SSLC ಪಾಸ್ ಆಗಿದ್ಯಾ!? ಹಾಗಿದ್ರೆ ಇಲ್ಲಿದೆ ನೋಡಿ 9 ಸಾವಿರಕ್ಕೂ ಹೆಚ್ಚು ಸಹಾಯಕ ಲೋಕೋ ಪೈಲಟ್ ಹುದ್ದೆ!

SSLC ಪಾಸಾಗಿದ್ಯಾ!? ಹಾಗಿದ್ರೆ ನಿಮಗಿಲ್ಲಿದೆ ಗುಡ್ ನ್ಯೂಸ್. ರೈಲ್ವೆ ನೇಮಕಾತಿ ಮಂಡಳಿಯು ದೊಡ್ಡ ಮಟ್ಟದಲ್ಲಿ ಉದ್ಯೋಗಗಳನ್ನ ಆಹ್ವಾನ ಮಾಡಿದೆ.
ದೇಶದ್ಯಾಂತ ಹಲವಾರು ರೈಲ್ವೆ ವಲಯಗಳಲ್ಲಿ ಕೆಲಸಗಳು ಖಾಲಿ ಇವೆ. ಇವುಗಳಲ್ಲಿ ಪೂರ್ವ ಕರಾವಳಿ ರೈಲ್ವೆ, ಪೂರ್ವ ರೈಲ್ವೆ ಮತ್ತು ಆಗ್ನೇಯ ರೈಲ್ವೆಯಲ್ಲಿ ಅತಿ ಹೆಚ್ಚು ಖಾಲಿ ಹುದ್ದೆಗಳಿವೆ. ಅಭ್ಯರ್ಥಿಗಳೆಲ್ಲಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಆರ್ಆರ್ಬಿ ಆಹ್ವಾನ ಮಾಡಿರುವ ಹುದ್ದೆಗಳ ಕುರಿತಂತೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿರುತ್ತದೆ. ಎಷ್ಟು ಉದ್ಯೋಗಗಳು, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ, ವಿದ್ಯಾರ್ಹತೆ ಇತ್ಯಾದಿ ಮಾಹಿತಿ ಇಲ್ಲಿದೆ.
ಹುದ್ದೆ ಹೆಸರು– ಸಹಾಯಕ ಲೋಕೋ ಪೈಲಟ್
ಎಷ್ಟು ಉದ್ಯೋಗಗಳು- 9970
ವಿದ್ಯಾರ್ಹತೆ-
10ನೇ ತರಗತಿ ಜೊತೆಗೆ ಐಟಿಐ ಅಥವಾ ಇಂಜಿನಿಯರಿಂಗ್, ಡಿಪ್ಲೋಮಾ
ವಯೋಮಿತಿ- 18 ರಿಂದ 30 ವರ್ಷ
ಅರ್ಜಿ ಶುಲ್ಕ ಎಷ್ಟು?
ಜನರಲ್, ಒಬಿಸಿ- 500 ರೂಪಾಯಿ
ಎಸ್ಸಿ, ಎಸ್ಟಿ- 250 ರೂಪಾಯಿ
ಆಯ್ಕೆ ಪ್ರಕ್ರಿಯೆ
ಕಂಪ್ಯೂಟರ್ ಬೇಸ್ ಟೆಸ್ಟ್ (ಸಿಬಿಟಿ 1)
ಸಿಬಿಟಿ 1 ಪಾಸ್ ಆದ್ರೆ ಸಿಬಿಟಿ 2 ಟೆಸ್ಟ್
ಕಂಪ್ಯೂಟರ್ ಬೇಸ್ಡ್ ಅಪ್ಟಿಟ್ಯೂಟ್ ಟೆಸ್ಟ್ (ಸಿಬಿಎಟಿ)
ದಾಖಲೆ ಪರಿಶೀಲನೆ
ವೈದ್ಯಕೀಯ ಪರಿಶೀಲನೆ
ಅರ್ಜಿ ಸಲ್ಲಿಕೆಗೆ ಲಿಂಕ್- http://www.indianrailways.gov.in
ಈ ಕೆಲಸಕ್ಕೆ ಸಂಬಂಧಿಸಿದ ಮುಖ್ಯವಾದ ದಿನಾಂಕಗಳು
ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕ- 09 ಮೇ 2025
ನಿಮ್ಮ ಪ್ರತಿಕ್ರಿಯೆ ಏನು?






