ರಾಮನಗರ: ಸ್ಟೇರಿಂಗ್ ರಾಡ್ ಕಟ್ಟಾಗಿ ಹಳ್ಳಕೆ ಉರುಳಿದ KSRTC ಬಸ್ - 23 ಮಂದಿಗೆ ಗಾಯ

ತಾಲೋಕಿನ ಅತ್ತಿಂಗೆರೆ ಕ್ರಾಸ್ ಬಳಿ ಘಟನೆ ನಡೆದಿದೆ.
ರಾಮನಗರದಿಂದ ಮಾಗಡಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಅತ್ತಿಂಗೆರೆ ಗ್ರಾಮದ ತಿರುವಿನಲ್ಲಿ ಸ್ಟೇರಿಂಗ್ ರಾಡ್ ಕಟ್ಟಾಗಿ ಬಲಭಾಗದ ಹಳ್ಳಕೆ ಉರುಳಿದ ರಬಸಕ್ಕೆ ಬಸ್ ನಲ್ಲಿ ಕಂಡಾಕ್ಟರ್ ನರೇಂದ್ರ, ಡ್ರೈವರ್ ಕಾಂತರಾಜು, ಮಾಡಬಾಳ್ ಗ್ರಾಮಾಧಿಕಾರಿ ಶಾಂತಮ್ಮ, ಟಿಎಚ್ಒ ಕಚೇರಿಯ ಕಂಪ್ಯೂಟರ್ ಅಪರೇಟರ್ ಲಕ್ಷ್ಮಿ ಬೆಸ್ಕಾಂ ನ ಶೈಲಾ ಸೇರಿದಂತೆ 23 ಕ್ಕೂ ಹೆಚ್ಚು ಮಂದಿಗೆ ತಲೆ,ಕೈಕಾಲು,ಸೋಂಟದ ಭಾಗಗಳಿಗೆ ಗಾಯವಾಗಿದ್ದು ಮಾಗಡಿ ಸಾರ್ವಜನಿಕ ಸರಕಾರಿ ಆಸ್ಪತ್ರೆ ಹಾಗೂ ವೀರೆಗೌಡನದೊಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದು, ತೀವ್ರತರವಾದ ಗಾಯವಾದ 5 ಮಂದಿಯನ್ನು ಬೆಂಗಳೂರಿನ ವಿಕ್ಟೋರಿಯಾ, ನಿಮಾನ್ಸ್ ಅಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಗಾಗಿ ದಾಖಲಿಸಲಾಗಿದೆ.
ಸ್ಟೇರಿಂಗ್ ರಾಡ್ ಕಟ್ಟಾಗಿ ಎಡಭಾಗದಿಂದ ಬಸ್ ಬಲಭಾಗಕ್ಕೆ ತಿರುಗುತ್ತಿದ್ದ ವೇಳೆ ಎದುರುಗಡೆ ಯಾವುದೇ ವಾಹನ ಬಂದಿದ್ದರೆ ಸಾಕಷ್ಟು ಅನಾಹುತ ಸಂಭವಿಸುತಿತ್ತು ಎನ್ನಲಾಗಿದೆ.
ಬಸ್ ಹಳ್ಳಕ್ಕೆ ಉರುಳಿದ ನ್ನು ಕಂಡ ಸ್ಥಳಿಯರು ಕೂಡಲೇ ಬಸ್ ನಲ್ಲಿದ್ದ ಪ್ರಯಾಣಿಕರನ್ನು,ಗಾಯಾಳುಗಳುಗಳನ್ನು ಹೊರಗೆ ತೆಗೆದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮಾನವಿಯತೆ ಮರೆದಿದ್ದಾರೆ.
ಸ್ಥಳಕ್ಕೆ ಅಡಿಷನ್ ಎಸ್ ಪಿ ರಾಮಚಂದ್ರಯ್ಯ, ಸುರೇಶ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಳೆಯ ಬಸ್ ಹಾಗೂ ಸಮರ್ಪಕವಾಗಿ ನಿರ್ವಹಣೆ ಮಾಡಿ ಬಸ್ ಗಳನ್ನು ರೂಟ್ ಗಳಿಗೆ ಕಳುಹಿಸಿರುವ ಕಾರಣ ಈ ಘಟನೆ ನಡೆದಿದೆ ಎಂದು ಸ್ಥಳಿಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






