ಆಟವಾಡುತ್ತಿದ್ದ 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆರೋಪಿ ಪರಾರಿ..!

ತೆಲಂಗಾಣ: ಎಂಥಾ ಸಮಾಜದಲ್ಲಿ ನಾವಿದ್ದೇವೆ. ಹೆಣ್ಣೆಂದೆರೆ ಸಾಕು ಹರಿದು ಮುಕ್ಕಿ ತಿನ್ನುವ ಸಂತತಿಗಳೇ ಸುತ್ತಲೂ. ಆಕೆ ಯುವತಿ, ಬಾಲಕಿ, ವೃದ್ಧೆ ಯಾರಾದರೂ ಸರಿ. ಹೆಣ್ಣು ಮಕ್ಕಳಿಗಂತೂ ಸೇಫ್ ಇಲ್ಲ ಎಂಬ ಸ್ಥಿತಿ ಬಂದೊದಗಿದೆ. ಕಾರಣ ಮತ್ತೆ ಮತ್ತೆ ಆಗುತ್ತಿರೋ ಅತ್ಯಾಚಾರದಂತಹ ಮಾನಗೇಡಿ ಕೃತ್ಯಗಳು.
ಹೌದು ಇದೀಗ ಮನೆಯ ಎದುರು ಆಟವಾಡುತ್ತಿದ್ದ 8 ವರ್ಷದ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಸಂಗಾರೆಡ್ಡಿಯಲ್ಲಿ ಘಟನೆ ನಡೆದಿದೆ.
ಮದ್ಯದ ಅಮಲಿನಲ್ಲಿದ್ದ ಇಬ್ಬರು ಅಪ್ರಾಪ್ತ ಬಾಲಕಿಯನ್ನು ಪೊದೆಯ ಹಿಂದೆ ಎಳೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ರಕ್ತಸ್ರಾವವಾಗಲು ಆರಂಭಿಸಿದಾಗ ಆಕೆ ಜೋರಾಗಿ ಕೂಗಿಕೊಂಡಿದ್ದಾಳೆ, ಸ್ಥಳೀಯರು ಅಲ್ಲಿಗೆ ಓಡಿ ಬಂದು ಆಕೆಯನ್ನು ರಕ್ಷಿಸಿ ಆರೋಪಿಯನ್ನು ಹಿಡಿದು ಥಳಿಸಿದ್ದಾರೆ.
ಗಾಯಗೊಂಡಿದ್ದ ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೇಡಕ್ನಲ್ಲಿ ಇದೇ ರೀತಿಯ ಘಟನೆ ಒಂದು ತಿಂಗಳ ಹಿಂದೆ ನಡೆದಿತ್ತು. ಮಾನಸಿಕ ಅಸ್ವಸ್ಥ ಮಹಿಳೆಯನ್ನು ಮೂವರು ಪುರುಷರು ಅಪಹರಿಸಿ ಅತ್ಯಾಚಾರ ನಡೆಸಿದ್ದರು. ಜನವರಿ 8 ರಂದು ಘಟನೆ ನಡೆದಿತ್ತು. ಮಹಿಳೆ ನಿಜಾಬಾದ್ ನಿವಾಸಿ ಎಂಬುದು ತಿಳಿದುಬಂದಿತ್ತು. ಆ ಮಹಿಳೆ ಹಲವು ದಿನಗಳಿಂದ ಅದೇ ಪ್ರದೇಶದಲ್ಲಿ ಓಡಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






