ಅಯ್ಯನ ಮನೆಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ 'ರಮೇಶ್ ಇಂದಿರಾ'..! ನಟಿಯಾಗಿ 'ದಿಯಾ' ಆಯ್ಕೆ

ʻಲವ್ ಯೂ ಮನುʼ ಎನ್ನುತ್ತ ಭಯ ಹುಟ್ಟಿಸಿದ್ದ ರಮೇಶ್ ಇಂದಿರಾ ಅವರು ಮತ್ತೆ ನಿರ್ದೇಶನದ ಕ್ಯಾಪ್ ಧರಿಸಿದ್ದಾರೆ. ಸದಾ ಹೊಸ ಬಗೆಯ ಪಾತ್ರಗಳ ಮೂಲಕ ಗಮನ ಸೆಳೆಯುವ ‘ದಿಯಾ ಖ್ಯಾತಿಯ ಖುಷಿ ರವಿ ಮಿನಿ ವೆಬ್ ಸಿರೀಸ್ ಕಥೆ ಹೇಳಲು ರೆಡಿಯಾಗಿದ್ದಾರೆ. ನಟಿ ಖುಷಿಗೆ ‘ಸಪ್ತಸಾಗರದಾಚೆ ಎಲ್ಲೋ’ ಖ್ಯಾತಿಯ ರಮೇಶ್ ಇಂದಿರಾ ಆ್ಯಕ್ಷನ್ ಕಟ್ ಹೇಳಿದ್ದಾರೆ.
ವೆಬ್ ಸೀರೀಸ್ಗೆ ‘ಅಯ್ಯನ ಮನೆ’ ಎಂದು ಕ್ಯಾಚಿ ಟೈಟಲ್ ಇಡಲಾಗಿದೆ. ಪ್ರತಿ ಮನೆಯೂ ಸ್ವರ್ಗವಾಗಿರುವುದಿಲ್ಲ. ಅಲ್ಲಿ ಎಷ್ಟೋ ಮುಚ್ಚಿಟ್ಟ ವಿಷಯಗಳು ಇರುತ್ತವೆ ಅನ್ನೋದನ್ನು ಈ ಮಿನಿ ಸೀರೀಸ್ ಮೂಲಕ ರಮೇಶ್ ಇಂದಿರಾ ಹೇಳಲು ಹೊರಟಿದ್ದಾರೆ.
ರಮೇಶ್ ಇಂದಿರಾ ನಿರ್ದೇಶನದಲ್ಲಿ ಮೂಡಿ ಬರ್ತಿರುವ ‘ಅಯ್ಯನ ಮನೆ’ ವೆಬ್ ಸೀರೀಸ್ಗೆ ಶೃತಿ ನಾಯ್ಡು ಪ್ರೊಡಕ್ಷನ್ ನಿರ್ಮಾಣ ಮಾಡಿದೆ. ಏಳು ಎಪಿಸೋಡ್ ಹೊಂದಿರುವ ವೆಬ್ ಸೀರೀಸ್ನಲ್ಲಿ ಖುಷಿ ರವಿ, ಅಕ್ಷಯ್ ನಾಯಕ್, ಮಾನಸಿ ಸುಧೀರ್ ಅಭಿನಯಿಸಿದ್ದಾರೆ. ಇದು ಭಯ, ನಂಬಿಕೆ ಮತ್ತು ವಿಧಿ ಘರ್ಷಿಸುವ ಕಥೆಯನ್ನೊಳಗೊಂಡಿದ್ದು, ಇದೇ ತಿಂಗಳ 25ರಿಂದ ಜೀ5 ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಚಿಕ್ಕಮಗಳೂರಿನ ಅಯ್ಯನ ಮನೆ ಕುಟುಂಬದಲ್ಲಿ ಅಡಗಿರುವ ಸತ್ಯಗಳ ಸುತ್ತಕಥೆ ಸಾಗುತ್ತದೆ. ಇದೊಂದು ಮಿಸ್ಟ್ರಿ ಕಥೆಯೊಳಗೊಂಡಿದ್ದು, ಪ್ರೇಕ್ಷಕರನ್ನು ಪ್ರತಿ ಕ್ಷಣ ಎಕ್ಸೈಟ್ ಆಗುವಂತೆ ಮಾಡುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?






