'ಹಾಸ್ಟೆಲ್ ಹುಡುಗರು' ಸಿನಿಮಾ ವಿವಾದ: ನ್ಯಾಯ ನನ್ನ ಪರ ಇದೆ ಎಂದ ನಟಿ ರಮ್ಯಾ

ಮಾರ್ಚ್ 6, 2025 - 16:04
 0  9
'ಹಾಸ್ಟೆಲ್ ಹುಡುಗರು' ಸಿನಿಮಾ ವಿವಾದ: ನ್ಯಾಯ ನನ್ನ ಪರ ಇದೆ ಎಂದ ನಟಿ ರಮ್ಯಾ

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ನಟಿಸಿದ್ದ ರಮ್ಯಾ  ಇಂದು ಚಿತ್ರದ ವಿವಾದಕ್ಕೆ ಸಂಬಂಧಿಸಿದಂತೆ, ಕಮರ್ಷಿಯಲ್ ಕೋರ್ಟ್ ಗೆ ನಟಿ ರಮ್ಯಾ ಆಗಮಿಸಿದ್ದಾರೆ. ಕೋರ್ಟ್ ಗೆ ದಾಖಲೆಗಳನ್ನು ಸಲ್ಲಿಸಲು ಆಗಮಿಸಿದ ರಮ್ಯಾ, ವಕೀಲರ ಸಮೇತ ಕಮರ್ಷಿಯಲ್ ಕೋರ್ಟ್ ಗೆ ಆಗಮಿಸಿದ್ದರು.

ಹಾಸ್ಟೆಲ್ ಗೆ ಹುಡುಗರು ಬೇಕಾಗಿದ್ದಾರೆ ಚಿತ್ರದಲ್ಲಿ ಅನುಮತಿ ಇಲ್ಲದೆ ಪ್ರಚಾರಕ್ಕೆ ನನ್ನ ಪೋಟೋ ಬಳಸಿದ್ದಾರೆ ಎಂದು ಕೋರ್ಟ್ ಮೊರೆ ಹೋಗಿದ್ದರು ರಮ್ಯಾ. ಈ ಬಗ್ಗೆ ನಟಿ ರಮ್ಯಾ ಹೇಳಿಕೆ ನೀಡಿದ್ದಾರೆ. 'ಹಾಸ್ಟೆಲ್ ಹುಡುಗರು ಸಿನಿಮಾ ವಿವಾದದ ವಿಚಾರಕ್ಕೆ ಕೋರ್ಟ್ ಗೆ ಬಂದೆ, ಟ್ರಯಲ್ ನಡೀತಾ ಇದೆ, ಮಾರ್ಚ್ 19 ಕ್ಕೆ ಮತ್ತೆ ಟ್ರಯಲ್ ಇದೆ. ಈಗ ಕೋರ್ಟ್ ಗೆ ದಾಖಲೆ ಕೊಡಲು ಬಂದಿದ್ದೆ. ನನಗೆ ಸಿನಿಮಾ ತಂಡ ಏನು ಮಾತು ಕೊಟ್ಡಿದ್ರೊ ಅದನ್ನ ವಾಪಸ್ ಕೊಡಲಿ' ಎಂದಿದ್ದಾರೆ ನಟಿ ರಮ್ಯಾ. 

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡವು ರಮ್ಯಾ ಅನುಮತಿ ಇಲ್ಲದೇ ಫೋಟೋ, ವಿಡಿಯೋ ಬಳಸಿದ್ದರ ಬಗ್ಗೆ ನಟಿ ಮಾತನಾಡಿ, ಸಿನಿಮಾ ಕುರಿತು ಮಾಡಿಕೊಂಡಿರುವ ಅಗ್ರಿಮೆಂಟ್‌ನಲ್ಲಿ ಸ್ಪಷ್ಟವಾಗಿ ಬರೆದಿದೆ. ನನ್ನ ಒಪ್ಪಿಗೆ ಇಲ್ಲದೇ ಫೋಟೋ ಆಗಲಿ, ವಿಡಿಯೋ ಆಗಲಿ ಬಳಸುವಂತಿಲ್ಲ ಎಂದಿದೆ. ಅದರಂತೆ ಚಿತ್ರದ ನಿರ್ದೇಶಕರು ಕೂಡ ಆಯ್ತು ನಾವು ಬಳಸೋದಿಲ್ಲ ಎಂದಿದ್ದರು.

ಆ ನಂತರ ಸಿನಿಮಾ ರಿಲೀಸ್‌ಗೂ ಮುನ್ನ ಟ್ರೈಲರ್ ಹಾಕಿದ್ದಾರೆ. ಅದರಲ್ಲಿ ನನ್ನ ತುಣುಕನ್ನು ಬಳಸಿದ್ದಾರೆ. ಆದರೆ ಎಲ್ಲೂ ಕ್ಯಾಮಿಯೋ ರೋಲ್ ಮಾಡ್ತಿದ್ದೇನೆ ಅಂತ ಹಾಕಿಯೇ ಇಲ್ಲ. ನಾನೇ ಹೀರೋಯಿನ್ ಎನ್ನುವಂತೆ ಪೋಸ್ಟರ್‌ಗಳನ್ನು ಹಾಕಿದ್ದಾರೆ. ಹೀಗೆ ಮಾಡಿರೋದು ನಿಜಕ್ಕೂ ತಪ್ಪು. ಇದನ್ನು ಕೋರ್ಟ್ ಕೂಡ ಒಪ್ಪಿಕೊಂಡಿದೆ. ಈ ವಿಚಾರದಲ್ಲಿ ನ್ಯಾಯ ನನ್ನ ಪರ ಇದೆ. ಇದಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಕೆಲಸಗಳಿವೆ ಎಂದು ನಟಿ ಮಾತನಾಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow