ಮನೆಯಲ್ಲಿ ಹಲ್ಲಿ ಹೆಚ್ಚಾದ್ರೆ ಸಾವಿನ ಮುನ್ಸೂಚನೆಯಾ!? ಜ್ಯೋತಿಷ್ಯ ಹೇಳುವುದೇನು?

ಮನೆಯಲ್ಲಿ ನಮಗಿಂತ ಮೊದಲೇ ಬಂದು ಟಿಕಾಣಿ ಹೂಡುವ ನೆಂಟರು ಎಂದರೆ ಅದು ಜಿರಳೆಗಳು ಮತ್ತು ಪಲ್ಲಿಗಳು. ಇವುಗಳ ಸಂತತಿ ಒಮ್ಮೆ ಹೆಚ್ಚಾಗಲು ಬಿಟ್ಟರೆ ಸಾಕು, ಇಡೀ ಮನೆ ತುಂಬಾ ಇವೇ ಇರುತ್ತವೆ. ಯಾವ ಮನೆಯಲ್ಲಿ ಹೆಚ್ಚಾಗಿ ಇಂತಹ ಕೀಟಗಳು ಇರುತ್ತವೆ, ಅಲ್ಲಿ ಫುಡ್ ಪಾಯಿಸನ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮಕ್ಕಳು, ವಯಸ್ಸಾದವರು ಇದ್ದರೆ ಅವರ ಆರೋಗ್ಯದ ಬಗ್ಗೆ ಈ ಸಂದರ್ಭದಲ್ಲಿ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ.
ಪುರಾಣದ ಪ್ರಕಾರ, ಶಾಸ್ತ್ರಗಳಲ್ಲಿ ಹಲ್ಲಿಗಳು ಮನೆಯಲ್ಲಿ ಲೊಚಗುಟ್ಟಿದ್ರೆ ಅವುಗಳು ಲೊಚಗುಟ್ಟಿದರ ಸಮಯ ಹಾಗೂ ಸಂದರ್ಭಕ್ಕೆ ಅದು ಶುಭ ಎಂದು ಪರಿಗಣಿಸಲಾಗುತ್ತದೆ. ಆದರೆ ನಿಜಜೀವನದಲ್ಲಿ ಮನೆಯಲ್ಲಿ ಹಲ್ಲಿ ಇರುವುದರಿಂದ ಆರೋಗ್ಯಯುತ ಜೀವನಕ್ಕೆ ಸಂಚಕಾರಿ.. ಹಲ್ಲಿಯ ಮಲ ಮತ್ತು ಲಾಲಾರಸದಲ್ಲಿ ಇರುವ ಸಾಲ್ಮೋನೆಲ್ಲಾ ಎಂಬ ಬ್ಯಾಕ್ಟೀರಿಯಾ ಇದ್ದು, ಇದು ತುಂಬಾನೇ ಅಪಾಯಕಾರಿಯಾಗಿದೆ.
ಹಲ್ಲಿಗೆ ಭಯ ಪಡುವ ಮನುಷ್ಯನಿಗೆ ಹಲ್ಲಿ ಕಚ್ಚಿದ್ರೆ ಹೇಗಿರಬಹುದು. ಹಲ್ಲಿ ಕಚ್ಚಿದ್ರೆ ಯಾವ ರೀತಿಯ ಚಿಕಿತ್ಸೆ ನೀಡಬೇಕು, ಹಲ್ಲಿ ಕಚ್ಚಿದರೆ ಏನಾಗುತ್ತದೆ?. ಇದರ ಜತೆಗೆ ಈ ಪ್ರಶ್ನೆ ಕೂಡ ಬರಬಹುದು, ಅಷ್ಟು ಚಿಕ್ಕ ಪ್ರಾಣಿ ಮನುಷ್ಯನನ್ನು ಕಚ್ಚಲು ಸಾಧ್ಯವೇ?ಹಲ್ಲಿಗಳು ಕಚ್ಚಬಹುದು ಆದರೆ ಭಯಪಡುವ ಅಗತ್ಯ ಇಲ್ಲ. ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ಒಂದು ವರದಿ ಮಾಡಿದೆ. ವಿಜ್ಞಾನ ಸತ್ಯಗಳು ಮತ್ತು ಪುರಾಣಗಳಲ್ಲಿ ಏನು ಹೇಳುತ್ತಾರೆ? ಇಲ್ಲಿದೆ ನೋಡಿ.
ಭಯಾನಕ ರೂಮ್‌ಮೇಟ್ ಅಥವಾ ನಿರುಪದ್ರವ ಕೀಟ ಭಕ್ಷಕಗಳು ಅಂದರೆ ಹಲ್ಲಿಗಳು ಭಾರತ ಅಥವಾ ಆಗ್ನೇಯ ಏಷ್ಯಾದಲ್ಲಿ ವಾಸಿಸುತ್ತದೆ. ಸಾಮಾನ್ಯವಾಗಿ ಮನೆಗಳಲ್ಲಿ ಇದು ಹೆಚ್ಚಾಗಿ ಓಡಾಟ ನಡೆಸುತ್ತದೆ. ಹಲ್ಲಿಗಳು ರಾತ್ರಿಯಲ್ಲಿ ಕೀಟಗಳನ್ನು ಬೇಟೆ ಆಡುತ್ತದೆ. ಇದು ಮನೆಯ ಗೊಡೆಗಳಲ್ಲಿ ಕಾಣಸಿಗುತ್ತದೆ. ಇಂತಹ ಹಲ್ಲಿಗಳು ಮನುಷ್ಯನನ್ನು ಕಚ್ಚಲು ಸಾಧ್ಯವೇ? ಸಾಧ್ಯ ಇದೆ ಎಂದು ಹೇಳಲಾಗಿದೆ. ಹಲ್ಲಿಗಳ ಅವುಗಳ ದವಡೆಗಳು ಚಿಕ್ಕದಾಗಿರುತ್ತವೆ ಮತ್ತು ದುರ್ಬಲವಾಗಿರುತ್ತವೆ. ಜತೆಗೆ ಅದು ತುಂಬಾ ಭಯಗೊಳ್ಳುವ ಪ್ರಾಣಿ.
ಪಲ್ಲಿ ಮನುಷ್ಯ ಸ್ನೇಹಿ ಆಗಿವೆ. ಇವುಗಳಿಂದ ಮನುಷ್ಯರಿಗೆ ಯಾವುದೇ ಹಾನಿಯಿಲ್ಲ. ಇವುಗಳು ವಿಷವನ್ನು ಉತ್ಪಾದಿಸುವುದಿಲ್ಲ ಅಥವಾ ಮನುಷ್ಯರಿಗೆ ಯಾವುದೇ ರೀತಿಯಲ್ಲಿ ಹಾನಿ ಮಾಡುವುದಿಲ್ಲ.ಕೆಲವು ಕೀಟಗಳಂತೆ, ಹಲ್ಲಿಗಳು ಯಾವುದೇ ಆರೋಗ್ಯದ ಅಪಾಯವನ್ನು ಕೂಡ ಉಂಟು ಮಾಡುವುದಿಲ್ಲ ಬದಲಾಗಿ ಇವು ಸೊಳ್ಳೆಗಳು, ಜಿರಳೆಗಳು ಮತ್ತು ಇತರ ಕೀಟಗಳನ್ನು ತಿಂದು ನಮ್ಮ ಮನೆಗಳನ್ನು ಸುರಕ್ಷಿತವಾಗಿ ಇರಿಸುತ್ತದೆ” ಎಂದು ಹೇಳಿದ್ದರು. ಈಗ ಆ ಹಲ್ಲಿ ಕಚ್ಚಿದ್ರೆ ಮರಣ ಬರಲು ಅಸಾಧ್ಯ. ಹಲ್ಲಿಗಳು ನಾಚಿಕೆ ಸ್ವಭಾವದ ಜೀವಿ, ಆಕ್ರಮಣಕಾರಿಯಲ್ಲದ ಜೀವಿಗಳಾಗಿದ್ದು, ಅವು ಆತ್ಮರಕ್ಷಣೆಗಾಗಿ ಮಾತ್ರ ಕಚ್ಚುತ್ತವೆ. ಇದು ಅಪಾಯಕಾರಿ ಅಲ್ಲಿದಿದ್ದರು ಇವುಗಳು ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾವನ್ನು ಹೊಂದಿರಬಹುದು ಎಂದು ಹೇಳಲಾಗಿದೆ.
ಒಂದು ವೇಳೆ ಹಲ್ಲಿ ಕಚ್ಚಿದ್ರೆ ಸೋಪ್ ಮತ್ತು ನೀರಿನಿಂದ ಗಾಯವನ್ನು ಸ್ವಚ್ಛಗೊಳಿಸಿ. ಆ ಗಾಯಕ್ಕೆ ನಂಜುನಿರೋಧಕ ಕ್ರೀಮ್ನ್ನು ಹಾಕಿ. ಊತ, ಕೆಂಪು ಅಥವಾ ಜ್ವರದಂತಹ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ ಮಾತ್ರ ವೈದ್ಯರನ್ನು ಭೇಟಿ ಮಾಡಿ. ಹಲ್ಲಿಯನ್ನು ಕೆಲವೊಂದು ಸಂಪ್ರಾದಾಯಕವಾಗಿ ಶುಕುನ ಎಂದು ಹೇಳಲಾಗುತ್ತದೆ. ಆದರೆ ಹಲ್ಲಿಯಷ್ಟು ಒಳ್ಳೆಯ ಪ್ರಾಣಿ ಇಲ್ಲ ಎಂಬುದನ್ನು ಅನೇಕ ಸಂಶೋಧಕರ ವಾದವಾಗಿದೆ.
ಈ ಹಲ್ಲಿಗಳಲ್ಲಿ ಪ್ರಪಂಚದಾದ್ಯಂತ 6,000 ಕ್ಕೂ ಹೆಚ್ಚು ಜಾತಿಗಳಿವೆ. ಹೆಚ್ಚಾಗಿ ಮನೆ ಅಥವಾ ಕೊಟ್ಟಿಗೆಗಳಲ್ಲಿ ವಾಸವಾಗಿರುತ್ತದೆ. ಹೆಚ್ಚಿನ ಹಲ್ಲಿಗಳು ಒಂಟಿಯಾಗಿ ಬದುಕಲು ಬಯಸುತ್ತದೆ. ಹಾಗಾಗಿ ಅವುಗಳನ್ನು ಹಿಂಸೆ ಮಾಡಬೇಡಿ ಹಾಗೂ ಅದರಿಂದ ಯಾವುದೇ ತೊಂದರೆ ಇರುವುದಿಲ್ಲ.
ನಿಮ್ಮ ಪ್ರತಿಕ್ರಿಯೆ ಏನು?






