Champion Trophy: ಇಂದು ಭಾರತಕ್ಕೆ ಆಸಿಸ್ ಸವಾಲು; ಉಭಯ ತಂಡಗಳ ಜಿದ್ದಾಜಿದ್ದು ಹೇಗಿದೆ!? ಇಲ್ಲಿದೆ ರೆಕಾರ್ಡ್ ಲೀಸ್ಟ್!

ಮಾರ್ಚ್ 4, 2025 - 08:55
 0  9
Champion Trophy: ಇಂದು ಭಾರತಕ್ಕೆ ಆಸಿಸ್ ಸವಾಲು;  ಉಭಯ ತಂಡಗಳ ಜಿದ್ದಾಜಿದ್ದು ಹೇಗಿದೆ!? ಇಲ್ಲಿದೆ ರೆಕಾರ್ಡ್ ಲೀಸ್ಟ್!

ಚಾಂಪಿಯನ್ ಟ್ರೋಫಿಯಲ್ಲಿ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ನಡೆಯುವ ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾವನ್ನು ಎದುರಿಸಲಿದೆ. 

ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಎರಡೂ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಆದರೆ ಐಸಿಸಿ ಟೂರ್ನಿಗಳಲ್ಲಿ ಭಾರತ ಹಾಗೂ ಆಸೀಸ್ ನಡುವಿನ ಕಾಳಗದಲ್ಲಿ ಆಸೀಸ್ ತಂಡವೇ ಮೇಲುಗೈ ಸಾಧಿಸಿರುವ ಕಾರಣ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಕೊಂಚ ಆತಂಕ ಮನೆ ಮಾಡಿದೆ. ಆದಾಗ್ಯೂ ಆಸೀಸ್ ತಂಡದಲ್ಲಿ ಇಂಜುರಿಗಳ ಸಮಸ್ಯೆ ಹೆಚ್ಚಿರುವ ಕಾರಣ, ಇದರ ಜೊತೆಗೆ ದುಬೈನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಇದು ಮೊದಲ ಪಂದ್ಯವಾಗಿರುವ ಕಾರಣ, ಕಾಂಗರೂಗಳಿಗಿಂತ ಟೀಂ ಇಂಡಿಯಾವೇ ಕೊಂಚ ಬಲಿಷ್ಠವಾಗಿ ಕಾಣುತ್ತಿದೆ

ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯಾ ಬಲಾಢ್ಯವಾಗಿದೆ. ಆದರೆ ಸದ್ಯದ ಭಾರತದ ಪ್ರದರ್ಶನ ಎದುರಾಳಿಗಳಿಗೆ ನಡುಕ ಹುಟ್ಟಿಸುವಂತಿದೆ. ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಈಗಾಗಲೇ ಕ್ರಿಕೆಟ್‌ ಅಂಗಳದಲ್ಲಿ 151 ಏಕದಿನ ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಈ ವೇಳೆ ಭಾರತ 57 ಪಂದ್ಯಗಳಲ್ಲಿ ಜಯ ದಾಖಲಿಸಿದರೆ, ಆಸ್ಟ್ರೇಲಿಯಾ 84 ಪಂದ್ಯಗಳನ್ನು ಗೆದ್ದು ಬೀಗಿದೆ. 10 ಪಂದ್ಯಗಳು ಫಲಿತಾಂಶ ಹೀನವಾಗಿವೆ. ತಟಸ್ಥ ಸ್ಥಳದಲ್ಲಿ ಭಾರತ 10 ಪಂದ್ಯಗಳನ್ನು ಗೆದ್ದರೆ, ಆಸೀಸ್‌ 12ರಲ್ಲಿ ಜಯ ದಾಖಲಿಸಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಈಗಾಗಲೇ ಐಸಿಸಿ ಟೂರ್ನಿಗಳ ನಾಕೌಟ್‌ ಹಂತದಲ್ಲಿ ಒಟ್ಟು 7 ಬಾರಿ ಮುಖಾಮುಖಿ ಆಗಿವೆ. ಈ ವೇಳೆ ಭಾರತ 3 ಪಂದ್ಯಗಳಲ್ಲಿ ಜಯ ದಾಖಲಿಸಿದರೆ, ಆಸೀಸ್‌ 4 ಪಂದ್ಯಗಳನ್ನು ತನ್ನದಾಗಿಸಿಕೊಂಡಿದೆ. ಏಕದಿನ ವಿಶ್ವಕಪ್‌ನಲ್ಲಿ ಉಭಯ ತಂಡಗಳು 4 ಬಾರಿ ಮುಖಾಮುಖಿ ಆಗಿದ್ದು, ಭಾರತ 1, ಆಸೀಸ್‌ 3 ಪಂದ್ಯಗಳಲ್ಲಿ ಜಯ ದಾಖಲಿಸಿದೆ. ಇನ್ನು ಟಿ20 ವಿಶ್ವಕಪ್‌ನಲ್ಲಿ ಆಡಿದ ಒಂದು ಪಂದ್ಯವನ್ನು ಭಾರತ ಗೆದ್ದಿದೆ. 2023ರಲ್ಲಿ ನಡೆದಿದ್ದ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್ಸ್‌ಶಿಪ್‌ ಫೈನಲ್‌ನಲ್ಲಿ ಆಸೀಸ್‌ ಗೆದ್ದು ಕೊಂಡು ಬೀಗಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಈಗಾಗಲೇ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 4 ಬಾರಿ ಮುಖಾಮುಖಿಯಾಗಿದ್ದು, ಭಾರತ 2ರಲ್ಲಿ ಗೆಲುವು, 1 ಸೋಲು, 1 ಫಲಿತಾಂಶ ಹೀನವಾಗಿದೆ. ಈ ಬಾರಿಯೂ ಉಭಯ ತಂಡಗಳ ನಡುವಿನ ಜಿದ್ದಾಜಿದ್ದು ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. ಮಾರ್ಡನ್‌ ಡೇ ಕ್ರಿಕೆಟ್‌ನಲ್ಲಿ ಈ ಪಂದ್ಯವನ್ನು ನೋಡಲೇ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಈ ಎರಡೂ ತಂಡಗಳಲ್ಲಿ ಸ್ಟಾರ್‌ ಆಟಗಾರರ ದಂಡೇ ಇದೆ. ಈ ಸ್ಟಾರ್‌ ಆಟಗಾರರು ತಮ್ಮ ಅಬ್ಬರದ ಆಟದ ಮೂಲಕ ಗೆಲುವಿನಲ್ಲಿ ಮಿಂಚಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಡಗಳನ್ನು ತುಲನೆ ಮಾಡಿದಾಗ ಭಾರತ ತಂಡ ಕೊಂಚ ಬ್ಯಾಲೆನ್ಸ್‌ ರೀತಿ ಕಾಣುತ್ತದೆ. ಆಸ್ಟ್ರೇಲಿಯಾ ತಂಡದಲ್ಲಿ ಅನುಭವಿ ವೇಗದ ಬೌಲರ್‌ಗಳ ಕೊರತೆ ಎದ್ದು ಕಾಣುತ್ತಿದೆ. ಇದನ್ನೇ ಟೀಮ್ ಇಂಡಿಯಾ ಬಳಸಿಕೊಂಡು ಸ್ಥಿರ ಪ್ರದರ್ಶನ ನೀಡಿ ಗೆಲುವು ದಾಖಲಿಸುತ್ತದಾ, 2023ರ ಏಕದಿನ ವಿಶ್ವಕಪ್‌ ಹಾಗೂ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಸೋಲಿನ ಸೇಡು ತೀರಿಸಿಕೊಳ್ಳುತ್ತದಾ ಎಂಬುದನ್ನು ಕಾದು ನೋಡಬೇಕಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow