ಅಣ್ಣಾ ತಪ್ಪಾಯ್ತು: ಶಿವಣ್ಣ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಡೆನೂರು ಮನು!
ನಟಿಗೆ ಕಿರುಕುಳ, ಲೈಂಗಿಕ ದೌರ್ಜನ್ಯ, ವಂಚನೆ ಸೇರಿದಂತೆ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಜೈಲುವಾಸ ಅನುಭವಿಸಿದ್ದ ಮಡೆನೂರು ಮನು ಶಿವಣ್ಣನ ಬಳಿ ಕ್ಷಮೆ ಕೇಳಿದ್ದಾರೆ. ಮನು ಬಂಧನದ ಬಳಿಕ ನಟ ಶಿವರಾಜ್ ಕುಮಾರ್, ದರ್ಶನ್, ಧ್ರುವ ಸರ್ಜಾ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು.
ಈ ಆಡಿಯೋನಲ್ಲಿ ಶಿವಣ್ಣನ ಬಗ್ಗೆ ಮಾಡಿದ ಮಾತುಗಳಿಗೆ ರಾಜ್ ಕುಮಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಕಂಠೀರವ ಸ್ಟುಡಿಯೋಗೆ ಶಿವಣ್ಣ ಬರುವ ಸುದ್ದಿಯನ್ನು ಕೇಳಿದ ಮನು ಶಿವಣ್ಣ ಭೇಟಿ ಮಾಡಲು ಹೋಗಿ, ಕಾರಿನಿಂದ ಇಳಿಯುತ್ತಿದ್ದಂತೆ ಅವರ ಕಾಲಿಗೆ ಬಿದ್ದು ನಾನು ಆಡಿದ ಮಾತು ತಪ್ಪು ಎಂದು ಕ್ಷಮೆ ಕೇಳಿದ್ದಾರೆ.
ಅದೊಂದೇ ಸಂದರ್ಭದಲ್ಲಿ, ಮನು “ನಾವು ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ರೀ ರಿಲೀಸ್ ಮಾಡಬೇಕು, ನೀವು ಒಪ್ಪಿಗೆ ಕೊಟ್ಟರೆ ಮಾಡುತ್ತೇವೆ” ಎಂದು ಕೇಳಿದರು. ಶಿವಣ್ಣ ಅವರು ಸಿನಿಮಾವನ್ನು ರೀ ರಿಲೀಸ್ ಮಾಡುವಂತೆ ಒಪ್ಪಿಗೆ ನೀಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?