ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ʼಗೆ ಟೆನ್ಷನ್ ಶುರು - ಇವತ್ತು ದೋಷಾರೋಪ ನಿಗದಿ!?
ಬೆಂಗಳೂರು:ಬೆಂಗಳೂರು 57ನೇ ಸೆಷನ್ಸ್ ಕೋರ್ಟ್‌ನಲ್ಲಿ ಇಂದು ಡಿ ಗ್ಯಾಂಗ್ ವಿರುದ್ಧದ ಕೊಲೆ ಪ್ರಕರಣದ ಟ್ರಯಲ್ ಆರಂಭವಾಗುತ್ತಿದೆ. ಚಾರ್ಜ್‌ಶೀಟ್ ಆಧಾರದ ಮೇಲೆ ವಿಚಾರಣೆ ನಡೆಯಲಿದ್ದು, ಆರೋಪ ನಿಗದಿ ಪ್ರಕ್ರಿಯೆ ಪ್ರಮುಖ ಹಂತವಾಗಲಿದೆ.
ಈ ವೇಳೆ ಎಲ್ಲಾ ಆರೋಪಿಗಳ ಕಡ್ಡಾಯ ಹಾಜರಾತಿ ಅಗತ್ಯವಿದೆ. ಜೈಲಿನಿಂದ ನಟ ದರ್ಶನ್‌ರನ್ನು ಸಹ ಕೋರ್ಟ್‌ಗೆ ಹಾಜರುಪಡಿಸಲು ಪೊಲೀಸರು ಸಿದ್ಧರಾಗಿದ್ದಾರೆ. ಟ್ರಯಲ್ ಆರಂಭವಾಗುತ್ತಿರುವುದರಿಂದ ಡಿ ಗ್ಯಾಂಗ್ಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಿದೆ.
ಎ೧ ಆರೋಪಿ ಪವಿತ್ರಾಗೌಡ ಅಂತಾ ಕೂಗಿದಾಗ ಕಟಕಟೆಗೆ ಬರಬೇಕಿದೆ, ನಿಮ್ಮ ಮೇಲೆ ಐಪಿಸಿ ಸೆಕ್ಷನ್ 302 ಕೊಲೆಯತ್ನ, 364 ಕಿಡ್ನ್ಯಾಪ್, 202 ಸಾಕ್ಷಿನಾಶ ಕೇಸ್ ದಾಖಲಾಗಿದೆ. ಇದನ್ನ ನೀವು ಒಪ್ಕೊತೀರಾ ಅಥವಾ ಅಲ್ಲಗೆಳೆಯುತ್ತೀರಾ ಅಂತಾ ನ್ಯಾಯಾದೀಶರು ಕೇಳಲಿದ್ದಾರೆ. ಇಲ್ಲ ಸ್ವಾಮಿ ಇದೆಲ್ಲಾ ಸುಳ್ಳು ವಿಚಾರಣೆ ನಡೆಯಲಿ ಅಂತಾ ಆರೋಪಿಗಳು ಹೇಳಿಕೆ ನೀಡುವ ಸಾಧ್ಯತೆ ಇದೆ.
ಇದೇ ರೀತಿ ಎಲ್ಲಾ 17 ಆರೋಪಿಗಳನ್ನ ಕರೆದು ಅವರ ಮೇಲೆ ದಾಖಲಾಗಿರೊ ಸೆಕ್ಷನ್ ಬಗ್ಗೆ ನ್ಯಾಯಾಧೀಶರು ವಿವರಣೆ ಕೇಳಲಿದ್ದಾರೆ. ಈ ಪ್ರಕ್ರಿಯೆ ಮುಗಿದ ಮೇಲೆ ದೊಷಾರೋಪ ನಿಗದಿ ಬಳಿಕ ಮುಂದೊಂದು ದಿನ ಟ್ರಯಲ್‌ಗೆ ದಿನಾಂಕ ನ್ಯಾಯಾಧೀಶರು ನಿಗದಿಪಡಿಸಲಿದ್ದಾರೆ. ಇದೇ ವೇಳೆ ಹಾಸಿಗೆ ತಲೆದಿಂಬು ನೀಡುವ ವಿಚಾರ ಕೂಡ ಚರ್ಚೆಗೆ ಬರುವ ಸಾಧ್ಯತೆ ಇದೆ.
ನಿಮ್ಮ ಪ್ರತಿಕ್ರಿಯೆ ಏನು?