Namma Metro: ನಮ್ಮ ಮೆಟ್ರೋ ಮಹಿಳೆಯರಿಗೆ ಎಷ್ಟು ಸೇಫ್? ಯುವತಿ ಖಾಸಗಿ ಅಂಗ ಫೋಟೋ ತೆಗೆದ ಕಾಮುಕ ಅರೆಸ್ಟ್

ಬೆಂಗಳೂರು: ಮೆಟ್ರೋದಲ್ಲಿ ಯುವತಿ ಖಾಸಗಿ ಮಹಿಳೆಯರಿಗೆ ಸುರಕ್ಷತೆ ಇಲ್ವಾ ಎಂಬ ಪ್ರಶ್ನೆ ಇದೀಗ ಮೂಡುತ್ತಿದೆ. ಮೆಟ್ರೋ ರೈಲಿನಲ್ಲಿ ಆಗಾಗ ಮಹಿಳೆಯರಿಗೆ ಕಾಮುಕರು ಕಿರುಕುಳ ಕೊಡುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಇದೀಗ ಮತ್ತೊಂದು ಅಂಥದ್ದೇ ಘಟನೆ ಮೆಟ್ರೋದಲ್ಲಿ ಪ್ರಯಾಣ ಮಾಡುವ ಮಹಿಳೆಯರ ಖಾಸಗಿ ಅಂಗಾಂಗಗಳ ಫೋಟೋ, ವಿಡಿಯೋ ತೆಗೆಯುತ್ತಿದ್ದ ಎನ್ನುವ ಆರೋಪ ಮಾಡಲಾಗಿದೆ. ಮಹಿಳೆಯರ ಮತ್ತು ಯುವತಿಯರ ಆ್ಯಂಗಲ್,
ಆ್ಯಂಗಲ್ ಪೋಟೋ ಕ್ಲಿಕ್ ಮಾಡುತ್ತಿದ್ದ. ಬರೋಬ್ಬರಿ ಐವತ್ತು ಯುವತಿಯರ ವಿಡಿಯೋ, ಫೋಟೋ ತೆಗೆದಿದ್ದ ಎಂದು ಮೆಟ್ರೋ ಸೆಕ್ಯುರಿಟಿ ಗಾರ್ಡ್‌ಗಳು ಹೇಳಿದ್ದಾರೆ. ಆ ಬಳಿಕ ಈತನನ್ನು ಜಯನಗರ ಪೋಲಿಸ್ ಸ್ಟೇಷನ್ ಗೆ ಒಪ್ಪಿಸಿದ್ದಾಋಏ. ಮೆಟ್ರೋ ರೂಲ್ಸ್ ಸೆಕ್ಷನ್- 59 ರ ಅಡಿಯಲ್ಲಿ ಕಾಮುಕನಿಗೆ 5 ಸಾವಿರ ದಂಡವನ್ನೂ ಮೆಟ್ರೋ ಹಾಕಿದೆ.
ಡಿಸೆಂಬರ್- 25 ರಂದು ಬೆಳಿಗ್ಗೆ 9 ಗಂಟೆಗೆ ನಡೆದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೆಜೆಸ್ಟಿಕ್ ನಿಂದ ಜೆಪಿ ನಗರಕ್ಕೆ ಪ್ರಯಾಣ ಮಾಡ್ತಿದ್ದ ಯುವತಿ. ಈ ವೇಳೆ ವ್ಯಕ್ತಿಯೋರ್ವ ಯುವತಿ ಖಾಸಗಿ ಅಂಗಾಂಗಗಳ ವಿಡಿಯೋ, ಫೋಟೋ ತೆಗೆಯುತ್ತಿದ್ದನ್ನು ಗಮನಿಸಿದ ಯುವತಿ ಕಾಮುಕನಿಗೆ ಹೊಡೆದಿದ್ದಾಳೆ.
ಈ ವೇಳೆ ನೈಟ್ ಡ್ಯೂಟಿ ಮುಗಿಸಿ ಮನೆಗೆ ಹೋಗ್ತಿದ್ದ ಇಬ್ಬರು ಸೆಕ್ಯುರಿಟಿಗಳು ಇದನ್ನು ಗಮನಿಸಿದ್ದಾರೆ.ಸೆಕ್ಯುರಿಟಿ ಗಾರ್ಡ್‌ಗಳಾದ ಸುಜಿತ್ ಮತ್ತು ಎಸ್.ಜಿ ರಾಮ್ ಬಹದ್ದೂರ್ ತಾಪ ಯುವತಿಯ ಸಹಾಯಕ್ಕೆ ಧಾವಿಸಿ ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ.
ಕೂಡಲೇ ಜಯನಗರ ಮೆಟ್ರೋ ಸ್ಟೇಷನ್ ನಲ್ಲಿ ಯುವಕನನ್ನು ಮೆಟ್ರೋ ರೈಲಿನಿಂದ ಸೆಕ್ಯುರಿಟಿ ಕೆಳಗಿಳಿಸಿದ್ದಾರೆ. ಫೋನ್ ಪರಿಶೀಲನೆ ನಡೆಸಿದ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ಬಳಿಕ ಕಾಮುಕನನ್ನು ಜಯನಗರ ಪೊಲೀಸರಿಗೆ ಒಪ್ಪಿಸಲಾಗಿದ್ದು. ಜಯನಗರ ಪೊಲೀಸ್ ಠಾಣೆಯಲ್ಲಿ NCR ದಾಖಲು ಮಾಡಲಾಗಿತ್ತು.
ನಿಮ್ಮ ಪ್ರತಿಕ್ರಿಯೆ ಏನು?






