ಮಧುಮೇಹಿಗಳ ಗಮನಕ್ಕೆ: ಶುಗರ್ ನಿಯಂತ್ರಿಸುತ್ತೆ ಜೋಳದ ಅಂಬಲಿ! ಹೀಗಿರಲಿ ತಯಾರಿ!

ಎಪ್ರಿಲ್ 9, 2025 - 07:02
 0  16
ಮಧುಮೇಹಿಗಳ ಗಮನಕ್ಕೆ: ಶುಗರ್ ನಿಯಂತ್ರಿಸುತ್ತೆ ಜೋಳದ ಅಂಬಲಿ! ಹೀಗಿರಲಿ ತಯಾರಿ!

ರಾಜ್ಯದ ಎಲ್ಲೇ ಹೋದ್ರೂ ಈಗ ತಡೆದುಕೊಳ್ಳಲಾಗದಷ್ಟು ಸೆಕೆ. ಬಿಸಿಲ ತಾಪಮಾನಕ್ಕೆ ದೇಹಕ್ಕೆ ತಂಪು ನೀಡೋ ಆಹಾರಗಳ ಮೊರೆ ಹೋಗುತ್ತಿದ್ದಾರೆ ಜನರು.

ಬೇಸಿಗೆಯಲ್ಲಿ ಹೆಚ್ಚಿನವರಿಗೆ ಅಂಬಲಿ ಎಂದರೆ ರಾಗಿಯಿಂದ ಮಾಡಿದ ಗಂಜಿಯನ್ನು ನೆನಪಿಸಿಕೊಳ್ಳುತ್ತಾರೆ. ತುಂಬಾ ಆರೋಗ್ಯಕರವಾದ ಅಂಬಲಿಯನ್ನು ಜೋಳದಿಂದಲೂ ತಯಾರಿಸಬಹುದು. ಬೇಸಿಗೆಯಲ್ಲಿ ಈ ಅಂಬಲಿ ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳು ಲಭಿಸುತ್ತವೆ.

ದೇಹಕ್ಕೆ ಬೇಕಾದ ಶಕ್ತಿ ಹಾಗೂ ಪೋಷಕಾಂಶಗಳೆರಡೂ ಈ ಗಂಜಿಯಲ್ಲಿ ಲಭ್ಯವಿದೆ. ಅಲ್ಲದೇ ಮಧುಮೇಹಿಗಳಿಗೆ ಹಾಗೂ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಜೋಳದ ಗಂಜಿ ಅಥವಾ ಅಂಬಲಿ ಒಳ್ಳೆಯದು. ಈ ಅಂಬಲಿಯನ್ನು ನಿತ್ಯವೂ ಆಹಾರದಲ್ಲಿ ಸೇರಿಸಬಹುದು. ತಡಮಾಡದೇ ಜೋಳದ ಅಂಬಲಿ ಮಾಡುವುದು ಹೇಗೆ? ಅಗತ್ಯವಿರುವ ಪದಾರ್ಥಗಳಂತಹ ವಿವರಗಳನ್ನು ಇಲ್ಲಿ ತಿಳಿಯೋಣ ಬನ್ನಿ

ಜೋಳದ ಅಂಬಲಿಗೆ ಬೇಕಾಗುವ ಪದಾರ್ಥಗಳೇನು?:

ಜೋಳದ ಹಿಟ್ಟು - 1 ಕಪ್
ನೀರು 7 ಕಪ್
ಉಪ್ಪು - ರುಚಿಗೆ ಬೇಕಾದಷ್ಟು
ಈರುಳ್ಳಿ - 1
ಹಸಿಮೆಣಸಿನಕಾಯಿ - 2
ಮಜ್ಜಿಗೆ - ಅರ್ಧ ಲೀಟರ್

ಜೋಳದ ಅಂಬಲಿ ತಯಾರಿಸುವ ವಿಧಾನ:

ದೊಡ್ಡ ಮತ್ತು ದಪ್ಪಗಿರುವ ಪಾತ್ರೆ ತೆಗೆದುಕೊಂಡು ಅದರಲ್ಲಿ 5 ಕಪ್ ನೀರನ್ನು ಸುರಿಯಿರಿ.

ಜೋಳದ ಹಿಟ್ಟನ್ನು ಯಾವ ಕಪ್​ನೊಂದಿಗೆ ತೆಗೆದುಕೊಳ್ಳಲಾಗುತ್ತದೆಯೋ ಅದೇ ಕಪ್​ನೊಂದಿಗೆ ನೀರನ್ನು ತೆಗೆದುಕೊಳ್ಳಬೇಕು.

ನೀರು ಹಾಕಿದ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಕುದಿಸಬೇಕಾಗುತ್ತದೆ. ಅಷ್ಟರಲ್ಲಿ ಇನ್ನೊಂದು ಚಿಕ್ಕ ಬೌಲ್​ನಲ್ಲಿ ಬೇಳೆ ಹಿಟ್ಟನ್ನು ತೆಗೆದುಕೊಂಡು ಒಂದು ಕಪ್ ನೀರು ಹಾಕಿ ಮಿಕ್ಸ್ ಮಾಡಿ.

ಹೀಗೆ ಕಲಸಿದ ನಂತರ ಇನ್ನೊಂದು ಕಪ್ ನೀರು ಹಾಕಿ ಪಕ್ಕಕ್ಕೆ ಇಡಿ. ಅಂದರೆ, 1 ಕಪ್ ಜೋಳದ ಹಿಟ್ಟಿಗೆ, ನಾವು 7 ಕಪ್ ನೀರು ತೆಗೆದುಕೊಂಡಿದ್ದೇವೆ.

ನೀರು ಕುದಿಯುತ್ತಿರುವಾಗ ಕಡಿಮೆ ಉರಿಯಲ್ಲಿ ಒಲೆ ಇಟ್ಟು, ಕುದಿಯುವ ನೀರಿಗೆ ಸ್ವಲ್ಪ ಸ್ವಲ್ಪವೇ ಜೋಳದ ಹಿಟ್ಟಿನ ಮಿಶ್ರಣ ಸುರಿದು ಮತ್ತೆ ಮತ್ತೆ ಮಿಶ್ರಣ ಮಾಡಿ.

ನಂತರ ಮಿಶ್ರಣವನ್ನು ಹಾಗೆ ಮಿಕ್ಸ್​ ಮಾಡುತ್ತಲೇ ಇರಬೇಕಾಗುತ್ತದೆ. ಮಿಶ್ರಣವು ಸ್ವಲ್ಪ ದಪ್ಪವಾಗುವವರೆಗೆ ಸುಮಾರು 5 ರಿಂದ 10 ನಿಮಿಷ ಬೇಯಿಸಿ. ಜೋಳದ ಮಿಶ್ರಣ ಕುದಿ ಬಂದ ನಂತರ ಸ್ಟವ್ ಆಫ್ ಮಾಡಿ 5 ನಿಮಿಷ ಇಡಿ. ಅದರ ನಂತರ ಪಾತ್ರೆಯ ಮೇಲೆ ಒಂದು ಮುಚ್ಚಳವನ್ನು ಮುಚ್ಚಿ. ಸುಮಾರು 10 ಗಂಟೆಗಳ ಕಾಲ ಅದನ್ನು ಪಕ್ಕಕ್ಕೆ ಇರಿಸಿ. ಅಂಬಲಿ ಎಷ್ಟು ಹುಳಿಯಾಗಿರುತ್ತದೆಯೋ ಅಷ್ಟೇ ರುಚಿಯಾಗಿರುತ್ತದೆ.

ನೀವು ಮಣ್ಣಿನ ಪಾತ್ರೆಗಳನ್ನು ಬಳಸುತ್ತಿದ್ದರೆ ಅದರಲ್ಲಿ ಈ ಗಂಜಿ ಸುರಿದು ಹುದುಗಿಸಬಹುದು

ಮತ್ತು ಈ ಅಂಬಲಿಯನ್ನು ನೀವು ಬೆಳಗ್ಗೆ ಕುಡಿಯಬೇಕಾದರೆ, ನೀವು ರಾತ್ರಿ ಮತ್ತು ಸಂಜೆ ಕುಡಿಯಲು ಬಯಸಿದರೆ, ನೀವು ಅದನ್ನು ಬೆಳಗ್ಗೆ ತಯಾರಿಸಬೇಕು.

ಹುದುಗಿದ ನಂತರ ಅದನ್ನು ಒಂದು ಚಮಚದಿಂದ ಚೆನ್ನಾಗಿ ಮಿಶ್ರಣ ಮಾಡಿ. ನಿಧಾನವಾಗಿ ಮಿಶ್ರಣ ಮಾಡಿದ ನಂತರ, ಅರ್ಧ ಲೀಟರ್ ಮಜ್ಜಿಗೆಯನ್ನು ಸ್ವಲ್ಪ ಸ್ವಲ್ಪ ಅದರೊಳಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅಂಬಲಿ ತೆಳ್ಳಗೆ ಇರಬೇಕೆಂದರೆ ಮಜ್ಜಿಗೆಯನ್ನು ಹೆಚ್ಚಿಗೆ ಹಾಕಬಹುದು.

ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆ ಕಲಸಿ. ರುಚಿಕರವಾದ ಮತ್ತು ಆರೋಗ್ಯಕರವಾದ ಜೋಳದ ಅಂಬಲಿ ಸವಿಯಲು ಸಿದ್ಧವಾಗಿದೆ.

ಇದನ್ನು ಲೋಟ ಅಥವಾ ಬೌಲ್‌ಗೆ ಹಾಕಿಕೊಂಡು ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಕುಡಿಯಿರಿ. ನಿಮಗೆ ಇಷ್ಟವಾದರೆ ಟ್ರೈ ಮಾಡಿ ನೋಡಿ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow