 - 10:38
 0  15
ಮಧ್ಯಪ್ರದೇಶ: ಬೆಂಗಳೂರು ಮೂಲದ ಸೇನಾಧಿಕಾರಿ ಹೃದಯಾಘಾತದಿಂದ ಸಾವು!

ಬೆಂಗಳೂರು: ಹೃದಯಾಘಾತದಿಂದ ಸೇನಾಧಿಕಾರಿ ಮೇಜರ್ ಬಿ. ವಿಜಯ್ ಕುಮಾರ್ ಅವರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಸದರ್ ಬಜಾರ್ನಲ್ಲಿರುವ ಇಂಡಿಯನ್ ಕಾಫಿ ಹೌಸ್ ಬಳಿ ಪಾರ್ಕ್ ಮಾಡಿದ್ದ ಕಾರಿನ ಡ್ರೈವರ್ ಸೀಟಿನಲ್ಲಿ ಕುಳಿತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಅಲ್ಲೇ ಹಾದು ಹೋಗುತ್ತಿದ್ದವರು ಕಾರಿನೊಳಗೆ ದೀರ್ಘ ಕಾಲ ಕುಳಿತಿರುವುದನ್ನು ಗಮನಿಸಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ಪರಿಶೀಲನೆಯ ವೇಳೆ ವ್ಯಕ್ತಿ ಮಿಲಿಟರಿ ಆಸ್ಪತ್ರೆಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಮೇಜರ್ ವಿಜಯ್ ಕುಮಾರ್ ಎಂದು ಗುರುತಿಸಲಾಯಿತು.

ತಕ್ಷಣ ಸೇನಾ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅವರನ್ನು ಆಂಬ್ಯುಲೆನ್ಸ್ ಮೂಲಕ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಆಗಲೇ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow