ರಾಯಭಾಗ: ಆಸ್ಪತ್ರೆಗೆ ಅತಿಥಿಯಾಗಿ ಬಂದ ಸರ್ಪ: ಆತಂಕಗೊಂಡ ರೋಗಿಗಳು
ರಾಯಭಾಗ: ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸರ್ಪ ಕಾಣಿಸಿಕೊಂಡ ಘಟನೆ ನಡೆದಿದೆ.
ಆಸ್ಪತ್ರೆಯ ಒಳಗೆ ಅಚಾನಕ್ ಸರ್ಪ ಕಾಣಿಸಿಕೊಂಡ ತಕ್ಷಣ ರೋಗಿಗಳು ಹಾಗೂ ಬಂಧುಬಳಗ ಆತಂಕದಿಂದ ಓಡಾಡಿದರು. ಕೆಲಕಾಲ ಗೊಂದಲಮಯ ವಾತಾವರಣ ನಿರ್ಮಾಣವಾಗಿ ರೋಗಿಗಳು ಭೀತಿಗೊಳಗಾದರು.
ಈ ವೇಳೆ ಸ್ಥಳೀಯ ಯುವಕರು ಧೈರ್ಯದಿಂದ ಮುಂದೆ ಬಂದು ಸರ್ಪವನ್ನು ಸುರಕ್ಷಿತವಾಗಿ ಹಿಡಿದು, ಯಾರಿಗೂ ಅಪಾಯವಾಗದಂತೆ ನಿರ್ಜನ ಪ್ರದೇಶಕ್ಕೆ ಬಿಟ್ಟು ಮಾನವೀಯತೆ ಮೆರೆದರು.ಘಟನೆಯ ನಂತರ ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಗಳು ಉಸಿರೆಳೆದಿದ್ದು, ಸ್ಥಳೀಯರ ಎಚ್ಚರಿಕೆಯಿಂದ ದೊಡ್ಡ ಅವಘಡ ತಪ್ಪಿದಂತಾಗಿದೆ.
ಮಳೆಗಾಲದಲ್ಲಿ ಹಾವುಗಳು ಹೆಚ್ಚಾಗಿ ಮನೆ, ಶಾಲೆ ಹಾಗೂ ಸಾರ್ವಜನಿಕ ಕಟ್ಟಡಗಳಿಗೆ ನುಗ್ಗುವ ಸಾಧ್ಯತೆ ಇದೆ. ಆದ್ದರಿಂದ ಎಚ್ಚರಿಕೆ ವಹಿಸಲು ವೈದ್ಯಕೀಯ ಸಿಬ್ಬಂದಿ ಹಾಗೂ ಜನತೆಗೆ ಸೂಚಿಸಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?