ಸಿಎಂ ಅರ್ಜಿ ವಜಾ: ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ತಿದ್ದಾರೆ - ಪ್ರಿಯಾಂಕ್‌ ಖರ್ಗೆ

ಸೆಪ್ಟೆಂಬರ್ 24, 2024 - 22:04
 0  7
ಸಿಎಂ ಅರ್ಜಿ ವಜಾ: ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ತಿದ್ದಾರೆ - ಪ್ರಿಯಾಂಕ್‌ ಖರ್ಗೆ

ನವದೆಹಲಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಅಕ್ರಮವಾಗಿ ತಮ್ಮ ಕುಟುಂಬಸ್ಥರಿಗೆ ನಿಯಮ ಬಾಹಿರವಾಗಿ ನಿವೇಶನಗಳನ್ನು ಪಡೆದ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ರಾಜ್ಯ ಹೈಕೋರ್ಟ್ತೀರ್ಪಿನ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ಖರ್ಗೆ,

ಇದು ನಿರೀಕ್ಷಿತ, ತನಿಖಾ ಸಂಸ್ಥೆಗಳಿಂದ ಸಾಧ್ಯವಾಗದ ಕಾರಣ, ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ತಿದ್ದಾರೆ. ಮೋದಿ, ಅಮಿತ್ ಶಾ, ರಾಜ್ಯಪಾಲರು ಎಲ್ಲರೂ ಅವರ ಬಳಿಕ ಇರಬಹುದು. ನಮ್ಮ ಬಳಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಇದೆ. ವೈಯುಕ್ತಿಕವಾಗಿ ಆಶ್ಚರ್ಯವಾಗಿಲ್ಲ ಎಂದಿದ್ದಾರೆ

ಹಿಂದೆ ಬೇರೆ ಬೇರೆ ರಾಜ್ಯಗಳಲ್ಲಿ ಏನೇಲ್ಲ ಆಗಿದೆ? ದೆಹಲಿ, ಜಾರ್ಖಂಡ್ ಕೇಸ್ನಲ್ಲಿ ಏನಾಯಿತು? ಸುಪ್ರೀಂ ಕೋರ್ಟ್ ಛೀಮಾರಿ ಹಾಕಿಲ್ವಾ? ಇವರಿಗೆ ರಾಜೀನಾಮೆ ಕೇಳುವ ನೈತಿಕತೆ ಇದಿಯಾ? ಆಪರೇಷನ್ ಕಮಲ, ಹೆಣದ ಮೇಲೆ, ಕಸದ ಮೇಲೆ ಹಣ ಮಾಡೊದು ಇವರು. ದಲಿತರ ಮೇಲೆ ದೌರ್ಜನ್ಯ ಮಾಡುವುದು ಇವರು ಎಂದು ತಿವಿದಿದ್ದಾರೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow