ಐಸ್ ಕ್ರೀಂ ಆಸೆ ತೋರಿಸಿ 9 ವರ್ಷದ ಬಾಲಕಿ ಮೇಲೆ 56 ವರ್ಷದ ವ್ಯಕ್ತಿಯಿಂದ ಅತ್ಯಾಚಾರ!

ಮಾರ್ಚ್ 14, 2025 - 22:04
 0  28
ಐಸ್ ಕ್ರೀಂ ಆಸೆ ತೋರಿಸಿ 9 ವರ್ಷದ ಬಾಲಕಿ ಮೇಲೆ 56 ವರ್ಷದ ವ್ಯಕ್ತಿಯಿಂದ ಅತ್ಯಾಚಾರ!

ಚಿತ್ರದುರ್ಗ: ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅತ್ಯಾಚರಾ ಪ್ರಕರಣಗಳಂತೂ ನಿಂತಿಲ್ಲ, ಇದೀಗ  ಐಸ್ ಕ್ರೀಂ ಆಸೆ ತೋರಿಸಿ ಒಂಬತ್ತು ವರ್ಷದ ಬಾಲಕಿ ಮೇಲೆ 56 ವರ್ಷದ ವ್ಯಕ್ತಿ ಅತ್ಯಾಚಾರ ಮಾಡಿರುವಂತಹ ಘಟನೆ ಚಿತ್ರದುರ್ಗ ನಗರದ ಬಡಾವಣೆಯಲ್ಲಿ ನಡೆದಿದೆ. ಅತ್ಯಾಚಾರ ಮಾಡಿದ ಸಾದಿಕ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು,

ನಗರದ ಅಗಸಹಳ್ಳಿ ಬಡಾವಣೆ ನಿವಾಸಿಯಾಗಿರುವ ಕಾಮುಕ, ಮನೆ ಬಳಿ ಆಡುತ್ತಿದ್ದ 3ನೇ ತರಗತಿ ಓದುವ ಮಗುವಿಗೆ ಐಸ್ ಕ್ರೀಂ ಆಸೆ ತೋರಿಸಿ ಗುಡ್ಡಕ್ಕೆ ಕರೆದೊಯ್ದು ಮೃಗೀಯ ವರ್ತನೆ ಮಾಡಿದ್ದಾನೆ.

ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ಥ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಬಾಲಕಿ ಮೇಲೆ ಅತ್ಯಾಚಾರ ಎಸಗಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ಫೋಕ್ಸೋ ಕೇಸ್ ದಾಖಲು ಮಾಡಲಾಗಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow