ಸರ್ಕಾರಿ ಕಚೇರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ; ಆಮೇಲೇನಾಯ್ತು?

ಸೆಪ್ಟೆಂಬರ್ 19, 2025 - 22:00
ಸೆಪ್ಟೆಂಬರ್ 19, 2025 - 22:04
 0  16
ಸರ್ಕಾರಿ ಕಚೇರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ; ಆಮೇಲೇನಾಯ್ತು?

ಕೋಲಾರ:- ಸರ್ಕಾರಿ ಕಚೇರಿಯಲ್ಲಿ ವಿಷ ಸೇವಿಸಿ ದಂಪತಿ ಅತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಲಾರದಲ್ಲಿ ಜರುಗಿದೆ. ಮಾಲೂರು -ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಕ್ರಮವಾಗಿ ನಮ್ಮ ಜಮೀನಿನ ಇ ಖಾತೆಯನ್ನು ಬೇರೆಯವರಿಗೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯತಿ ಕಚೇರಿ ಒಳಗೆ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ ಘಟನೆ ಮಾಲೂರು ತಾಲೂಕಿನ ರಾಜೇನಹಳ್ಳಿಯಲ್ಲಿ ನಡೆದಿದೆ. 

ಸುಮಾರು 30 ವರ್ಷಗಳಿಂದ ವಾಸವಿದ್ದ ಮನೆಯನ್ನು ಬೇರೆಯವರಿಗೆ ಅಕ್ರಮವಾಗಿ ಇಖಾತೆ ಮಾಡಿರುವ ಆರೋಪ ಪಿಡಿಓ ವಿರುದ್ದ ಕೇಳಿ ಬಂದಿದೆ. ದೊಡ್ಡಕಲ್ಲಹಳ್ಳಿ ಗ್ರಾಮದ ಮಂಜುಳಾ ರಾಮಪ್ಪ ಎಂಬುವವರ ಮನೆಯನ್ನು ಅಕ್ರಮವಾಗಿ ಖಾತೆ ಮಾಡಿರುವ ಪಿಡಿಓ ಸೋಮೆಶ್   ನಮಗೆ ಖಾತೆ ಮಾಡಿಕೊಡದೆ ಸತಾಯಿಸುತ್ತಿದ್ದಾರೆ.

ಅಲ್ಲದೆ ಈ ಹಿಂದೆ ಇ ಖಾತೆ ಮಾಡಿಕೊಡುವುದಾಗಿ  ಒಂದು ಲಕ್ಷ ಮುಂಗಡ ಹಣ ಪಡೆದು ಬೇರೆಯವರಗೆ ಖಾತೆ ಮಾಡಿಕೊಟ್ಟಿರುವ ಶಂಕೆ ‌ ಇದೆ ಎಂದು‌ ಆರೋಪಿಸಿದರು. ರಾಜೇನಹಳ್ಳಿ ಗ್ರಾಮ ಪಂಚಾಯತಿ ಕಚೇರಿ ಒಳಗೆ ವಿಷದ ಬಾಟಲಿಯೊಂದಿಗೆ ಧರಣಿ ಕುಳಿತಿರುವ ದಂಪತಿ ಇಖಾತೆ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದರು. ವಿಷದ ಬಾಟಲ್ ಮುಂದೆ ಇಟ್ಟುಕೊಂಡು ದಂಪತಿ ಧರಣಿ ನಡೆಸುತ್ತಿದಂತೆ ಎಚ್ಚತ್ತ ಅಧಿಕಾರಿಗಳು ದಂಪತಿಯನ್ನು ಸಮಾಧಾನ ಪಡಿಸಿ ಖಾತೆ ಮಾಡಿಕೊಡುವ ಭರವಸೆ ನೀಡಿದ ಬಳಿಕ ತಮ್ಮ ಹೋರಾಟ ಕೈ ಬಿಟ್ಟಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow