ಪ್ರಿಯಕರನಿಗಾಗಿ 4 ವರ್ಷದ ಮಗಳನ್ನು ಕೊಂದ ಪಾಪಿ ತಾಯಿ: ಹಾವೇರಿಯಲ್ಲಿ ಘೋರ ಘಟನೆ
ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಆನ್ವೇರಿ ಗ್ರಾಮದಲ್ಲಿ ತಾಯಿಯೇ ತನ್ನ ಮಗಳನ್ನು ಕೊಂದು ಹಾಕಿದ ದಾರುಣ ಘಟನೆ ಬೆಳಕಿಗೆ ಬಂದಿದೆ.
ಆಗಸ್ಟ್ 5ರಂದು ಗಂಗಮ್ಮ ಎಂಬ ಮಹಿಳೆ ತನ್ನ ಪ್ರಿಯಕರ ಅಣ್ಣಪ್ಪ ಮಡಿವಾಳ ಜೊತೆ ಸೇರಿ, ಕೇವಲ 4 ವರ್ಷದ ಪ್ರಿಯಾಂಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ನಂತರ ಶವವನ್ನು ತುಂಗಾ ಮೇಲ್ದಂಡೆ ಕಾಲುವೆಯ ಬಳಿ ಸುಟ್ಟುಹಾಕಲು ಪ್ರಯತ್ನಿಸಿರುವುದು ತಿಳಿದುಬಂದಿದೆ.
ಘಟನೆ ಪತ್ತೆಯಾಗಿದ್ದು ಗಂಗಮ್ಮನ ಪತಿ ತನ್ನ ಮಗಳಿಗಾಗಿ ಬಂದಾಗ. ಗಂಡನಿಗೆ ಮಗಳು ಸಿಕ್ಕದೇ ಇದ್ದ ಕಾರಣ ಶಂಕೆ ಮೂಡಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಗಂಗಮ್ಮ ಹಾಗೂ ಅಣ್ಣಪ್ಪ ಮಡಿವಾಳರನ್ನು ಬಂಧಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?