ಇನ್ನೊಂದು ತಿಂಗಳಲ್ಲಿ ಪ್ರಜ್ವಲ್ ರೇವಣ್ಣ ಜೈಲಿನಿಂದ ಹೊರಬರ್ತಾರೆ: ಸೂರಜ್ ರೇವಣ್ಣ ಭವಿಷ್ಯ!

ಮಾರ್ಚ್ 9, 2025 - 20:59
 0  19
ಇನ್ನೊಂದು ತಿಂಗಳಲ್ಲಿ ಪ್ರಜ್ವಲ್ ರೇವಣ್ಣ ಜೈಲಿನಿಂದ ಹೊರಬರ್ತಾರೆ: ಸೂರಜ್ ರೇವಣ್ಣ ಭವಿಷ್ಯ!

ಇನ್ನೊಂದು ತಿಂಗಳಲ್ಲಿ ಪ್ರಜ್ವಲ್ರೇವಣ್ಣ ಜೈಲಿನಿಂದ ಹೊರಬರ್ತಾರೆ ಎಂದು ಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಹೇಳಿದ್ದಾರೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರು, ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರುವ ತಮ್ಮ ಸಹೋದರ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಇನ್ನೊಂದು ತಿಂಗಳಲ್ಲಿ ಬಿಡುಗಡೆಯಾಗಲಿದ್ದಾರೆ ಎಂದು ಹೇಳಿದರು. ಅವರು ಶೀಘ್ರದಲ್ಲೇ ನಮ್ಮೊಂದಿಗೆ ಇರುತ್ತಾರೆ, ಚಿಂತಿಸುವ ಅಗತ್ಯವಿಲ್ಲ ಎಂದು ಅವರು  ಭವಿಷ್ಯ ನುಡಿದಿದ್ದಾರೆ.

ಕ್ರಿಕೆಟ್ ಪಂದ್ಯಾವಳಿಯಿಂದ ಒಂದು ಸಂಘಟನೆ ಮನೋಭಾವ ನಿಮ್ಮಲ್ಲಿ ಬರಲ್ಲ. ನಾವು ದಿನ ಬೆಳಗ್ಗೆ ಆದರೆ ನಿಮ್ಮ ಜೊತೆ ಎಲ್ಲಾ ಕಾರ್ಯಕ್ರಮಗಳನ್ನು ಭಾಗವಹಿಸುತ್ತೇವೆ. ರೇವಣ್ಣ ಅವರು ಎಲ್ಲಾ ಹಳ್ಳಿಗಳಿಗೂ ರಸ್ತೆಗಳನ್ನು ಮಾಡಿದರು. ಈಗೀನ ಜನರೇಷನ್ನಲ್ಲಿ ಎಲ್ಲಾ ಹಳ್ಳಿಗಳಲ್ಲೂ ದೇವಾಲಯ ನಿರ್ಮಾಣ ಮಾಡ್ತಿದ್ದಾರೆ. ನಮ್ಮ ಗ್ರಾಮಕ್ಕೆ ಯಾರು ಹಿತ, ಯಾರು ಅಹಿತ ಅಂತ ಯೋಚನೆ ಮಾಡಬೇಕು. ಶಾಸ್ವತವಾಗಿ ನಿಮ್ಮ ಗ್ರಾಮದ ಕೆಲಸ ಮಾಡಿದವರನ್ನು ಏಕೆ ನೆನಪಿಸಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರನ್ನು ಸೂರಜ್ ರೇವಣ್ಣ ಪ್ರಶ್ನೆ ಮಾಡಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow