Poonam Pandey: ನಡುರಸ್ತೆಯಲ್ಲೇ ಪೂನಂ ಪಾಂಡೆಗೆ ಕಿಸ್ ಕೊಡಲು ಬಂದ ಅಭಿಮಾನಿ..! ಮುಂದೇನಾಯ್ತು..?

ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ಅವರು ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದವರು. ಅವರು ಮಾಡಿಕೊಂಡ ವಿವಾದಗಳು ಹಲವು. ಇನ್ನೂ ಅಭಿಮಾನಿಯೊಬ್ಬರು ಪೂನಂ ಪಾಂಡೆಗೆ ಮುತ್ತಿಡಲು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಮುಂಬೈನ ಬೀದಿಯಲ್ಲಿ ಪೂನಂ ಪಾಂಡೆಗೆ ಅಭಿಮಾನಿಯೊಬ್ಬ ಬಲವಂತವಾಗಿ ಕಿಸ್ ಮಾಡಲು ಬಂದಿದ್ದಾನೆ. ಆಗ ಪೂನಂ ಪಾಂಡೆ ಅವರು ಹೆದರಿಕೊಂಡು ಪಕ್ಕಕ್ಕೆ ಸರಿದಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.ಪೂನಂ ಪಾಂಡೆ ಇದ್ದಲ್ಲಿ ಪಾಪರಾಜಿಗಳು ಮುಗಿಬೀಳುತ್ತಾರೆ. ಅವರ ಫೋಟೋ ಮತ್ತು ವಿಡಿಯೋ ಸಲುವಾಗಿ ಕ್ಯಾಮೆರಾ ಹಿಡಿದು ಓಡೋಡಿ ಬರುತ್ತಾರೆ. ಇನ್ನು, ಅಭಿಮಾನಿಗಳು ಕೂಡ ಸೆಲ್ಫಿಗಾಗಿ ಹಾತೊರೆಯುತ್ತಾರೆ.
ಪೂನಂ ಪಾಂಡೆ ಅವರು ಪಾಪರಾಜಿಗಳಿಗೆ ಪೋಸ್ ನೀಡುತ್ತಿದ್ದರು. ಆಗ ಒಬ್ಬ ಅಭಿಮಾನಿ ಎಂಟ್ರಿ ನೀಡಿದ. ಪಾಪರಾಜಿಗಳು ಪೂನಂ ಪಾಂಡೆಯ ಫೋಟೋ ತೆಗೆಯುತ್ತಿದ್ದಾಗ ಅಭಿಮಾನಿಯೊಬ್ಬ ಸೆಲ್ಫಿ ಕೇಳಲು ಬಂದ. ಒಂದು ಅಡಿ ಅಂತರದಿಂದ ಸೆಲ್ಫಿ ನೀಡಲು ಪೂನಂ ಪಾಂಡೆ ಕೂಡ ಒಪ್ಪಿದರು. ಆದರೆ ಅಷ್ಟಕ್ಕೇ ಆ ವ್ಯಕ್ತಿ ಸುಮ್ಮನಾಗಲಿಲ್ಲ. ಇನ್ನೂ ಹತ್ತಿರ ಹತ್ತಿರ ಬರುತ್ತಾ ಪೂನಂ ಪಾಂಡೆಯ ಮುಖಕ್ಕೆ ಕಿಸ್ ಮಾಡಲು ಪ್ರಯತ್ನಿಸಿದ. ಆಗ ಪೂನಂ ಪಾಂಡೆ ಗಾಬರಿಯಾಗಿ ಓಡಿ ಹೋದರು.
ವೈರಲ್ ಆಗಿರುವ ಈ ವಿಡಿಯೋ ನೋಡಿದ ಅನೇಕರಿಗೆ ಅನುಮಾನ ಮೂಡಿದೆ. ಇದು ಬೇಕಂತಲೇ ಮಾಡಿರುವ ಡ್ರಾಮಾ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಮೊದಲೇ ಪ್ಲ್ಯಾನ್ ಮಾಡಿಕೊಂಡು ಈ ರೀತಿ ನಾಟಕ ಮಾಡಲಾಗಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ವೈರಲ್ ಆಗಬೇಕು, ಸುದ್ದಿ ಆಗಬೇಕು ಎಂಬ ಉದ್ದೇಶದಿಂದಲೇ ಪೂನಂ ಪಾಂಡೆ ಇದನ್ನೆಲ್ಲ ಮಾಡುತ್ತಾರೆ ಎಂದು ಅನೇಕರು ಟೀಕೆ ಮಾಡಿದ್ದಾರೆ. ಈ ಬಗ್ಗೆ ಇನ್ನಷ್ಟೇ ಅವರು ಪ್ರತಿಕ್ರಿಯೆ ನೀಡಬೇಕಿದೆ. ಸದ್ಯಕ್ಕಂತೂ ಈ ವಿಡಿಯೋ ತುಂಬಾ ವೈರಲ್ ಆಗುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?






