ಯತ್ನಾಳ್, ಪ್ರತಾಪ್ ಫೈರ್ ಅಲ್ಲ, ಬಿಜೆಪಿಯವರು ಕಿತ್ತು ಬಿಸಾಡಿರುವ ಪೈರು: ಪ್ರದೀಪ್ ಈಶ್ವರ್ ವ್ಯಂಗ್ಯ
ಬೆಂಗಳೂರು: ಯತ್ನಾಳ್, ಪ್ರತಾಪ್ ಫೈರ್ ಅಲ್ಲ, ಬಿಜೆಪಿಯವರು ಕಿತ್ತು ಬಿಸಾಡಿರುವ ಪೈರು ಎಂದು ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮದ ಬಗ್ಗೆ ಇಷ್ಟು ಮಾತಾಡ್ತಾರಲ್ಲ, ಎಷ್ಟು ಹಿಂದೂ ದೇವಾಲಯಗಳನ್ನು ಉದ್ಧಾರ ಮಾಡಿದ್ದಾರೆ ಇವರು? ಯತ್ನಾಳ್ ಹಾಗೂ ಪ್ರತಾಪ್ ಫೈರ್ ಅಲ್ಲ, ಬಿಜೆಪಿಯವರು ಕಿತ್ತು ಬಿಸಾಡಿರುವ ಪೈರು ನೀವು ಎಂದು ಲೇವಡಿ ಮಾಡಿದರು.
99% ಗಣೇಶ ವಿಸರ್ಜನೆ ಆಗಿದೆ. ಎಲ್ಲೋ ಒಂದೆರಡು ಕಡೆ ಸಮಸ್ಯೆ ಆಗಿದೆ. ತಪ್ಪು ಯಾರು ಮಾಡಿದರು ತಪ್ಪೇ. ಹಿಂದೂ ಮುಸ್ಲಿಂ, ಕ್ರಿಶ್ಚಿಯನ್ ಯಾರು ಮಾಡಿದರು ತಪ್ಪೇ. ಅದಕ್ಕೆ ಧರ್ಮ ಲೇಪನ ಮಾಡುವುದು ಯಾಕೆ? ಅವರನ್ನ ಅರೆಸ್ಟ್ ಮಾಡಿದ್ದೀವಿ ತಾನೆ. ಅವರನ್ನ ಒದ್ದು ಒಳಗೆ ಹಾಕಿದ್ದೇವೆ. ಪ್ರತಾಪ್ ಸಿಂಹ ಹೀಗೆ ಸ್ಟ್ರೈಕ್ ಮಾಡಿದರೆ ಆತನನ್ನು ಒದ್ದು ಒಳಗೆ ಹಾಕುತ್ತೇವೆ.
ಕಾನೂನು ಕೈಗೆ ತಗೆದುಕೊಂಡರೆ ಪ್ರತಾಪ್ ಆದರೇನು, ಯತ್ನಾಳ್ ಆದರೇನು, ಅವರ ಅಪ್ಪ ಆದರೇನು, ಅವರ ಅಜ್ಜ ಆದರೇನು ಒದ್ದು ಒಳಗೆ ಹಾಕುತ್ತೇವೆ. ಲಾ ಅಂಡ್ ಆರ್ಡರ್ ಕಂಟ್ರೋಲ್‌ಗೆ ಬರುವಾಗ ಇವರು ಹೋಗಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ನಾನು ಯತ್ನಾಳ್‌ಗೆ ಬಹಿರಂಗ ಸವಾಲು ಹಾಕುತ್ತೇನೆ. ದೇವಸ್ಥಾನಕ್ಕೆ ಬನ್ನಿ ಹಿಂದೂ ಧರ್ಮದ ಬಗ್ಗೆ ಚರ್ಚೆ ಮಾಡೋಣ. ಸುಮ್ಮನೆ ವಿಭೂತಿ ಹಾಕಿಕೊಂಡು ಬರೋದಲ್ಲ ಎಂದು ಸವಾಲೆಸೆದರು.
ನಿಮ್ಮ ಪ್ರತಿಕ್ರಿಯೆ ಏನು?