ವೈದ್ಯೆ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಆಕೆಯೇ ಲೈಂಗಿ**ಕ ಕ್ರಿಯೆ ಬೇಕು ಎಂದು ಪೀಡಿಸುತ್ತಿದ್ದಳು ಎಂದ ಆರೋಪಿ
ಪ್ರಕರಣದಲ್ಲಿ ಹೊಸ ತಿರುವು ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣಕರ್ತರೆಂದು ಆರೋಪಿಸಲ್ಪಟ್ಟ ಸಾಫ್ಟ್ವೇರ್ ಎಂಜಿನಿಯರ್ ಪ್ರಶಾಂತ್ ಬಣಕರ್ ಮತ್ತು ಅವರ ಕುಟುಂಬದವರು ಈಗ ವೈದ್ಯೆಯ ಮೇಲೆಯೇ ತೀವ್ರ ಪ್ರತ್ಯಾರೋಪ ಮಾಡಿದ್ದಾರೆ.
ಆರೋಪಿಯಾಗಿರುವ ಪ್ರಶಾಂತ್ ಬಣಕರ್ ಹೇಳುವ ಪ್ರಕಾರ, “ವೈದ್ಯೆ ನನ್ನ ಮೇಲೆ ಮಾನಸಿಕ ಒತ್ತಡ ಹಾಕುತ್ತಿದ್ದಳು, ಲೈಂಗಿಕ ಸಂಬಂಧಕ್ಕೆ ಕರೆಯುತ್ತಿದ್ದಳು ಹಾಗೂ ಮದುವೆಯಾಗಬೇಕೆಂದು ಬಲವಂತ ಪಡಿಸುತ್ತಿದ್ದಳು” ಎಂಬುದು ಅವರ ಹೇಳಿಕೆ.
ಮೃತ ವೈದ್ಯೆ ಫಲ್ಟಣ್ ಉಪಜಿಲ್ಲಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆತ್ಮಹತ್ಯೆಗೆ ಮುನ್ನ ಅವರು ಕೈಯಲ್ಲಿ ಸೂಸೈಡ್ ನೋಟ್ ಬರೆದು, ಅದರಲ್ಲಿ ಇಬ್ಬರ ಹೆಸರುಗಳನ್ನು ಉಲ್ಲೇಖಿಸಿದ್ದರು – ಪಿಎಸ್ಐ ಗೋಪಾಲ್ ಬದಾನೆ ಮತ್ತು ಮನೆ ಮಾಲೀಕರ ಮಗ ಪ್ರಶಾಂತ್ ಬಣಕರ್.
ಸೂಸೈಡ್ ನೋಟ್ನಲ್ಲಿ, ಪಿಎಸ್ಐ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದರೆ, ಪ್ರಶಾಂತ್ ಮಾನಸಿಕ ಕಿರುಕುಳ ನೀಡುತ್ತಿದ್ದರೆಂದು ವೈದ್ಯೆ ಬರೆದಿದ್ದರು. ಈ ಆಧಾರದ ಮೇಲೆ ಸತಾರಾ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದರು.
ಆದರೆ ಇದೀಗ ಪ್ರಶಾಂತ್ ಬಣಕರ್ ತಾನು ನಿರಪರಾಧಿ ಎಂದು ಹೇಳಿ ವೈದ್ಯೆಯೇ ತನ್ನನ್ನು ಕಿರುಕುಳ ನೀಡುತ್ತಿದ್ದಳು ಎಂದು ದೂರಿದ್ದಾರೆ. ಇಬ್ಬರ ಮಧ್ಯೆ ನಡೆದ ದೂರವಾಣಿ ಸಂಭಾಷಣೆ ಹಾಗೂ ಚಾಟ್ಗಳ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಸತಾರಾ ಪೊಲೀಸ್ ವಲಯದ ಪ್ರಕಾರ, ಈ ಪ್ರಕರಣವು ಈಗ ಎರಡು ಪರಸ್ಪರ ಆರೋಪಗಳ ಹಂತಕ್ಕೆ ತಲುಪಿದ್ದು, ಎಲ್ಲ ತಾಂತ್ರಿಕ ಸಾಕ್ಷ್ಯಾಧಾರಗಳ ಪರಿಶೀಲನೆಯ ನಂತರ ಮಾತ್ರ ನಿಖರ ಸತ್ಯ ಬಹಿರಂಗವಾಗುವ ಸಾಧ್ಯತೆ ಇದೆ.
ನಿಮ್ಮ ಪ್ರತಿಕ್ರಿಯೆ ಏನು?