ಮಲಯಾಳಂ ಸಿನಿಮಾದಲ್ಲಿ ಬೆಂಗಳೂರು ಯುವತಿಯರಿಗೆ ‘ಡಗಾ**ರ್’ ಪದ ಬಳಕೆ; ಭುಗಿಲೆದ್ದ ಆಕ್ರೋಶ

ಸೆಪ್ಟೆಂಬರ್ 2, 2025 - 20:06
 0  15
ಮಲಯಾಳಂ ಸಿನಿಮಾದಲ್ಲಿ ಬೆಂಗಳೂರು ಯುವತಿಯರಿಗೆ ‘ಡಗಾ**ರ್’ ಪದ ಬಳಕೆ; ಭುಗಿಲೆದ್ದ ಆಕ್ರೋಶ

ಮಲಯಾಳಂ ಭಾಷೆಯ ಲೋಕಃ ಸಿನಿಮಾದಲ್ಲಿ ಬೆಂಗಳೂರಿನ ಯುವತಿಯರನ್ನ ಕೆಟ್ಟ ರೀತಿಯಲ್ಲಿ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಕನ್ನಡಿಗರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಚಿತ್ರದಲ್ಲಿಬೆಂಗಳೂರು ಯುವತಿಯರನ್ನ ನಾನು ಮದುವೆಯಾಗಲ್ಲ, ಇಲ್ಲಿರುವವರು ಎಲ್ಲರೂ ಡಗಾರ್ಗಳುಎಂದು ನಾಯಕನ ಬಾಯಿಂದ ಹೇಳಿಸಿರುವ ಸಂಭಾಷಣೆ ವಿರೋಧಕ್ಕೆ ಕಾರಣವಾಗಿದೆ. ಬೆಂಗಳೂರನ್ನು ಡ್ರಗ್ಸ್ ಸಿಟಿ ಎಂದು ತೋರಿಸಿರುವ ರೀತಿಯೂ ಅಸಮಾಧಾನಕ್ಕೆ ಕಾರಣವಾಗಿದೆ.

ದುಲ್ಕರ್ ಸಲ್ಮಾನ್ ನಿರ್ಮಾಣದ ಚಿತ್ರ ಸಂಪೂರ್ಣವಾಗಿ ಬೆಂಗಳೂರಿನ ಹಿನ್ನೆಲೆಯಲ್ಲೇ ಸಾಗುತ್ತಿದ್ದು, ಕಲ್ಯಾಣಿ ಪ್ರಿಯದರ್ಶನ್ ಸೂಪರ್ ಹೀರೋ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಮೊದಲ ಸೂಪರ್ ವುಮನ್ ಸಿನಿಮಾಎಂಬ ಖ್ಯಾತಿ ಪಡೆದಿದ್ದರೂ, ಮಹಿಳೆಯರು ಮತ್ತು ಯುವತಿಯರ ಬಗ್ಗೆ ತಾತ್ಸಾರ ಉಕ್ತಿಗಳು ಬಂದಿರುವುದರಿಂದ ವಿವಾದ ಉಂಟಾಗಿದೆ.

ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಚಿತ್ರತಂಡವನ್ನು ಖಂಡಿಸಿದ್ದು, ತಕ್ಷಣ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ. “ಇಲ್ಲವಾದರೆ ಕೇರಳಕ್ಕೆ ಹೋಗಿಎಂದು ಎಚ್ಚರಿಕೆ ನೀಡಿದ್ದಾರೆ. ನಟ ರಾಜ್ ಬಿ ಶೆಟ್ಟಿ ಸಹ ವಿಷಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸದ್ಯಕ್ಕೆ ಕನ್ನಡಿಗರ ಆಕ್ರೋಶ ತೀವ್ರಗೊಂಡಿದ್ದು, ಚಿತ್ರತಂಡದಿಂದ ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow