ದಾಂಪತ್ಯ ಜೀವನಕ್ಕೆ ಚಹಲ್‌ ಹಾಗೂ ಧನಶ್ರೀ ಗುಡ್‌ ಬೈ: ಇಬ್ಬರಲ್ಲಿ ಯಾರು ಶ್ರೀಮಂತರು.? ಇಲ್ಲಿದೆ ಮಾಹಿತಿ

ಫೆಬ್ರವರಿ 23, 2025 - 20:06
 0  13
ದಾಂಪತ್ಯ ಜೀವನಕ್ಕೆ ಚಹಲ್‌ ಹಾಗೂ ಧನಶ್ರೀ ಗುಡ್‌ ಬೈ: ಇಬ್ಬರಲ್ಲಿ ಯಾರು ಶ್ರೀಮಂತರು.? ಇಲ್ಲಿದೆ ಮಾಹಿತಿ

ಟೀಂ ಇಂಡಿಯಾ ಆಟಗಾರ ಯಜುವೇಂದ್ರ ಚಹಲ್, ಧನಶ್ರೀ ವಿಚ್ಛೇದನಕ್ಕೆ ಅಧಿಕೃತ ಮುದ್ರೆ ಬಿದ್ದಿದೆ. ಕೆಲ ದಿನಗಳಿಂದ ಕ್ರಿಕೆಟಿಗ ಯಜುವೇಂದ್ರ ಚಹಲ್ ಡಿವೋರ್ಸ್‌ ವದಂತಿ ಸುದ್ದಿಯಲ್ಲಿತ್ತು. ಇದೀಗ ಬಾಂದ್ರಾ ಫ್ಯಾಮಿಲಿ ಕೋರ್ಟ್‌ ಇವರಿಬ್ಬರ ಅರ್ಜಿಯನ್ನು ಪುರಸ್ಕರಿಸಿ ವಿಚ್ಛೇದನ ಮಂಜೂರು ಮಾಡಿದೆ. 4 ವರ್ಷಗಳ ದಾಂಪತ್ಯ ಜೀವನಕ್ಕೆ ಚಹಲ್‌ ಹಾಗೂ ಧನಶ್ರೀ ಗುಡ್‌ಬೈ ಹೇಳಿದ್ದಾರೆ. ಪರಸ್ಪರ ಒಪ್ಪಿಗೆಯಿಂದ ಡಿವೋರ್ಸ್‌ ಪಡೆದಿರುವ ಚಹಲ್‌, ಧನಶ್ರೀ ಕೋರ್ಟ್‌ಗೆ ಸೂಕ್ತ ಕಾರಣವನ್ನು ನೀಡಿದ್ದಾರೆ.

ಇನ್ನೂ ಈ ಸುದ್ದಿಯ ನಡುವೆಯೆ ಚಹಾಲ್​ ಆಸ್ತಿ ವಿಚಾರ ಬೆಳಕಿಗೆ ಬಂದಿದೆ. ಪ್ರಸ್ತುತ ಬಿಸಿಸಿಐನ ಕೇಂದ್ರ ಒಪ್ಪಂದದಿಂದ ಹೊರಗುಳಿದಿದ್ದರೂ ಐಪಿಎಲ್ ಮತ್ತು ಜಾಹೀರಾತು ಮೂಲಕ ಸಾಕಷ್ಟು ಹಣ ಸಂಪಾದಿಸುತ್ತಿದ್ದು, ಕೋಟ್ಯಧಿಪತಿ ಆಗಿದ್ದಾರೆ. 2025ರ ಐಪಿಎಲ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಚಹಾಲ್‌ ಅವರನ್ನು ದಾಖಲೆಯ 18 ಕೋಟಿ ರೂ.ಗೆ ಖರೀದಿಸಿತ್ತು.

ಐಪಿಎಲ್ ನಂತರ ಆಸ್ತಿ ಮತ್ತಷ್ಟು ಹೆಚ್ಚಳಗೊಂಡಿದೆ ಎಂದು ವರದಿಯಾಗಿದೆ. ಸದ್ಯ, ನಿವ್ವಳ ಆಸ್ತಿ ಮೌಲ್ಯ ₹45 ಕೋಟಿ ರೂ ಆಗಿದೆ. ಬ್ರ್ಯಾಂಡಿಂಗ್​ ಪ್ರಮೋಶನ್​ ಮೂಲಕವೂ ಉತ್ತಮ ಹಣ ಗಳಿಸುತ್ತಾರೆ. ಇದಲ್ಲದೇ ಹರಿಯಾಣದ ಗುರುಗ್ರಾಮ್‌ನಲ್ಲಿರುವ ಐಷಾರಾಮಿ ನಿವಾಸದಲ್ಲಿ ವಾಸಿಸುತ್ತಿದ್ದಾರೆ. ಟಾಪ್​ ಕ್ಲಾಸ್​ ಕಾರುಗಳನ್ನು ಹೊಂದಿದ್ದಾರೆ. ಚಹಾಲ್​ ಬಳಿ ಪೋರ್ಷೆ ಕಯೆನ್ನೆ ಎಸ್, ಮರ್ಸಿಡಿಸ್-ಬೆನ್ಜ್ ಸಿ-ಕ್ಲಾಸ್, ರೋಲ್ಸ್ ರಾಯ್ಸ್ ಮತ್ತು ಲಂಬೋರ್ಘಿನಿ ಸೆಂಟೆನಾರಿಯೊ ಕಾರುಗಳಿವೆ.

ಚಹಾಲ್​ ಅವರಿಗೆ ಹೋಲಿಸಿದರೆ, ಧನಶ್ರೀ ವರ್ಮಾ ಅವರ ಆಸ್ತಿ ತುಸು ಕಡಿಮೆ. ಇವರು ಒಟ್ಟು 25 ಕೋಟಿ ರೂ. ಆಸ್ತಿಗೆ ಒಡತಿ. ನೃತ್ಯಗಾರ್ತಿಯಾಗಿರುವ ಧನಶ್ರೀ, ತೆಲುಗು ಚಿತ್ರದ ಮೂಲಕ ಟಾಲಿವುಡ್​ಗೆ ಪಾದಾರ್ಪಣೆ ಮಾಡಲು ಮುಂದಾಗಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow