ಚಿನ್ನ ಕಳ್ಳಸಾಗಣೆ ಕೇಸ್: ರನ್ಯಾರಾವ್ʼಗೆ ಬಿಗ್ ಶಾಕ್! 102 ಕೋಟಿ ದಂಡ ಕಟ್ಟುವಂತೆ 'DRI' ನೋಟಿಸ್

ಸೆಪ್ಟೆಂಬರ್ 2, 2025 - 16:14
 0  16
ಚಿನ್ನ ಕಳ್ಳಸಾಗಣೆ ಕೇಸ್: ರನ್ಯಾರಾವ್ʼಗೆ ಬಿಗ್ ಶಾಕ್! 102 ಕೋಟಿ ದಂಡ ಕಟ್ಟುವಂತೆ 'DRI' ನೋಟಿಸ್

ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಈಗಾಗಲೇ ಜೈಲು ಶಿಕ್ಷೆಗೆ ಗುರಿಯಾಗಿರುವ ನಟಿ ರನ್ಯಾ ರಾವ್ ಅವರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಆದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ರನ್ಯಾ ಅವರಿಗೆ ₹102.55 ಕೋಟಿ ದಂಡ ಪಾವತಿಸಲು ನೋಟಿಸ್ ಜಾರಿಗೊಳಿಸಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಣಿಕೆ ಮಾಡಲು ಯತ್ನಿಸಿದ್ದ ರನ್ಯಾ ರಾವ್ ಅವರನ್ನು ಪೊಲೀಸರು ಬಂಧಿಸಿದ್ದರು. ವೇಳೆ ಅವರ ಬಳಿ 14.8 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿತ್ತು. ತನಿಖೆಯಲ್ಲಿ, ರನ್ಯಾ ಕೇವಲ 15 ದಿನಗಳಲ್ಲಿ ನಾಲ್ಕು ಬಾರಿ ದುಬೈಗೆ ತೆರಳಿ ಚಿನ್ನ ಕಳ್ಳಸಾಗಣೆ ಮಾಡಿದ್ದರೆಂಬುದು ಬಹಿರಂಗಗೊಂಡಿತ್ತು.

ಪ್ರಕರಣದಲ್ಲಿ ರನ್ಯಾ ರಾವ್ ಅವರಿಗೆ ಕಾಫಿಫೋಸಾ (COFEPOSA) ಕಾಯ್ದೆಯ ಅಡಿಯಲ್ಲಿ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ. ಇದರಿಂದ ಅವರು ಜಾಮೀನು ಪಡೆಯುವ ಅವಕಾಶವಿಲ್ಲ. ಇನ್ನು ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ತಡೆ ಕಾಯ್ದೆಯ ಅಡಿಯಲ್ಲಿ ಸಹ ಕ್ರಮ ಜಾರಿಯಾಗಿದೆ. ಸಲಹಾ ಮಂಡಳಿಯೂ ರನ್ಯಾ ಬಂಧನದ ಅವಧಿಯಲ್ಲಿ ಜಾಮೀನು ಸಿಗುವುದಿಲ್ಲವೆಂದು ಸ್ಪಷ್ಟಪಡಿಸಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow