ಯಾವುದೇ ಕಾರಣಕ್ಕೂ APL, BPL ಕಾರ್ಡ್ ರದ್ದು ಮಾಡಲ್ಲ: ಕೆ.ಹೆಚ್.ಮುನಿಯಪ್ಪ ಸ್ಪಷ್ಟನೆ

ನವೆಂಬರ್ 21, 2024 - 16:15
 0  12
ಯಾವುದೇ ಕಾರಣಕ್ಕೂ APL, BPL ಕಾರ್ಡ್ ರದ್ದು ಮಾಡಲ್ಲ: ಕೆ.ಹೆಚ್.ಮುನಿಯಪ್ಪ ಸ್ಪಷ್ಟನೆ

 ಬೆಂಗಳೂರು: ಯಾವುದೇ ಕಾರಣಕ್ಕೂ APL, BPL ಕಾರ್ಡ್ ರದ್ದು ಮಾಡಲ್ಲ ಎಂದು ಆಹಾರ ನಾಗರೀಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಸ್ಪಷ್ಟನೆ ನೀಡಿದ ಅವರು, ಯಾವುದೇ ಅರ್ಹ ಬಿಪಿಎಲ್, ಎಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವುದಿಲ್ಲ. 66% ಬಿಪಿಎಲ್ ಕಾರ್ಡ್‌ಗಳಲ್ಲಿ ಅನರ್ಹರನ್ನ ಮಾತ್ರ ಎಪಿಎಲ್‌ಗೆ ಸೇರಿಸಲಾಗಿದೆ. ತೆರಿಗೆ ಪಾವತಿದಾರರು, ಸರ್ಕಾರಿ ನೌಕರರ ಕುಟುಂಬಗಳ ಬಿಪಿಎಲ್ ಕಾರ್ಡ್‌ಗಳನ್ನ ಮಾತ್ರ ಎಪಿಎಲ್‌ಗೆ ಸೇರಿಸಲಾಗಿದೆ. ಅನರ್ಹ ಇರಬಹುದೆನ್ನುವ ಕಾರ್ಡ್‌ಗಳನ್ನ ಮಾತ್ರ ಅಮಾನತ್ತಿನಲ್ಲಿಡಲಾಗಿದೆ ಎಂದು ಹೇಳಿದರು.

ಒಂದು ವೇಳೆ ಬಿಪಿಎಲ್ ಗೆ ಅರ್ಹರಿದ್ದು, ಎಪಿಎಲ್ ಆಗಿದ್ರೆ  ಅಂತವರಿಗೆ ಪುನರ್ ಸ್ಥಾಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಅನರ್ಹರ ಕಾರ್ಡ್‌ಗಳನ್ನು ಪರೀಷ್ಕರಿಸಲಾಗಿದೆ.  ರಾಜ್ಯದಲ್ಲಿ ಒಟ್ಟು 1,50,59,431 ಒಟ್ಟು ಕಾರ್ಡ್ ಗಳಿವೆ. ಅವರಲ್ಲಿ ಆದಾಯ ತೆರಿಗೆ ಹಾಗೂ ಸರ್ಕಾರಿ ನೌಕರರು ಹೊಂದಿರೋ ಒಟ್ಟು ಎಪಿಎಲ್ ಕಾರ್ಡ್ 1,02,509 ಕಾರ್ಡ್ ಗಳಿವೆ. ಈ ಪೈಕಿ 8447 ಮಾತ್ರ ಕಾರ್ಡ್ ಗಳು ಮಾತ್ರ ಅಮಾನತು ಮಾಡಲಾಗಿದೆ. ಆದಾಯ ತೆರಿಗೆ ಪಾವತಿ ಮಾಡೋ 98473 ಕಾರ್ಡ್, ಸರ್ಕಾರಿ ನೌಕರರದ್ದು 4036. ಕಾರ್ಡ್ ಗಳು, ಇದನ್ನ ಹೊರತು ಪಡಿಸಿ ಬೇರೆ ಕಾರ್ಡ್ ಗಳ ಪರಿಷ್ಕರಣೆ ಇಲ್ಲ ಎಂದು ಸಚಿವರು ತಿಳಿಸಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow