BR Patil: ನಾನು ಬಾಯ್ಬಿಟ್ರೆ ಸರ್ಕಾರ ಅಲ್ಲಾಡುತ್ತೆ: ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕನ ಆಡಿಯೋ ವೈರಲ್ !

ಜೂನ್ 20, 2025 - 14:34
 0  15
BR Patil: ನಾನು ಬಾಯ್ಬಿಟ್ರೆ ಸರ್ಕಾರ ಅಲ್ಲಾಡುತ್ತೆ: ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕನ ಆಡಿಯೋ ವೈರಲ್ !

ವಸತಿ ಯೋಜನೆಯಲ್ಲಿ ಲಂಚದ ಆರೋಪದ ಕುರಿತು ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಮತ್ತು ವಸತಿ ಸಚಿವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ನಡುವಿನ ಆಡಿಯೋ ಸೋರಿಕೆಯಾಗಿರುವುದು ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದೆ.

ಹೌದು ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ ಆರ್ ಪಾಟೀಲ್ ಅವರು ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಜೊತೆ ಶಾಸಕ ಬಿಆರ್ ಪಾಟೀಲ್ ಮಾತನಾಡಿರೋ ಆಡಿಯೋ ವೈರಲ್ ಆಗಿದೆವಸತಿ ಯೋಜನೆಯಡಿ ಹಣ ನೀಡಿದವರಿಗಷ್ಟೆ ಮನೆ ಮಂಜೂರು ಮಾಡಲಾಗ್ತಿದೆ. ಇದೀಗ ನಮ್ಮ ಸರ್ಕಾರವನ್ನೇ ದೂರಲು ನನಗೆ ಬೇಸರವಾಗ್ತಿದೆ ಎಂದು ಬಿಆರ್ಪಾಟೀಲ್ ಆಡಿಯೋದಲ್ಲಿ ಹೇಳಿದ್ದಾರೆ ಎನ್ನಲಾಗ್ತಿದೆ.

ಆಡಿಯೋದಲ್ಲಿ ಬಿ ಆರ್ ಪಾಟೀಲ್ ಅವರು ನಮ್ಮ ಸರ್ಕಾರದ ವಿರುದ್ಧ ಮಾತನಾಡಲು ನನಗೆ ಬೇಸರ ಆಗ್ತಿದೆ ಎಂದಿದ್ದಾರೆನಾನು ಲೆಟರ್ ಕೊಟ್ರೆ ಮನೆ ಮಂಜೂರು ಆಗಲ್ಲ. ನನ್ನ ಹತ್ರ ಲೆಟರ್ತೆಗೆದುಕೊಂಡು ಹೋಗಿದ್ದ ಪಂಚಾಯತಿಗೆ ಮನೆ ಮಂಜೂರು ಆಗುತ್ತೆ. ಹಣ ಕೊಟ್ಟವರಿಗೆ ನೀವು ಮನೆ ಮಂಜೂರು ಮಾಡ್ತಾ ಇದ್ದೀರಾ ಎಂದು ಬಿಆರ್ ಪಾಟೀಲ್ಬೇಸರ ಹೊರಹಾಕಿದ್ದಾರಂತೆ.

ನಮ್ಮ ಸರ್ಕಾರದ ವಿರುದ್ಧ ಮಾತನಾಡಲು ನನಗೆ ಇಷ್ಟ ಇಲ್ಲಕಡಗಂಚಿ, ಧಂಗಾಪುರ, ಹಿತ್ತಲ, ಶೀರೂರು ಬಲ್ಲಿ ಮನೆ ಮಂಜೂರು ಆಗಿದೆನನ್ನ ಪಕ್ಕದ ಮತಕ್ಷೇತ್ರದಲ್ಲಿ ಕೂಡಾ ಎಷ್ಟು ಮನೆಯವರು ಹಣ ಕೊಟ್ಟು ಮಂಜೂರು ಮಾಡಿಕೊಂಡಿದ್ದಾರೆ. ಅಂತ ನಾನು ಹೇಳಲ ಎಂದು  ಮತ್ತೊಮ್ಮೆ ತಮ್ಮ ಸರ್ಕಾರದ ವಿರುದ್ಧ ಬಿ ಆರ್ ಪಾಟೀಲ್ ಅಸಮಾಧಾನ ಹೊರಹಾಕಿದ ಆಡಿಯೋ ವೈರಲ್ ಆಗ್ತಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow