ವಿಸಿ ನಾಲೆ ದುರಂತ ಕೇಸ್ : ನಾಪತ್ತೆಯಾಗಿದ್ದ ಮತ್ತೊಬ್ಬ ವ್ಯಕ್ತಿಯ ಶವ ಪತ್ತೆ – ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಫೆಬ್ರವರಿ 4, 2025 - 14:00
 0  19
ವಿಸಿ ನಾಲೆ ದುರಂತ ಕೇಸ್ : ನಾಪತ್ತೆಯಾಗಿದ್ದ ಮತ್ತೊಬ್ಬ ವ್ಯಕ್ತಿಯ ಶವ ಪತ್ತೆ – ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಮಂಡ್ಯ: ವಿ.ಸಿ. ನಾಲೆ ಮಂಡ್ಯ ಜಿಲ್ಲೆಯ ರೈತರಿಗೆ ಕಾವೇರಿಯನ್ನ ತಲುಪಿಸುವ ಕಾಲುವೆ. ಆದರೆ ಇದೇ ನಾಲೆ ಈಗ ಮೃತ್ಯು ನಾಲೆಯಾಗಿ ಬದಲಾಗಿದೆ. ಸಾಲು ಸಾಲು ದುರಂತಗಳು ಸಂಭವಿಸುತ್ತಿವೆ. ಕಾರು, ಬಸ್ ಸೇರಿದಂತೆ ಬೇರೆ ಬೇರೆ ವಾಹನಗಳು ನಾಲೆಗೆ ಪಲ್ಟಿಯಾಗಿ ಸಾಕಷ್ಟು ಜನರು ಜೀವ ಕಳೆದುಕೊಂಡಿದ್ದಾರೆ. ಹಾಗಾಗಿ ಸಕ್ಕರೆ ನಾಡಿನ ರೈತರ ಜಲದ ಸೆಲೆಯೇ ಈಗ ಸಾವಿನ ನಾಲೆಯಾಗಿದೆ. ಇದೀಗ ವರ್ಷದ ಆರಂಭದಲ್ಲೇ ಘೋರ ದುರಂತ ಒಂದು ಸಂಭವಿಸಿದ್ದು, ಮೂವರು ಬಲಿಯಾಗಿದ್ದಾರೆ. ​

ಇನ್ನೂ ನಾಪತ್ತೆಯಾಗಿದ್ದ ಪೀರ್‌ಖಾನ್ ಶವ ತಿಬ್ಬನಹಳ್ಳಿ ಬಳಿಯ ವಿಸಿ ನಾಲೆಯಲ್ಲಿ ಪತ್ತೆಯಾಗಿದೆ. ಕತ್ತಲಾದ ಹಿನ್ನೆಲೆ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆಯನ್ನು ಮಂಗಳವಾರಕ್ಕೆ ಮುಂದೂಡಿದ್ದರು. ಶೋಧ ಕಾರ್ಯ ನಿಲ್ಲಿಸಿದರು ಸಹ ಕುಟುಂಬಸ್ಥರು, ಸ್ನೇಹಿತರು ಸೇರಿ ತಡರಾತ್ರಿವರೆಗೂ ಫೀರ್ ಖಾನ್ ಮತ್ತು ಅಸ್ಲಂಪಾಷಾಗಾಗಿ ಹುಡುಕಾಟ ನಡೆಸಿದರು.

ನಾಲೆಯಲ್ಲಿ ನೀರು ಸ್ಥಗಿತ ಹಿನ್ನೆಲೆ ಮಂಗಳವಾರ ಕಾರ್ಯಾಚರಣೆ ಮುಂದುವರಿಸಿದ್ದರು. ಈ ವೇಳೆ ನಾಲೆಯಲ್ಲಿ ಫೀರ್ ಖಾನ್ ಶವ ಪತ್ತೆಯಾಗಿದೆ.ಈ ಪ್ರಕರಣದಲ್ಲಿ ಬದುಕುಳಿದ ನಯಾಜ್‌ಗೆ ಮಂಡ್ಯ ಮಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕುತ್ತಿಗೆಗೆ ತೀವ್ರ ಪೆಟ್ಟಾಗಿರುವುದರಿಂದ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ವೈದ್ಯರು ನಯಾಜ್‌ನನ್ನು 48 ಗಂಟೆಗಳ ತೀವ್ರ ನಿಗಾ ಘಟಕದಲ್ಲಿಟ್ಟಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow