ಸೈಫ್ ಅಲಿಖಾನ್ ಮೇಲೆ 6 ಬಾರಿ ಚಾಕು ಇರಿತ: ಪ್ರಕರಣದ ಬೆನ್ನಲ್ಲೆ ಪೊಲೀಸರಿಗೆ ಕಾಡುತ್ತಿದೆ ಈ ಅನುಮಾನಗಳು.!

ನವದೆಹಲಿ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ಚಾಕುವಿನಿಂದ ಹಲ್ಲೆ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ 6 ಬಾರಿ ಇರಿದಿದ್ದಾನೆ. ಸೈಫ್ ಅವರು ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಅವರ ಮೇಲೆ ನಡೆದ ಎರಡನೇ ದಾಳಿ ಎಂದು ವರದಿಯಾಗಿದೆ. ಹಿಂದೆ ದೆಹಲಿಯ ನೈಟ್ ಕ್ಲಬ್ ನಲ್ಲಿಯೂ ಅವರ ಮೇಲೆ ಹಲ್ಲೆ ನಡೆದಿತ್ತು ಎಂದು ಸ್ವತಃ ಸೈಫ್ ಹೇಳಿಕೊಂಡಿದ್ದರು.
ಇನ್ನೂ ಸೈಫ್ ಅಲಿ ಖಾನ್ ಅವರ ಗಾಯಗಳು ಗಂಭೀರವಾಗಿದೆ ಎಂದು ಹೇಳಲಾಗಿದೆ. ದಾಳಿಯಲ್ಲಿ ಅವರ ಕುತ್ತಿಗೆ, ಎಡ ಮಣಿಕಟ್ಟು, ಎದೆಗೆ ಗಾಯಗಳಾಗಿದ್ದು, ಬೆನ್ನಿನಿಂದ ಚಾಕುವಿನ ಸಣ್ಣ ಭಾಗವನ್ನು ತೆಗೆಯಲಾಗಿದೆ.
ಬೆನ್ನುಹುರಿಗೆ ಪೆಟ್ಟಾದ ಕಾರಣ ತುರ್ತು ಆಪರೇಷನ್ ಮಾಡಬೇಕಾಯಿತು ಎಂಬ ಮಾಹಿತಿ ಇದೆ. ಸೈಫ್ ಮೇಲೆ ಚಾಕುವಿನ ಇರಿತ ಪ್ರಕರಣ ಅವರ ಹಳೆಯ ಕಥೆಯನ್ನು ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದೆ. ಸೈಫ್ ಮೇಲೆ ನೈಟ್ ಕ್ಲಬ್ ನಲ್ಲಿಯೂ ದಾಳಿ ನಡೆಸಲಾಗಿತ್ತು. ದೆಹಲಿಯ ನೈಟ್ ಕ್ಲಬ್ ಒಂದರಲ್ಲಿ ಈ ಘಟನೆ ನಡೆದಿತ್ತು.
ದೆಹಲಿಯ ನೈಟ್ ಕ್ಲಬ್ ಒಂದರಲ್ಲಿ ಸೈಫ್ ಮೇಲೆ ದಾಳಿ ನಡೆದಿತ್ತು. ನೇಹಾ ಧೂಪಿಯಾ ಅವರ ಪಾಡ್ಕಾಸ್ಟ್ ಶೋ ‘ನೋ ಫಿಲ್ಟರ್ ನೇಹಾ’ದಲ್ಲಿ ಸೈಫ್ ಸ್ವತಃ ವಿಚಾರ ಹಂಚಿಕೊಂಡಿದ್ದರು. ‘ನಾನು ದೆಹಲಿಯ ನೈಟ್ ಕ್ಲಬ್ನಲ್ಲಿ ಕುಳಿತಿದ್ದೆ ಮತ್ತು ನಂತರ ಒಬ್ಬ ಹುಡುಗ ನನ್ನ ಬಳಿಗೆ ಬಂದನು. ದಯವಿಟ್ಟು ನನ್ನ ಗೆಳತಿಯೊಂದಿಗೆ ನೃತ್ಯ ಮಾಡಿ ಎಂದು ಕೋರಿದ. ನಾನು ನಿರಾಕರಿಸಿದೆ. ನಾನು ಇದೆಲ್ಲವನ್ನೂ ಮಾಡುತ್ತಿಲ್ಲ ಎಂದು ಆತನಿಗೆ ಹೇಳಿದೆ’ ಎಂದಿದ್ದರು.
ಸೈಫ್ ಅಲಿಖಾನ್ ಬಾಲಿವುಡ್ ಕಂಡ ಅತ್ಯಂತ ಪ್ರಮುಖ ನಟರಲ್ಲಿ ಒಬ್ಬರು. ಇಂತಹ ಒಬ್ಬ ನಟನ ಮೇಲೆ ಆರು ಬಾರಿ ಚಾಕುವಿನಿಂದ ದಾಳಿ ಆಗುವುದು ಅಂದ್ರೆ ಅದು ಸಾಮಾನ್ಯದ ವಿಷಯವಲ್ಲ. ತುಂಬಾ ಗಂಭೀರವಾದ ವಿಷಯ. ಇದು ಯಾವಾಗ ಆಯಿತು. ಕುಟುಂಬದವರು ಹೇಳುವ ಪ್ರಕಾರ ನಡುರಾತ್ರಿ 2.30ಕ್ಕೆ ನಡೆದಿದೆ ಎನ್ನಲಾಗುತ್ತಿದೆ. ಪೊಲೀಸರು 3.30 ಎನ್ನುತ್ತಿದ್ದಾರೆ. ಅಸಲಿಗೆ ಅಟ್ಯಾಕ್ ಆಗಿದ್ದು ಯಾವಾಗ ಎಂಬುದು ಇನ್ನೂ ಸ್ಪಷ್ಟನೆ ಬಂದಿಲ್ಲ
ಪ್ರಮುಖವಾಗಿ ಎಲ್ಲರಲ್ಲೂ ಕಾಡುತ್ತಿರುವ ಪ್ರಶ್ನೆಯಿದು. ಸೈಫ್ ಅಲಿಖಾನ್ ಯಾವುದೇ ವಿವಾದಗಳಿಲ್ಲದೇ, ತಕರಾರು ತಂಟೆಗಳಿಲ್ಲದೇ ತಮ್ಮ ಪಾಡಿಗೆ ತಾವು ಸಿನಿಮಾ ಮಾಡಿಕೊಂಡು ಬಂದಿರುವ ನಟ. ಇಂತಹ ಸಭ್ಯ ನಟನ ಮೇಲೆ ಈ ರೀತಿಯಾಗಿ ದಾಳಿಯಾಗಲು ಕಾರಣವೇನು ಎಂಬುದು ಅಭಿಮಾನಿಗಳಲ್ಲಿ ಪ್ರಶ್ನೆ ಎದ್ದಿದೆ. ಸದ್ಯ ಇದೇ ವಿಚಾರದ ಬಗ್ಗೆ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಇನ್ನು ಸೈಫ್ ಅಲಿಖಾನ್ ಮೇಲೆ ದಾಳಿ ಹೇಗೆ ನಡೆಯಿತು. ಅಷ್ಟು ದೊಡ್ಡ ಅರಮನೆಯಂತ ಮನೆ. ಹಲವಾರು ಟೈಟ್ ಸೆಕ್ಯೂರಿಟಿ. ಎಲ್ಲೆಯೂ ಕಣ್ಗಾವಲಿನಂತೆ ಇರುವ ಸಿಸಿ ಕ್ಯಾಮರಾಗಳು. ಇವುಗಳ ಮಧ್ಯೆಯೂ ಕೂಡ ಸೈಫ್ ಮೇಲೆ ಅಟ್ಯಾಕ್ ಹೇಗೆ ನಡೆಯಿತು ಎಂಬ ಪ್ರಶ್ನೆಗಳು ಎದ್ದಿವೆ. ಕರೀನಾ ಕಪೂರ್ ಹೇಳುವ ಪ್ರಕಾರ ಕಳ್ಳತನಕ್ಕೆ ಅಂತ ಬಂದವನು ಸೈಫ್ ಮೇಲೆ ಹಲವು ಬಾರಿ ದಾಳಿ ಮಾಡಿದ ಎಂದು ಹೇಳಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಕರೀನಾ ಹೇಳಿದ್ದಾರೆ.
ಇನ್ನೂ ಸೈಫ್ ಮೇಲೆ ನಿರಂತರವಾಗಿ ಆರು ಬಾರಿ ಚಾಕುವಿನಿಂದ ದಾಳಿ ನಡೆದಾಗ ಕರೀನಾ ಹಾಗೂ ಮಕ್ಕಳು ಎಲ್ಲಿದ್ದರು ಎಂಬ ಪ್ರಶ್ನೆಗಳು ಕೂಡ ಎದ್ದಿವೆ. ಘಟನೆ ನಡೆದ ಸಮಯದಲ್ಲಿ ಕರೀನಾ, ತೈಮೂರ್ ಮತ್ತು ಜೆಹ್ ಅಲ್ಲಿಯೇ ಇದ್ದರು. ಆದರೆ ಯಾವುದೇ ರೀತಿಯ ಅಪಾಯವಾಗದಂತೆ ಅವರು ಪಾರಾದರು ಎಂಬ ಮಾಹಿತಿ ದೊರಕಿದೆ. ಬುಧವಾರ ಕರೀನಾ ತಮ್ಮ ಸಹೋದರಿ ಕರಿಷ್ಮಾ ಕಪೂರ್, ಪ್ರೊಡ್ಯೂಸರ್ ರಿಯಾ ಕಪೂರ್ ಹಾಗೂ ನಟಿ ಸೋನಮ್ ಕಪೂರ್ ಜೊತೆ ಇದ್ದರು. ಆದ್ರೆ ಘಟನೆ ನಡೆದ ಸಮಯದಲ್ಲಿ ಮನೆಯಲ್ಲಿಯೇ ಇದ್ದರು ಎಂದು ತಿಳಿದು ಬಂದಿದೆ.
ಸೈಫ್ ಬಿಟ್ಟು ಕುಟುಂಬದ ಯಾವ ಸದಸ್ಯರಿಗೂ ಕೂಡ ಗಾಯಗಳು ಆಗಿಲ್ಲ. ಆದ್ರೆ ಸೈಫ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಮಹಿಳೆಯ ಮೇಲೆಯೂ ನೀಚ ಚಾಕುವಿನಿಂದ ಇರಿದಿದ್ದಾನೆ. ಆಕೆಯನ್ನು ಕೂಡ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದ್ದು. ಮಹಿಳೆಯ ಆರೋಗ್ಯ ಸ್ಥಿರವಾಗಿದೆ.
ಪೊಲೀಸರು ಮೀಡಿಯಾಗಳಿಗೆ ಹೇಳಿರುವ ಪ್ರಕಾರ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದಾಗ ಯಾವುದೇ ವ್ಯಕ್ತಿ ಅನುಮಾನಾಸ್ಪದವಾಗಿ ನುಸುಳಿರುವ ಸಾಕ್ಷಿ ಸಿಕ್ಕಿಲ್ಲ. ಹೊರಗಿನವರು ಯಾರು ಕೂಡ ಒಳಗೆ ಬಂದಿಲ್ಲ. ನಮ್ಮ ಆರಂಭಿಕ ತನಿಖೆಯಿಂದ ಬಂದ ವಿಚಾರ ಅಂದ್ರೆ ದಾಳಿಕೋರ ಈ ಮೊದಲೆ ಮನೆಯೊಳಗಿದ್ದ. ನಂತರ ಕಳ್ಳತನ ಮಾಡಲು ಹೋಗಿ ನಟನ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ ಎಂದು ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






