ಕೆ.ಎನ್. ರಾಜಣ್ಣ ಈಗಾಗಲೇ ಬಿಜೆಪಿಗೆ ಅರ್ಜಿ ಸಲ್ಲಿಸಿದ್ದಾರೆ: ಕೈ ಶಾಸಕನಿಂದ ಸ್ಫೋಟಕ ಹೇಳಿಕೆ!

ಸೆಪ್ಟೆಂಬರ್ 2, 2025 - 14:01
 0  21
ಕೆ.ಎನ್. ರಾಜಣ್ಣ ಈಗಾಗಲೇ ಬಿಜೆಪಿಗೆ ಅರ್ಜಿ ಸಲ್ಲಿಸಿದ್ದಾರೆ: ಕೈ ಶಾಸಕನಿಂದ ಸ್ಫೋಟಕ ಹೇಳಿಕೆ!

ರಾಮನಗರ: ಕೆ.ಎನ್. ರಾಜಣ್ಣ ಈಗಾಗಲೇ ಬಿಜೆಪಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಹೆಚ್.ಸಿ. ಬಾಲಕೃಷ್ಣ ಹೊಸ ಬಾಂಬ್​ ಸಿಡಿಸಿದ್ದಾರೆ. ಕೆ.ಎನ್.ರಾಜಣ್ಣರನ್ನ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲು ಒತ್ತಡ ಹೇರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.

ನನಗಿರುವ ಮಾಹಿತಿ ಪ್ರಕಾರ ಕೆ.ಎನ್.ರಾಜಣ್ಣ ಬಿಜೆಪಿಗೆ ಅರ್ಜಿ ಹಾಕಿದ್ದಾರೆ. ಹೈಕಮಾಂಡ್ ವಿರುದ್ಧ ಮಾತನಾಡಿದ್ದಕ್ಕೆ ಅವರು ವಜಾ ಆಗಿದ್ದಾರೆ. ಹೀಗಾಗಿ ಬೇರೆ ಪಕ್ಷಕ್ಕೆ ಹೋಗುವ ಮುನ್ನ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಿದ್ದಾರೆ.

 ಈಗೇನೋ ದೆಹಲಿಯಲ್ಲಿ ಸಮಾವೇಶ ಮಾಡ್ತಾರಂತೆ ಮಾಡಲಿ. ಕೆ.ಎನ್.ರಾಜಣ್ಣ ಬಿಜೆಪಿಗೆ ಹೋಗ್ತಿದ್ದಾರೋ? ಇಲ್ವೋ? ಅಂತ ಅವರನ್ನೇ ಕೇಳಿ. ಅವರ ಬ್ರೈನ್ ಮ್ಯಾಪಿಂಗ್ ಮಾಡಿಸಿದ್ರೆ ಎಲ್ಲಾ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow