ಸುಪ್ರೀಂಕೋರ್ಟ್‌ನಲ್ಲಿ 241 ಉದ್ಯೋಗ: ಲಿಖಿತ ಪರೀಕ್ಷೆ ಯಾವಾಗ? ಅರ್ಹತೆ ಏನು?

ಎಪ್ರಿಲ್ 3, 2025 - 08:10
 0  10
ಸುಪ್ರೀಂಕೋರ್ಟ್‌ನಲ್ಲಿ 241 ಉದ್ಯೋಗ: ಲಿಖಿತ ಪರೀಕ್ಷೆ ಯಾವಾಗ? ಅರ್ಹತೆ ಏನು?

ಸುಪ್ರೀಂಕೋರ್ಟ್‌ನಲ್ಲಿ 241 ಉದ್ಯೋಗ ಖಾಲಿ ಇದ್ದು, ಅರ್ಹರಿಂದ ಪರೀಕ್ಷೆ ಬರೆಯಲು ಕೋರಲಾಗಿದೆ. ಭಾರತದ ಪ್ರತಿಷ್ಠಿತ ಸುಪ್ರೀಂ ಕೋರ್ಟ್​, ಪರೀಕ್ಷೆ ನಡೆಸುವ ದಿನಾಂಕವನ್ನು ಇದೀಗ ಘೋಷಣೆ ಮಾಡಿದೆ.

ಸುಪ್ರೀಂ ಕೋರ್ಟ್​ನ ಕಿರಿಯ ನ್ಯಾಯಾಲಯದ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಿರುವಂತ ಅಭ್ಯರ್ಥಿಗಳಿಗಾಗಿ ಪರೀಕ್ಷೆಯ ದಿನಾಂಕವನ್ನು ಇಲ್ಲಿ ನೀಡಲಾಗಿದೆ. ಪರೀಕ್ಷೆ ನಡೆಯುವ ದಿನಾಂಕ ಅನೌನ್ಸ್ ಮಾಡಿದ್ದರಿಂದ ಓದಿನ ಕಡೆಗೆ ಆಕಾಂಕ್ಷಿಗಳು ಹೆಚ್ಚಿನ ಗಮನ ಹರಿಸಬೇಕು. ಈ ಹುದ್ದೆಗಳಿಗೆ ಫೆಬ್ರುವರಿ 5 ರಂದು ಅರ್ಜಿ ಆಹ್ವಾನ ಮಾಡಿದ್ದ ನ್ಯಾಯಾಲಯ ಮಾರ್ಚ್ 03​ಕ್ಕೆ ಅರ್ಜಿ ಸಲ್ಲಿಕೆಯ ಕೊನೆ ಮಾಡಿತ್ತು.

13 ಏಪ್ರಿಲ್ 2025ರಂದು ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ಸುಪ್ರೀಂಕೋರ್ಟ್​ ದಿನಾಂಕವನ್ನು ತಿಳಿಸಿದೆ. ಸದ್ಯ ಎಕ್ಸಾಂ ದಿನವನ್ನು ತಿಳಿಸಿರುವ ಕಾರಣ ಅರ್ಜಿ ಸಲ್ಲಿಸುವವರು ಹೆಚ್ಚಿನ ಮಟ್ಟದಲ್ಲಿ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು. ಉದ್ಯೋಗಕ್ಕೆ ಆಯ್ಕೆ ಪ್ರಕ್ರಿಯೆ 4 ಹಂತಗಳಲ್ಲಿ ನಡೆಯಲಿದೆ. ಇದರಲ್ಲಿ ಮೊದಲನೇಯದು 100 ಅಂಕಗಳಿಗೆ ಲಿಖಿತ ಪರೀಕ್ಷೆ ಆಗಿದೆ. 

ಇದರ ಜೊತೆಗೆ ಕಂಪ್ಯೂಟರ್ ಜ್ಞಾನ Objective Type Test, ಕಂಪ್ಯೂಟರ್ ಟೈಪಿಂಗ್ 35 WPM ಹಾಗೂ Descriptive Test ಆಯ್ಕೆ ಪ್ರಕ್ರಿಯೆಯ ಹಂತಗಳು ಆಗಿವೆ.

ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕು ಎಂದರೆ ಸುಪ್ರೀಕೋರ್ಟ್​ನ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಪರಿಶೀಲನೆ ಮಾಡಿಕೊಳ್ಳಬಹುದು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow