ಇನ್ಮುಂದೆ ಕೊಹ್ಲಿ ಬ್ಯಾಟ್ ತೆಗೆದುಕೊಳ್ಳುವುದಿಲ್ಲ: ರಿಂಕು ಸಿಂಗ್ ಹಿಂಗಳಿದ್ಯಾಕೆ?

ಆಗಸ್ಟ್ 26, 2025 - 08:59
 0  11
ಇನ್ಮುಂದೆ ಕೊಹ್ಲಿ ಬ್ಯಾಟ್ ತೆಗೆದುಕೊಳ್ಳುವುದಿಲ್ಲ: ರಿಂಕು ಸಿಂಗ್ ಹಿಂಗಳಿದ್ಯಾಕೆ?

ಹಿರಿಯ ಆಟಗಾರರ ಬ್ಯಾಟ್​ ಪಡೆಯುವುದು ಎಂದರೆ ಜೂನಿಯರ್ ಪ್ಲೇಯರ್​ಗಳಿಗೆ ತುಂಬಾ ಇಷ್ಟ. ಇದೇ ರೀತಿ ಯಂಗ್ ಬ್ಯಾಟರ್ ರಿಂಕು ಸಿಂಗ್, ವಿರಾಟ್​ ಕೊಹ್ಲಿಯಿಂದ ಬ್ಯಾಟ್ ಇಸ್ಕೊಂಡಿದ್ದರು. ಆದರೆ ಈಗ ಇನ್ನೊಮ್ಮೆ ಕೊಹ್ಲಿಯಿಂದ ಬ್ಯಾಟ್ ಪಡೆಯುವುದಿಲ್ಲ ಎಂದು ಹೇಳಿದ್ದಾರೆ. 

ಈ ಬಗ್ಗೆ  ಮಾತನಾಡಿದ ರಿಂಕು ಸಿಂಗ್, 2024ರ ಐಪಿಎಲ್ ಟೂರ್ನಿಯ ಪಂದ್ಯದ ಸಮಯದಲ್ಲಿ ವಿರಾಟ್ ಕೊಹ್ಲಿಯನ್ನ ಮೀಟ್ ಆಗಿ, ಬ್ಯಾಟ್ ಅನ್ನು ಪಡೆದುಕೊಂಡಿದ್ದೆ. ಬ್ಯಾಟ್​ಗಾಗಿ ಅವರ ಹಿಂದೆ ಹೋಗಿದ್ದನ್ನ ಕ್ಯಾಮೆರಾಮ್ಯಾನ್ ಸೆರೆ ಹಿಡಿದಿದ್ದರು. ಇದಾದ ಮೇಲೆ ಆ ಬ್ಯಾಟ್ ಮುರಿದು ಹೋಯಿತು. ಆದರೆ ಆ ವಿಡಿಯೋದಿಂದ ನನಗೆ ಹಾಗೂ ಕೊಹ್ಲಿ ಭಾಯ್​ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ವಿರಾಟ್ ಕೊಹ್ಲಿಯಿಂದ ಪಡೆದಿದ್ದ ಬ್ಯಾಟ್ ಆಮೇಲೆ ಮುರಿದು ಹೋದ ಮೇಲೆ ಕೊಹ್ಲಿ ಮತ್ತೊಂದು ಬ್ಯಾಟ್​ ಕೊಡಲು ಇಷ್ಟ ಎಲ್ಲ ಎಂದರು. ಆ ಮೇಲೆ ಅವರ ಬಳಿ ಬ್ಯಾಟ್ ಕೇಳಲು ನಾನು ಹೋಗಲೇ ಇಲ್ಲ. ಅದನ್ನು ಅಲ್ಲಿಗೆ ನಿಲ್ಲಿಸಿಬಿಟ್ಟೆ. ನಂತರದ ದಿನಗಳಲ್ಲಿ ಕೊಹ್ಲಿ ಜೊತೆ ನಾನು ಕಾಣಿಸಿಕೊಳ್ಳಲಿಲ್ಲ. ಆದರೆ ಎಂ.ಎಸ್ ಧೋನಿ ಹಾಗೂ ರೋಹಿತ್ ಶರ್ಮಾರಿಂದಲೂ ಬ್ಯಾಟ್ ಹಿಸ್ಕೊಂಡಿದ್ದೇನೆ. ಇಂತಹ ಅನುಭವಸ್ಥ ಆಟಗಾರರಿಂದ ಬ್ಯಾಟ್ ಪಡೆಯುವುದು ಎಂದರೆ ಅಷ್ಟು ಸಾಮಾನ್ಯ ವಿಷ್ಯವಲ್ಲ ಎಂದು ರಿಂಕು ಸಿಂಗ್ ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow