“ಚಾಮುಂಡಿ ಶಾಪ ತಟ್ಟಬಾರದು ಅಂದರೆ ಬಾನು ಮುಷ್ತಾಕ್ ಹಿಂದೆ ಸರಿಯಲಿ”: ಯತ್ನಾಳ್ ಆಕ್ರೋಶ

ಸೆಪ್ಟೆಂಬರ್ 4, 2025 - 18:21
 0  9
“ಚಾಮುಂಡಿ ಶಾಪ ತಟ್ಟಬಾರದು ಅಂದರೆ ಬಾನು ಮುಷ್ತಾಕ್ ಹಿಂದೆ ಸರಿಯಲಿ”: ಯತ್ನಾಳ್ ಆಕ್ರೋಶ

ಬೆಂಗಳೂರು: ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಂಡಿಸಿದ್ದಾರೆ.

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,ದಸರಾ ಕೇವಲ ಸಾಂಸ್ಕೃತಿಕ ಉತ್ಸವವಲ್ಲ; ಇದು ಸನಾತನ ಹಿಂದೂ ಧಾರ್ಮಿಕ ಆಚರಣೆ ಆಧಾರಿತ ಕಾರ್ಯಕ್ರಮ. ಚಾಮುಂಡಿ ದೇವಿಯ ಮೆರವಣಿಗೆಯನ್ನು ಪುಷ್ಪಾರ್ಚನೆ ಮಾಡಿ ಉದ್ಘಾಟಿಸಲಾಗುತ್ತದೆ. ಕನ್ನಡ ಬಾವುಟ ಹಾಗೂ ಅರಶಿನ-ಕುಂಕುಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವುದು ಸರಿಯಲ್ಲ,” ಎಂದು ಹೇಳಿದರು.

ಮುಂದುವರಿದ ಅವರು, “ಚಾಮುಂಡಿ ತಾಯಿಯ ಶಾಪ ತಟ್ಟಬಾರದು ಅಂದರೆ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆಯಿಂದ ಹಿಂದೆ ಸರಿಯುವುದು ಒಳಿತು” ಎಂದು ಆಗ್ರಹಿಸಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow