ವಿಜಯೇಂದ್ರ ಮುಖ್ಯಮಂತ್ರಿ ಆಗಬೇಕು ಅಂದರೆ ನಿಮ್ಮೆಲ್ಲರ ಸಹಕಾರ ಬೇಕು: ರೇಣುಕಾಚಾರ್ಯ

ಡಿಸೆಂಬರ್ 6, 2024 - 12:03
 0  13
ವಿಜಯೇಂದ್ರ ಮುಖ್ಯಮಂತ್ರಿ ಆಗಬೇಕು ಅಂದರೆ ನಿಮ್ಮೆಲ್ಲರ ಸಹಕಾರ ಬೇಕು: ರೇಣುಕಾಚಾರ್ಯ

ರಾಯಚೂರು: ವಿಜಯೇಂದ್ರ ಮುಖ್ಯಮಂತ್ರಿ ಆಗಬೇಕು ಅಂದರೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಸಿಎಂ ಆಗಬೇಕಾ ಬೇಡ್ವಾ? ಅಧ್ಯಕ್ಷರಾಗಿ ಮುಂದುವರೆಯಬೇಕಾ ಬೇಡ್ವಾ? ಎಂದು ಜನರನ್ನ ಪ್ರಶ್ನಿಸಿದರು. ವಿಜಯೇಂದ್ರ ಮುಖ್ಯಮಂತ್ರಿ ಆಗಬೇಕು ಅಂದರೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು.

ರಾಜ್ಯ ಸರ್ಕಾರ ಹಳ್ಳಿಗಳಿಗೆ ಬಸ್ ಬಿಟ್ಟಿಲ್ಲ ಹೆಣ್ಮಕ್ಕಳು ಹೇಗೆ ಓಡಾಡುತ್ತಾರೆ. ಸರ್ಕಾರವೇ ಟೇಕ್ ಆಫ್ ಆಗಿಲ್ಲ, ರಾಜ್ಯದ ಜನರಿಗೆ ಟೋಪಿ ಹಾಕಿದ್ದಾರೆ. ಅಯೋಗ್ಯ ಜಮೀರ್ ಅಹ್ಮದ್‌ಗೆ ತಕ್ಕ ಉತ್ತರ ಕೊಡಬೇಕು. ವಕ್ಫ್ ಬೋರ್ಡ್ ರದ್ದಾಗಲು ನೋಟಿಸ್ ಕೊಟ್ಟಿದ್ದೀವಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರಿಗೆ ಉತ್ತರ ಕೊಡಲು ಹೋರಾಟ ಸಮಾವೇಶ ಮಾಡುತ್ತಿದ್ದೇವೆ ಎಂದರು.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow