ಸಿಎಂ ಸಾಹೇಬ್ರಿಗೂ ದಂಡದ ಬಿಸಿ: 2,500 ರೂಪಾಯಿ ಟ್ರಾಫಿಕ್ ಫೈನ್ ಕಟ್ಟಿದ ಸಿದ್ದರಾಮಯ್ಯ

ಸೆಪ್ಟೆಂಬರ್ 6, 2025 - 10:47
 0  8
ಸಿಎಂ ಸಾಹೇಬ್ರಿಗೂ ದಂಡದ ಬಿಸಿ: 2,500 ರೂಪಾಯಿ ಟ್ರಾಫಿಕ್ ಫೈನ್ ಕಟ್ಟಿದ ಸಿದ್ದರಾಮಯ್ಯ

ಬೆಂಗಳೂರು:- ಟ್ರಾಫಿಕ್ ಉಲ್ಲಂಘನೆ ಮಾಡಿದ್ದ ಮಾಡಿದ್ದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಕೂಡ 2,500 ರೂಪಾಯಿ ಫೈನ್ ಕಟ್ಟಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ನಿತ್ಯ ಸಂಚಾರ ಮಾಡುವ ಫಾರ್ಚೂನರ್ ಕಾರು 2024ರಿಂದ ಈವರೆಗೂ 7 ಬಾರಿ ಸಂಚಾರ ನಿಯಮಗಳ ಉಲ್ಲಂಘನೆ ಮಾಡಿರುವುದು ಇದೆ. ಈ ಪೈಕಿ 6 ಪ್ರಕರಣಗಳು ಸೀಟು ಬೆಲ್ಟ್ ಧರಿಸದೇ ನಿಯಮ ಉಲ್ಲಂಘಿಸಿದ ಕೇಸ್ ಆಗಿವೆ. ಇವು ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂನಲ್ಲಿ ಸಂಚಾರ ನಿಯಮ ಉಲ್ಲಂಘಿಸಿರುವುದು ಸೆರೆಯಾಗಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ಬೆನ್ನಲೇ ದಂಡ ಪಾವತಿ ಆಗಿದೆ. 

ಸದ್ಯ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಶೇ.50ರಷ್ಟು ದಂಡ ಪಾವತಿಯ ಆಫರ್ ನೀಡಿದ ಹಿನ್ನೆಲೆಯಲ್ಲಿ ಸವಾರರು ದಂಡ ಕಟ್ಟುತ್ತಿದ್ದಾರೆ. ಇದೇ ಆಫರ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅಧಿಕಾರಿಗಳು 2,500 ರೂಪಾಯಿ ದಂಡ ಪಾವತಿ ಮಾಡಿದ್ದಾರೆ. ಇದರಿಂದ ಟ್ರಾಫಿಕ್ ನಿಯಮ ಉಲ್ಲಂಘನೆ ಕೇಸ್ಗಳು ಕ್ಲೀಯರ್ ಆಗಿವೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow