ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆಯೇ ಹೊರತು ಯುದ್ಧವಲ್ಲ: ಪ್ರಧಾನಿ ಮೋದಿ

ರಷ್ಯಾ: ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆಯೇ ಹೊರತು ಯುದ್ಧವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಷ್ಯಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ನಮ್ಮ ವಿಧಾನವು ಜನಕೇಂದ್ರಿತವಾಗಿರಬೇಕು. ಬ್ರಿಕ್ಸ್ ವಿಭಜನೆ ಮಾಡುವುದಕ್ಕಾಗಿ ಅಲ್ಲ. ನಾವು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆಯೇ ಹೊರತು ಯುದ್ಧವಲ್ಲ ಎಂದು ಹೇಳಿದ್ದಾರೆ.
ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವವರನ್ನು ಎದುರಿಸಲು ನಮಗೆ ಎಲ್ಲರ ಏಕ ಮನಸ್ಸಿನ ಮತ್ತು ದೃಢವಾದ ಬೆಂಬಲ ಬೇಕು. ಈ ಗಂಭೀರ ವಿಷಯದಲ್ಲಿ ಎರಡು ಮಾನದಂಡಗಳಿಗೆ ಸ್ಥಳವಿಲ್ಲ ಎಂದು ಒತ್ತಿ ಹೇಳಿದ್ದಾರೆ.
ಇನ್ನೂ ಹಣದುಬ್ಬರವನ್ನು ತಡೆಗಟ್ಟುವುದು ಮತ್ತು ಆಹಾರ, ಶಕ್ತಿ, ಆರೋಗ್ಯ ಮತ್ತು ನೀರಿನ ಭದ್ರತೆಯನ್ನು ಖಾತ್ರಿಪಡಿಸುವುದು ಆದ್ಯತೆಯ ವಿಷಯಗಳಾಗಿವೆ. ತಂತ್ರಜ್ಞಾನದ ಈ ಯುಗದಲ್ಲಿ ತಪ್ಪು ಮಾಹಿತಿ (ಆನ್ಲೈನ್ನಲ್ಲಿ ಹರಡುವಿಕೆ) ಮತ್ತು ಡೀಪ್ಫೇಕ್ ಮೊದಲಾದ ಸೈಬರ್ ವಂಚನೆಗಳಂತಹ ಹೊಸ ಸವಾಲುಗಳು ಎದುರಾಗಿವೆ ಎಂದು ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






