ಡಾಕ್ಟರ್ ಕರ್ಣ ಆಗಿ ಬರ್ತಿದ್ದಾರೆ ಕನ್ನಡತಿ ಹೀರೋ: ಈ ಮೂವರಲ್ಲಿ ನಾಯಕಿ ಯಾರಾಗ್ತಾರೆ?

ಕನ್ನಡತಿ ಮೂಲಕ ಕಿರುತೆರೆಯ ಸೂಪರ್ ಸ್ಟಾರ್ ಆಗಿ ಮಿಂಚಿದ ಕಿರಣ್ ರಾಜ್ ಅವರು ಹೊಸ ಸೀರಿಯಲ್ ಮೂಲಕ ಮತ್ತೆ ಜನಮನ ಸೆಳೆಯಲು ಮುಂದಾಗಿದ್ದಾರೆ.
ಕರ್ಣ ಟೋಟಲಿ ವಿಭಿನ್ನ ಧಾರಾವಾಹಿ. ನಾಯಕನ ಪಾತ್ರ ಹಲವು ಆಯಾಮಗಳಲ್ಲಿ ಸಾಗುತ್ತೆ. ತೂಕ ಇರೋ ಪಾತ್ರ. ಮನೆಯವರ ದ್ವೇಷದ ನಡುವೆಯೂ ಮಗನಾಗಿ ಕರ್ತವ್ಯ ನಿರ್ವಹಿಸೋದು, ಊರಿಗೆ ಬೇಕಾದ ವ್ಯಕ್ತಿಯಾಗಿರ್ತಾನೆ. ಲವರ್ ಬಾಯ್.. ಆದರೆ ಮುಂದೆ ಸೈಕೋ ಆಗ್ತಾನೆ. ಹೀಗೆ ಸಾಕಷ್ಟು ಪರ್ಫಾಮನ್ಸ್ ಬಯಸುವ ಅದ್ಭುತವಾದ ಪಾತ್ರ. ಕಿರಣ್ ರಾಜ್ ಪರ್ಫಾಮನ್ಸ್ ಹೇಗಿರಲಿದೆ ಎಂಬ ಕುತೂಹಲ ಸಹಜವಾಗಿಯೇ ಇದೆ. ಸದ್ಯ ಮತ್ತೊಂದು ವಿಚಾರ ಹೆಚ್ಚು ಚರ್ಚೆ ಆಗ್ತಿದೆ. ಕಿರಣ್ಗೆ ನಾಯಕಿ ಆಗೋರು ಯಾರು?
ಕರ್ಣ ಪ್ರೋಮೋ ರಿಲೀಸ್ ಆಗುತ್ತಿದ್ದಂತೆ ಕಿರಣ್ ರಾಜ್ ಅವರಿಗೆ ಶುಭಾಶಯಗಳ ಮಾಹಾಪೂರವೇ ಹರಿದು ಬಂದಿದೆ. ಜೊತೆಗೆ ನಾಯಕಿ ಯಾರು ಆಗಲಿದ್ದಾರೆ ಅನ್ನೋ ಚರ್ಚೆಗಳು ಶುರುವಾಗಿದೆ. ಮುಖ್ಯವಾಗಿ ಕೇಳಿ ಬರ್ತಿರೋ ಹೆಸರುಗಳು ರಂಜಿನಿ ರಾಘವನ್, ಮೋಕ್ಷಿತಾ ಹಾಗೂ ಭವ್ಯಾ. ಕಿರಣ್ ರಾಜ್ ಅಭಿಮಾನಿಗಳೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಮಾಡ್ತಿರೋ ವಿಚಾರ ನಾಯಕಿಯದ್ದು. ರಂಜಿನಿ ಹಾಗೂ ಕಿರಣ್ ಜೋಡಿ ಕನ್ನಡತಿ ಮೂಲಕ ಸೂಪರ್ ಹಿಟ್ ಆಗಿದೆ. ಇದೇ ಜೋಡಿ ಮತ್ತೇ ಮರಳಲ್ಲಿ ಅನ್ನೋದು ಹರ್ಷ ಭುವಿ ಫ್ಯಾನ್ಸ್ ಆಶಯ.
ಇನ್ನೂ, ಬಿಗ್ಬಾಸ್ ಮೂಲಕ ಅಪಾರ ಫ್ಯಾನ್ಸ್ ಸಂಪಾದನೆ ಮಾಡಿರೋ ಮೋಕ್ಷಿತಾ ಹಾಗೂ ಭವ್ಯಾ ಹೆಸರು ಕೇಳಿ ಬರ್ತಿದೆ. ಮೋಕ್ಷಿತಾನೇ ಕಿರಣ್ಗೆ ಬೆಸ್ಟ್ ಜೋಡಿ ಅಂತಿದ್ರೇ, ಇನ್ನೊಂದು ಇಷ್ಟು ಜನ ಇಲ್ಲ.. ಇಲ್ಲ.. ಭವ್ಯಾನೇ ಕಿರಣ್ಗೆ ಜೋಡಿಯಾಗ್ಬೇಕು ಅಂತಿದ್ದಾರೆ. ಕಮೆಂಟ್ ಬಾಕ್ಸ್ನಲ್ಲಿ ತಮ್ಮ ನೆಚ್ಚಿನ ನಟಿಯನ್ನ ಬೆಂಬಲಿಸಿ ಫ್ಯಾನ್ಸ್ಗಳ ವಾರ್ಯೇ ನಡಿತಿದೆ.
ನಿಮ್ಮ ಪ್ರತಿಕ್ರಿಯೆ ಏನು?






